ಜರ್ಮನಿ: ಕೊರೊನಾ ವೈರಸ್ ಸೊಂಕಿನಿಂದ ಉಂಟಾಗುತ್ತಿರುವ ಆರ್ಥಿಕ ಹಾನಿಯಿಂದ ಆಗಾತಕ್ಕೊಳಗಾಗಿರುವ ಜರ್ಮನಿಯ ಹೋಸೆ ರಾಜ್ಯದ ವಿತ್ತ ಸಚಿವ ಥಾಮಸ್ ಶಾಯೇಫರ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಶಾಯೇಫರ್ (54) ಅವರ ಮೃತದೇಹ ಶನಿವಾರ ರೈಲು ಹಳಿಯ ಮೇಲೆ ಪತ್ತೆಯಾಗಿದೆ. ಈ ಕುರಿತು ಹೇಳಿಕೆ ನೀಡಿರುವ ವೈಸ್ ಬಾಡೆನ್ ಪ್ರಾಸಿಕ್ಯೂಟರ್ ಕಚೇರಿ ಸಚಿವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತಪಡಿಸಿದೆ.


COMMERCIAL BREAK
SCROLL TO CONTINUE READING

ಘಟನೆಯ ಕುರಿತಂತೆ ಹೇಳಿಕೆ ನೀಡಿರುವ ಹೋಸೆ ರಾಜ್ಯದ ಮುಖ್ಯಮಂತ್ರಿ ವಾಲ್ಟರ್ ಬಾಫಿಯರ್ "ನಾವು ಆಘಾತಕ್ಕೊಳಗಾಗಿದ್ದೇವೆ. ನಮಗೆ ಇದುವರೆಗೂ ವಿಶ್ವಾಸ ಬರುತ್ತಿಲ್ಲ ಹಾಗೂ ನಾವು ಅತ್ಯಂತ ದುಃಖಿತರಾಗಿದ್ದೇವೆ" ಎಂದು ಹೇಳಿದ್ದಾರೆ. ಹೋಸೆ ಜರ್ಮನಿಯ ಆರ್ಥಿಕ ರಾಜಧಾನಿಯಾಗಿದ್ದು, ಇಲ್ಲಿ ದ್ಯೂಶ್ ಬ್ಯಾಂಕ್ ಹಾಗೂ ಕಾಮರ್ಜ್ ಬ್ಯಾಂಕ್ ನ ಮುಖ್ಯ ಕಚೇರಿಗಳಿವೆ.  ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಕೂಡ ಫ್ರೈನ್ಕಫರ್ಟ್ ನಲ್ಲಿದೆ.


ತಮ್ಮ ರಾಜ್ಯದ ವಿತ್ತ ಸಚಿವರೊಬ್ಬರ ಸಾವಿನಿಂದ ಆಘಾತಕ್ಕೆ ಒಳಗಾಗಿರುವ ಮುಖ್ಯಮಂತ್ರಿ ಬಾಫಿಯರ್, "ಫಿಯೇಫರ್ ಈ ಮಹಾಮಾರಿಯಿಂದ ಉಂಟಾದ ಆರ್ಥಿಕ ಸಂಕಷ್ಟದಿಂದ ಮೇಲೇಳಲು ಕಂಪನಿಗಳು ಹಾಗೂ ಕಾರ್ಮಿಕರ ಸಹಾಯಕ್ಕಾಗಿ ಹಗಲು-ರಾತ್ರಿ ಎನ್ನದೆ ಶ್ರಮಿಸುತ್ತಿದ್ದರು" ಎಂದು ಹೇಳಿದ್ದಾರೆ.


ಚಾನ್ಸಲರ್ ಎಂಜೆಲಾ ಮಾರ್ಕೆಲ್ ಗೆ ನಿಕಟವರಿತ್ಯಾಗಿರುವ ಬಾಫಿಯರ್, "ರಾಜ್ಯದ ಆರ್ಥಿಕ ಸ್ಥಿತಿಯ ಪ್ರತಿ ಅವರು ತುಂಬಾ ಚಿಂತಿತರಾಗಿದ್ದರು ಎಂಬುದನ್ನು ನಾನು ಹೇಳಬಯಸುವೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ನಮಗೆ ಅವರಂತಹ ವ್ಯಕ್ತಿಯ ಅವಶ್ಯಕತೆ ಇತ್ತು" ಎಂದು ಹೇಳಿದ್ದಾರೆ. ಶಾಯೇಫರ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.