Colonial Pipeline Cyber Attack: USನಲ್ಲಿ ಇದುವರೆಗಿನ ಅತಿ ದೊಡ್ಡ ಸೈಬರ್ ದಾಳಿ, Emergency ಘೋಷಿಸಿದ ಬಿಡೆನ್ ಸರ್ಕಾರ
Colonial Pipeline Cyber Attack - ಅಮೆರಿಕದ ವಸಾಹತು ಪೈಪ್‌ಲೈನ್ ಕಂಪನಿಯ ಮೇಲೆ ಸೈಬರ್ ದಾಳಿಯ ನಂತರ, ಜೋ ಬಿಡೆನ್ (Joe Biden) ಆಡಳಿತವು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದೆ. ಈ ರಾನ್ಸಮ್ ವೆಯರ್ ದಾಳಿಯಿಂದಾಗಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಶೇಕಡಾ 2 ರಿಂದ 3 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
ವಾಷಿಂಗ್ಟನ್: Colonial Pipeline Cyber Attack - ಅಮೆರಿಕದ (America) ಅತಿದೊಡ್ಡ ತೈಲ ಪೈಪ್‌ಲೈನ್ ಮೇಲೆ ಸೈಬರ್ ದಾಳಿಯ (Cyber Attack) ನಂತರ ಬಿಡೆನ್ ಆಡಳಿತವು ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಸೈಬರ್ ದಾಳಿಯಿಂದಾಗಿ ದೇಶವು ತುರ್ತು ಪರಿಸ್ಥಿತಿ (Emergency)ಹೇರುತ್ತಿರುವುದು ಇದೇ ಮೊದಲು.
ನಿತ್ಯ 25 ಲಕ್ಷ ಬ್ಯಾರೆಲ್ ಎಣ್ಣೆ ಸಪ್ಲೈ
ಸೈಬರ್ ದಾಳಿಗೆ ಗುರಿಯಾದ ಕಾಲೋನಿಯಲ್ ಪೈಪ್‌ಲೈನ್ ಕಂಪನಿಯು ಪ್ರತಿದಿನ 2.5 ಮಿಲಿಯನ್ ಬ್ಯಾರೆಲ್ ತೈಲವನ್ನು ಪೂರೈಸುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಂದರೆ, ಯುಎಸ್‌ನ ಪೂರ್ವ ಕರಾವಳಿಯುದ್ದಕ್ಕೂ ರಾಜ್ಯಗಳಿಗೆ ಪೈಪ್‌ಲೈನ್ ಮೂಲಕ ಶೇ.45ರಷ್ಟು ಪೆಟ್ರೋಲ್, ಡೀಸೆಲ್ ಮತ್ತು ಇತರ ಅನಿಲಗಳನ್ನು ಪೂರೈಸುವ ಸ್ಥಳ ಇದಾಗಿದೆ ಎಂದರೆ ತಪ್ಪಾಗಲಾರದು ಎಂದು ಅವರು ಹೇಳಿದ್ದಾರೆ.
ತೈಲ ಬೆಲೆಗಳಲ್ಲಿ ಶೇ 2 ರಿಂದ ಶೇ.3 ರಷ್ಟು ಏರಿಕೆಯಾಗುವ ಸಾಧ್ಯತೆ
ಈ ಸೈಬರ್ ದಾಳಿಯಿಂದಾಗಿ ಸೋಮವಾರ ತೈಲ ಬೆಲೆಗಳು ಶೇಕಡಾ 2-3 ರಷ್ಟು ಹೆಚ್ಚಾಗುತ್ತವೆ ಎಂದು ಯುಎಸ್ ಮಾಧ್ಯಮ ವರದಿಗಳಲ್ಲಿ ಹೇಳಲಾಗುತ್ತಿದೆ. ಶೀಘ್ರದಲ್ಲೇ ಅದನ್ನು ಪುನಃಸ್ಥಾಪಿಸದಿದ್ದರೆ, ಅದರ ಪರಿಣಾಮವು ಹೆಚ್ಚು ವ್ಯಾಪಕವಾಗಿ ಹರಡಬಹುದು ಸಾಧ್ಯತೆ ಇದೆ ಎನ್ನಲಾಗಿದೆ. ತಜ್ಞರ ಪ್ರಕಾರ, ಕರೋನಾ ಸಾಂಕ್ರಾಮಿಕದಿಂದ ಈ ಸೈಬರ್ದಾಳಿ (Cyber Attack) ಸಂಭವಿಸಿದೆ ಎನ್ನಲಾಗುತ್ತಿದೆ. ಏಕೆಂದರೆ ಕೊರೊನಾ ಕಾರಣ ಬಹುತೇಕ ಎಂಜಿನಿಯರ್‌ಗಳು ಈ ಸಮಯದಲ್ಲಿ ತಮ್ಮ ತಮ್ಮ ಮನೆಗಳಿಂದಲೇ ಕಂಪ್ಯೂಟರ್ ಮೂಲಕ ಕೆಲಸ ಮಾಡುತ್ತಿದ್ದಾರೆ ಎಂಬುದು ಅವರ ಅಭಿಪ್ರಾಯವಾಗಿದೆ.
ಇದನ್ನೂ ಓದಿ-ಹೊರ ಬಿತ್ತು ಘನಘೋರ ಸತ್ಯ.! ಚೀನಾ ತಯಾರಿಸುತ್ತಿತ್ತು ಕರೋನಾ ವೈರಸ್ ಜೆನೆಟಿಕ್ ಅಸ್ತ್ರ.!
100 ಜಿಬಿ ದತ್ತಾಂಶ ಕದ್ದ ಸೈಬರ್ ಕಳ್ಳರು, ಧಮ್ಕಿ ಕೂಡ ಹಾಕಿದ್ದಾರೆ
ಹಲವು ಅಮೆರಿಕಾದ ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಈ ರಾನ್ಸಮ್ ವೆಯರ್ ದಾಳಿ ಡಾರ್ಕ್ ಸೈಡ್ (Dark Side) ಹೆಸರಿನ ಸೈಬರ್ ಅಪರಾಧಿಗಳ ಗುಂಪು ನಡೆಸಿದೆ ಎನ್ನಲಾಗಿದ್ದು, ಸೈಬರ್ ಕಳ್ಳರು ಸುಮಾರು 100 ಜಿಬಿ ಡೇಟಾ ಕಳ್ಳತನ ನಡೆಸಿದ್ದಾರೆ. ಇದಲ್ಲದೆ ಹ್ಯಾಕರ್ ಗಳು ಕೆಲ ಕಂಪ್ಯೂಟರ್ ಹಾಗೂ ಸರ್ವರ್ ಗಳ ಡೇಟಾ ಲಾಕ್ ಮಾಡಿದ್ದಾರೆ ಹಾಗೂ ಶುಕ್ರವಾರ ಹಣಕ್ಕಾಗಿ ಬೇಡಿಕೆ ಕೂಡ ಇಟ್ಟಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಹಣ ನೀಡದೆ ಹೋದ ಸಂದರ್ಭದಲ್ಲಿ ಈ ತಾವು ಕದ್ದ ದತ್ತಾಂಶವನ್ನು ಇಂಟರ್ನೆಟ್ ಮೇಲೆ ಹಂಚಿಕೊಳ್ಳುವುದಾಗಿ ಅವರು ಬೆದರಿಕೆಯೋಡ್ಡಿದ್ದಾರೆ.
ಇದನ್ನೂ ಓದಿ- Viral Video:Covid-19ನಿಂದ ಭಾರತದ ರಕ್ಷಣೆಗಾಗಿ 'ಓಂ ನಮಃ ಶಿವಾಯ್' ಮಂತ್ರ ಹೇಳಿದ Israel ಜನರು
ನ್ಯೂಯಾರ್ಕ್ ವರೆಗೆ ತೈಲ ಪೂರೈಕೆ
ಇನ್ನೊಂದೆಡೆ ಈ ದಾಳಿಯ ಕುರಿತು ಮಾಹಿತಿ ನೀಡಿರುವ ಕಂಪನಿ, ಸೇವೆಯನ್ನು ಪುನರ್ಸ್ಥಾಪಿಸಲು ಪೊಲೀಸರು, ಸೈಬರ್ ಸುರಕ್ಷಾ ತಜ್ಞರು ಹಾಗೂ ಇಂಧನ ವಿಭಾಗದ ಜೊತೆಗೆ ನಿರಂತರ ಸಂಪರ್ಕ ಹೊಂದಿದೆ ಎಂದು ಹೇಳಿದೆ. ಭಾನುವಾರ ರಾತ್ರಿ ಈ ಕುರಿತು ಹೇಳಿಕೆ ನೀಡಿದ್ದ ಕಂಪನಿ ತೈಲ ಪೂರೈಕೆಯ ನಾಲ್ಕು ಪ್ರಮುಖ ಲೈನ್ ಗಳು ತಮ್ಮ ಕಾರ್ಯ ಸ್ಥಗಿತಗೊಂಡಿವೆ ಹಾಗೂ ಟರ್ಮಿನಲ್ ನಿಂದ ಡಿಲೆವರಿ ಪಾಯಿಂಟ್ ವರೆಗೆ ಎಣ್ಣೆ ಕೊಂಡೊಯ್ಯುವ ಕೆಲ ಸಣ್ಣ ಪುಟ್ಟ ಲೈನ್ ಗಳು ಕಾರ್ಯನಿರ್ವಹಿಸುತ್ತಿವೆ. ಇದೆ ಕಾರಣದಿಂದ ರಿಕವರಿ ಟ್ಯಾಂಕರ್ ಗಳ ಮೂಲಕ ತೈಲ ಹಾಗೂ ಅನಿಲವನ್ನು ನ್ಯೂಯಾರ್ಕ್ ವರೆಗೆ ಸಾಗಿಸಲಾಗುತ್ತಿದೆ ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ-ಭಾರತ ಜಸ್ಟ್ ಮಿಸ್..! ಪ್ರಳಯ ಸದೃಶ್ಯ ಆ ಚೀನಾ ರಾಕೇಟ್ ಅಪ್ಪಳಿಸಿದ್ದೆಲ್ಲಿ ಗೊತ್ತಾ..?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.