ಪ್ರಪಂಚದಲ್ಲಿ ಕರೋನಾ ಸಾಂಕ್ರಾಮಿಕದಿಂದ ಉಂಟಾದ ವಿನಾಶವು ಹಲವು ದಶಕಗಳವರೆಗೆ ಕರಾಳ ನೆನಪಾಗಿ ಉಳಿಯುತ್ತದೆ. ಅದರಿಂದ ಉಂಟಾದ ನಷ್ಟವನ್ನು ಸರಿದೂಗಿಸಲು ಇನ್ನೂ ಬಹಳ ಸಮಯ ತೆಗೆದುಕೊಳ್ಳುತ್ತದೆ. ಕೋವಿಡ್ ಸಾಂಕ್ರಾಮಿಕದ ನಂತರ, ಕೊರೊನಾವೈರಸ್ ಹುಟ್ಟಿಕೊಂಡಿದ್ದು ಎಲ್ಲಿ ಎನ್ನುವ ಬಗ್ಗೆ ತನಿಖೆಗೆ ಇಳಿದಿತ್ತು ಅಮೆರಿಕಾ. ಈ ತನಿಖೆ ಮುಕ್ತಾಯಗೊಂಬಡಿದ್ದು, ಡಿಸೆಂಬರ್ 2 ರಂದು ವರದಿ ಕೂಡಾ ಸಿದ್ದವಾಗಿದೆ.  ಈ ಮೂಲಕ ಕರೋನಾ ವೈರಸ್ ಹುಟ್ಟಿಕೊಳ್ಳಲು, ಹರಡಲು ಕಾರಣ ಯಾರು ಎನ್ನುವುದು ಸ್ಪಷ್ಟವಾಗಿದೆ. 


COMMERCIAL BREAK
SCROLL TO CONTINUE READING

 2 ವರ್ಷಗಳ ತನಿಖೆಯಲ್ಲಿ ಹೊರ ಬಿದ್ದ ಸತ್ಯ : 
ಯುಎಸ್ ನಡೆಸಿದ ಈ ತನಿಖೆಯು 2 ವರ್ಷಗಳ ಕಾಲ ನಡೆಯಿತು. ಸಮಿತಿಯು ತನ್ನ ತನಿಖಾ ವರದಿಯಲ್ಲಿ ಕೋವಿಡ್ -19 ವೈರಸ್ ಚೀನಾದ ವುಹಾನ್‌ನಲ್ಲಿರುವ ಪ್ರಯೋಗಾಲಯದಿಂದ ಹುಟ್ಟಿಕೊಂಡಿದೆ ಎಂಬ ಸಿದ್ಧಾಂತವನ್ನು ಒತ್ತಿ ಹೇಳಿದೆ.  520 ಪುಟಗಳ ವರದಿಯು ಫೆಡರಲ್ ಮತ್ತು ರಾಜ್ಯ ಮಟ್ಟದ ಪ್ರತಿಕ್ರಿಯೆಗಳು, ವೈರಸ್‌ನ ಮೂಲಗಳು ಮತ್ತು ವ್ಯಾಕ್ಸಿನೇಷನ್ ಪ್ರಯತ್ನಗಳ ಬಗ್ಗೆ ಪರಿಶೀಲಿಸಿದೆ.


ಇದನ್ನೂ ಓದಿ: ಪ್ರಧಾನಿ ಮೋದಿ ಪಕ್ಕದಲ್ಲಿರುವ ಲೇಡಿ ಕಮಾಂಡೋ ನಿಜಕ್ಕೂ ಯಾರು ಗೊತ್ತೇ? ಅಸಲಿ ವಿಚಾರ ಗೊತ್ತಾದರೇ ಶಾಕ್‌ ಆಗುತ್ತೀರಾ!!


10 ಲಕ್ಷ ದಾಖಲೆಗಳ ಪರಿಶೀಲನೆ : 
COVID-19 ಗೆ ಕಾರಣವಾದ SARS-CoV-2 ವೈರಸ್ ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಿಂದ ಹುಟ್ಟಿಕೊಂಡಿದೆ ಎನ್ನುವುದನ್ನು ಈ ವರದಿಯು ಒಪ್ಪಿಕೊಂಡಿದೆ.  AFP ಪ್ರಕಾರ, ಸಮಿತಿಯು 25 ಸಭೆಗಳು, 30ಕ್ಕೂ ಹೆಚ್ಚು ಸಂದರ್ಶನಗಳು ಮತ್ತು 1 ಮಿಲಿಯನ್‌ಗಿಂತಲೂ ಹೆಚ್ಚು ದಾಖಲೆಗಳನ್ನು ಪರಿಶೀಲಿಸಿದ ನಂತರ ಈ ತೀರ್ಮಾನಕ್ಕೆ ಬಂದಿದೆ.   
 
ತನಿಖೆಯು ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷರ ಮಾಜಿ ಮುಖ್ಯ ವೈದ್ಯಕೀಯ ಸಲಹೆಗಾರ ಡಾ. ಆಂಥೋನಿ ಫೌಸಿಯವರ ಹೇಳಿಕೆಯನ್ನು ಕೂಡಾ ಸಾಕ್ಷ್ವಾಗಿ ಬಳಸಲಾಗಿತ್ತು.  ರಿಪಬ್ಲಿಕನ್ನರು 83 ವರ್ಷದ ರೋಗನಿರೋಧಕ ತಜ್ಞರನ್ನು ಸಾಂಕ್ರಾಮಿಕ ರೋಗ ಕಾರಣಕರ್ತ ಎಂದು ದೂಷಿಸಿದ್ದು, ಅವರು ವೈರಸ್ ಅನ್ನು ಸೃಷ್ಟಿಸಿದ ಚೀನಾದ ವಿಜ್ಞಾನಿಗಳಿಗೆ ಧನಸಹಾಯ ಮಾಡಿದ್ದಾರೆ ಎಂದು ಆರೋಪಿಸಿದರು. ಆದರೆ ಫೌಸಿ ಈ ಆರೋಪಗಳನ್ನು ನಿರಾಕರಿಸಿದರು.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


ಇದಲ್ಲದೆ, ಈ ವರದಿಯಲ್ಲಿ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಸಾಕಾಗುವುದಿಲ್ಲ ಎಂದು ಹೇಳಲಾಗಿದೆ. ಅಲ್ಲದೆ ಲಾಕ್‌ಡೌನ್ ಹೇರಿಕೆಯನ್ನು ಕೂಡಾ ಟೀಕಿಸಲಾಗಿದೆ. ಟ್ರಂಪ್ ಅವರ ಅಧಿಕಾರಾವಧಿಯಲ್ಲಿ ಲಸಿಕೆಯ ತ್ವರಿತ ಆವಿಷ್ಕಾರವು ಅದ್ಭುತ ಯಶಸ್ಸು ಎಂದು ಹೇಳಲಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ