ನವದೆಹಲಿ: ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ ಮೃತ್ಯುಕಾರಕ ಕರೋನಾ ವೈರಸ್‌ ಅನೇಕ ದೇಶಗಳ ಆರ್ಥಿಕತೆಯ ಮೇಲೂ ತನ್ನ ಪ್ರಭಾವ ಬೀರಿದೆ. ಭಾರತದ ಮಾರುಕಟ್ಟೆಯ ಮೇಲೂ ಇದು ಪರಿಣಾಮ ಬೀರಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ, ಎಲೆಕ್ಟ್ರಾನಿಕ್ ಉತ್ಪನ್ನಗಳ ಬೆಲೆಗಳು ಜಿಗಿಯಲು ಪ್ರಾರಂಭಿಸಿವೆ. ಏತನ್ಮಧ್ಯೆ, ಹಿಂಜರಿತ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು 70 ಲಕ್ಷ ಸ್ಥಳೀಯ ನಿವಾಸಿಗಳಿಗೆ ₹90,000 ನಗದು ಹಣ ನೀಡುವುದಾಗಿ ಹಾಂಕಾಂಗ್ ಸರ್ಕಾರ ಘೋಷಿಸಿದೆ.


COMMERCIAL BREAK
SCROLL TO CONTINUE READING

ಪ್ರತಿ ಖಾಯಂ ನಿವಾಸಿಗೆ 10,000 ಹಾಂಗ್ ಕಾಂಗ್ ಡಾಲರ್ (ಯುಎಸ್ $ 1,280) ಅನುದಾನವನ್ನು ಹಾಂಗ್ ಕಾಂಗ್ ಸರ್ಕಾರ ಬುಧವಾರ ಪ್ರಕಟಿಸಿದೆ. ಹಾಂಗ್ ಕಾಂಗ್‌ನ ಹಣಕಾಸು ಸಚಿವ ಪಾಲ್ ಚಾನ್ ವಾರ್ಷಿಕ ಬಜೆಟ್‌ನಲ್ಲಿ ಜನರಿಗೆ ನಗದು ನೆರವು ಘೋಷಿಸಿದರು.


ದೇಶದಲ್ಲಿ ತಲೆದೋರಿರುವ ಭೀಕರ ಆರ್ಥಿಕ ಬಿಕ್ಕಟ್ಟಿನಿಂದ ದೇಶದ ಜನತೆಯನ್ನು ಮೇಲೆತ್ತಲು 120 ಬಿಲಿಯನ್ ಹಾಂಗ್ ಕಾಂಗ್ ಡಾಲರ್ ಒದಗಿಸಲಾಗಿದೆ ಎಂದು ಹಣಕಾಸು ಸಚಿವರು ಹೇಳಿದರು. ಸುದ್ದಿ ಸಂಸ್ಥೆ ಎಎಫ್‌ಪಿಯ ಸುದ್ದಿಯ ಪ್ರಕಾರ, ಈ ನಗದು ಸಹಾಯಕ್ಕಾಗಿ ಹಾಂಗ್ ಕಾಂಗ್‌ಗೆ 71 ಬಿಲಿಯನ್ ವೆಚ್ಚವಾಗಲಿದೆ. ಆದಾಗ್ಯೂ, ಗ್ರಾಹಕರು ಈ ಹಣವನ್ನು ಮತ್ತೆ ಸ್ಥಳೀಯ ವ್ಯವಹಾರಗಳಲ್ಲಿ ಹೂಡಿಕೆ ಮಾಡುತ್ತಾರೆ, ಇದು ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡುತ್ತದೆ ಎಂದು ಸರ್ಕಾರ ಭಾವಿಸಿದೆ.


ಚೀನಾದಲ್ಲಿ ಕರೋನವೈರಸ್‌ನಿಂದ ಸಾವನ್ನಪ್ಪಿದವರ ಸಂಖ್ಯೆ 2,663 ಕ್ಕೆ ಏರಿದ್ದು, ಸೋಂಕಿಗೆ ತುತ್ತಾದವರ ಸಂಖ್ಯೆ 77,658 ಕ್ಕೆ ಏರಿದೆ. ಕ್ಸಿನ್ಹುವಾ ಪ್ರಕಾರ, ರಾಷ್ಟ್ರೀಯ ಆರೋಗ್ಯ ಆಯೋಗವು ಸೋಮವಾರ, ಚೀನಾದ 31 ಪ್ರಾಂತೀಯ ಮಟ್ಟದ ಪ್ರದೇಶಗಳಿಂದ 508 ಹೊಸ ಪ್ರಕರಣಗಳು ವರದಿಯಾಗಿದೆ ಮತ್ತು 71 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದರು. ಹಾಂಕಾಂಗ್‌ನಲ್ಲಿ 81 ಪ್ರಕರಣಗಳಲ್ಲಿ ಕರೋನಾ ವೈರಸ್ ಇರುವುದು ದೃಢಪಟ್ಟಿದೆ.


ಈ ವೈರಸ್ ಕೇಂದ್ರಬಿಂದುವಾಗಿರುವ ಹುಬೈ ಪ್ರಾಂತ್ಯದಲ್ಲಿ 68 ಜನರು ಸಾವನ್ನಪ್ಪಿದ್ದರೆ, ಇಬ್ಬರು ಶಾಂಡೊಂಗ್‌ನಲ್ಲಿ ಮತ್ತು ಒಬ್ಬರು ಗುವಾಂಗ್‌ಡಾಂಗ್‌ನಲ್ಲಿ ಮೃತಪಟ್ಟರು. ಸೋಮವಾರದ ವೇಳೆಗೆ, ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡವರಲ್ಲಿ ಒಟ್ಟು 27,323 ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಗಂಭೀರ ಪ್ರಕರಣಗಳ ಸಂಖ್ಯೆ 9,126 ಕ್ಕೆ ತಲುಪಿದೆ. ಇನ್ನೂ 2,824 ಜನರು ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಆಯೋಗ ತಿಳಿಸಿದೆ.


ಅದೇ ಸಮಯದಲ್ಲಿ, ಚೀನಾದ ಹೊರಗೆ ಇರಾನ್‌ನಲ್ಲಿ 12, ದಕ್ಷಿಣ ಕೊರಿಯಾದಲ್ಲಿ ಎಂಟು, ಇಟಲಿಯಲ್ಲಿ ಏಳು, ಜಪಾನ್‌ನಲ್ಲಿ ಐದು, ಹಾಂಗ್ ಕಾಂಗ್‌ನಲ್ಲಿ ಇಬ್ಬರು ಸಾವನ್ನಪ್ಪಿದ್ದರೆ, ಫ್ರಾನ್ಸ್, ತೈವಾನ್ ಮತ್ತು ಫಿಲಿಪೈನ್ಸ್‌ನಲ್ಲಿ ತಲಾ ಒಂದು ಸಾವು ಸಂಭವಿಸಿದೆ.