ಬೀಚಿಂಗ್: ಮುಂದುವರೆಯುತ್ತಿರುವ ದೇಶಗಳಲ್ಲಿ ತ್ಯಾಜ್ಯ ನಿರ್ವಹಣೆ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಎಷ್ಟೇ ಆಧುನಿಕ ತಂತ್ರಜ್ಞಾನ ಬಳಸಿ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ತೆರೆದರೂ ಸಹ ನಿರ್ವಹಣೆ ಅಷ್ಟು ಸುಲಭವಲ್ಲ. ಜನಸಂಖ್ಯೆ ಹೆಚ್ಚಾದಂತೆ ತ್ಯಾಜ್ಯ ಪ್ರಮಾಣವೂ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಇದಕ್ಕಾಗಿ ಚೀನಿಯರು ವಿಶೇಷ ಮಾರ್ಗವನ್ನು ಕಂಡುಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ಚೀನಾದಲ್ಲಿ ತ್ಯಾಜ್ಯ ನಿರ್ವಹಣೆಗೆ ಯಾವುದೇ ಆಧುನಿಕ ತಂತ್ರಜ್ಞಾನ ಬಳಸದೆ ಜಿರಳೆಗಳನ್ನು ಬಳಸಿ ಹಸಿಕಸ ನಿರ್ವಹಣೆ ಮಾಡುತ್ತಾರೆ. ಜಿರಳೆಗಳಿಂದ ಕಸ ನಿರ್ವಹಣೆಯೇ? ಅದು ಹೇಗೆ ಅಂತಾ ಆಲೋಚಿಸುತ್ತಿದ್ದೀರಾ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್...


ಚೀನಾದಲ್ಲಿ ಹಸಿಕಸ ನಿರ್ವಹಣೆಯಲ್ಲಿ ಜಿರಳೆಗಳೇ ಎಕ್ಸ್‌ಪರ್ಟ್ಸ್! ಅತ್ಯಾಧುನಿಕ ತಂತಜ್ಞಾನ ಬಳಸಿ ತ್ಯಾಜ್ಯ ನಿರ್ವಹಣೆ ಮಾಡಲು ಅವಕಾಶವಿದ್ದರೂ, ದುಬಾರಿ ಎಂಬ ಕಾರಣಕ್ಕೆ ಚೀನೀಯರು ಜಿರಳೆಗಳನ್ನು ಬಳಸಿ ತ್ಯಾಜ್ಯ ನಿರ್ವಹಣೆ ಮಾಡುತ್ತಾರೆ. ಅದಕ್ಕಾಗಿಯೇ ಬೃಹತ್ ಪ್ರಮಾಣದಲ್ಲಿ ಜಿರಳೆಗಳನ್ನು ಸಾಕುತ್ತಾರೆ. ಈ ಜಿರಳೆಗಳು ಒಂದು ದಿನಕ್ಕೆ ಬರೋಬ್ಬರಿ 50 ಟನ್ ಗಳಷ್ಟು ಹಸಿ ಕಸವನ್ನು ಅಂದರೆ ಅಡುಗೆಮನೆ ಕಸವನ್ನು ತಿಂದು ಖಾಲಿ ಮಾಡುತ್ತವೆ. 


ಈ ಹಿಂದೆ ಹಂದಿಗಳನ್ನು ಸಾಕಿ, ಅವುಗಳ ಸಹಾಯದಿಂದ ತ್ಯಾಜ್ಯ ನಿರ್ವಹಣೆ ಮಾಡಲಾಗುತ್ತಿತ್ತು. ಆದರೀಗ ಅದನ್ನು ನಿಲ್ಲಿಸಲಾಗಿದೆ. ಅಷ್ಟೇ ಅಲ್ಲ, ಜಿರಳೆಗಳಿಗೆ ಬೇಡಿಕೆ ಹೆಚ್ಚಾಗಿರುವದರಿಂದ ಹಲವರು ಜಿರಳೆ ಸಾಕುವುದನ್ನೇ ಉಪಕಸುಬಾಗಿ ಆರಂಭಿಸಿದ್ದಾರೆ.