ನವದೆಹಲಿ: ಭಾರತೀಯ ಚುನಾವಣೆಗಳ ನ್ಯಾಯೋಚಿತ ಮತ್ತು ಸಮಗ್ರತೆಯ ಬಗ್ಗೆ ವಿಶ್ವಾಸ ಹೊಂದಿದೆಯೆಂದು ಬುಧುವಾರ ಅಮೇರಿಕಾ ಹೇಳಿದೆ. ಚುನಾವಣೆಯಲ್ಲಿ ಯಾರೇ ಗೆಲುವು ಸಾಧಿಸಿದರೂ ಅವರೊಂದಿಗೆ ಕಾರ್ಯನಿರ್ವಹಿಸುವುದಾಗಿ ಹೇಳಿದೆ.


COMMERCIAL BREAK
SCROLL TO CONTINUE READING

"ನಾನು ಅಮೆರಿಕದ ದೃಷ್ಟಿಕೋನದಿಂದ ಹೇಳುತ್ತಿದ್ದೇನೆ, ನಾವು ಭಾರತೀಯ ಚುನಾವಣೆಗಳ ಪ್ರಾಮಾಣಿಕತೆ ಮತ್ತು ಸಮಗ್ರತೆಯ ಬಗ್ಗೆ ತುಂಬಾ ವಿಶ್ವಾಸ ಹೊಂದಿದ್ದೇವೆ. ಅದರ ಫಲಿತಾಂಶವು ಏನೇ ಇರಲಿ ಗೆಲುವು ಸಾಧಿಸುವ ಸರ್ಕಾರದ ಜೊತೆಗೆ ಕಾರ್ಯನಿರ್ವಹಿಸುತ್ತೇವೆ ಎಂದು ರಾಜ್ಯ ಇಲಾಖೆಯ ವಕ್ತಾರ ಮೋರ್ಗಾನ್ ಆರ್ಟಾಗಸ್ ಹೇಳಿದ್ದಾರೆ. ಭಾರತದಲ್ಲಿನ ಚುನಾವಣಾ ಆಯೋಗದ ಸ್ವಾಯತ್ತೆ ಸಮಗ್ರತೆ ಹಿನ್ನಲೆಯಲ್ಲಿ ಇತರ ದೇಶಗಳಂತೆ ಅಮೇರಿಕಾ ತನ್ನ ಚುನಾವಣಾ ವಿಕ್ಷಕರನ್ನು ಭಾರತಕ್ಕೆ ಕಳುಹಿಸಿಕೊಡುವುದಿಲ್ಲ" ಎಂದು ಅಮೇರಿಕಾ ಹೇಳಿದೆ. 


"ನಾವು ಪೂರ್ಣ ಪ್ರಮಾಣದ ಸಂಬಂಧವನ್ನು ಹೊಂದಿದ್ದೇವೆ ಮತ್ತು ಭಾರತೀಯ ಸರ್ಕಾರದೊಂದಿಗೆ ಸಂಪೂರ್ಣ ಸಹಭಾಗಿತ್ವವನ್ನು ಹೊಂದಿದ್ದೇವೆ.ಹಲವಾರು ಬಾರಿ ನಾವು ಭಾರತದ ಕಾರ್ಯತಂತ್ರದ ಪಾಲುದಾರರಾಗಿದ್ದೇವೆ" ಎಂದು ರಾಜ್ಯ ಇಲಾಖೆಯ ವಕ್ತಾರ ಮೋರ್ಗಾನ್ ಆರ್ಟಾಗಸ್ ತಿಳಿಸಿದ್ದಾರೆ. ಭಾರತದ ಚುನಾವಣೆಯೂ ಮಾನವನ ಇತಿಹಾಸದಲ್ಲಿ ಅತಿ ದೊಡ್ಡ ಪ್ರಜಾಪ್ರಭುತ್ವದ ಪ್ರಕ್ರಿಯೆ ಎಂದು ಅಮೆರಿಕಾದ ರಾಜತಾಂತ್ರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.