ಬಿಜಿಂಗ್: Coronavirus New Strain - ಚೀನಾದ (China) ಗ್ವಾಂಗ್ಝೂ  ಪ್ರಾಂತ್ಯದಲ್ಲಿ ಜನರನ್ನು ಮನೆಯಲ್ಲಿಯೇ ಇರುವಂತೆ ಮಾಡಲು ಹಾಗೂ ಹೊರ ಹೋಗುವಾಗ ಮಾಸ್ಕ್ ಧರಿಸುವುದನ್ನು ನೆನಪಿಸಿ ಕೊಡಲು 60 ಡ್ರೋನ್ ಗಳನ್ನು ನಿಯೋಜಿಸಲಾಗಿದೆ. ಚೀನಾದಲ್ಲಿ ಸ್ಥಳೀಯ ಕೊವಿಡ್ 19 (Covid-19) ಸೋಂಕಿನ ಪ್ರಕರಣಗಳ ಮೇಲೆ ಸಾಕಷ್ಟು ಹಿಡಿತ ಸಾಧಿಸಲಾಗಿದೆ. ಆದರೆ, ಗ್ವಾಂಗ್ಝೂ  ಪ್ರಾಂತ್ಯದಲ್ಲಿ ಕೊರೊನಾ ವೈರಸ್ ನ ಅತ್ಯಧಿಕ ಸಾಂಕ್ರಾಮಿಕ ರೂಪಾಂತರಿಯ ಪ್ರಕರಣಗಳು ಇದೀಗ ಹೆಚ್ಚಾಗತೊಡಗಿವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-G7 virtual summit: ಒಂದು ಭೂಮಿ, ಒಂದು ಆರೋಗ್ಯ ಮಂತ್ರದ ಪರವಾಗಿ ಮೋದಿ ಬ್ಯಾಟಿಂಗ್


ಗ್ವಾಂಗ್ಝೂನಲ್ಲಿ ಕಟ್ಟೆಚ್ಚರ
ಗ್ವಾಂಗ್ಝೂನಲ್ಲಿ (China) ಕಳೆದ 24 ಗಂಟೆಗಳಲ್ಲಿ ಹೊಸ ಪ್ರಕರಣಗಳು ದಾಖಲಾಗಿವೆ. ಇದರಿಂದ ಸೋಂಕಿನ ಹೊಸ ರೂಪಾಂತರಿಯ ಪ್ರಕರಣಗಳ ಸಂಖ್ಯೆ 100ಕ್ಕೆ ಏರಿಕೆಯಾಗಿದೆ. ಪೊಲೀಸರು ಕ್ಯಾಮರಾ ಹೊಂದಿರುವ ಡ್ರೋನ್ (Drones) ಗಳನ್ನು ನಿಯೋಜಿಸಿ, ಮನೆಯಿಂದ ಹೊರಹೋಗುವ ಜನರಿಗೆ ಸಂದೇಶ ನೀಡಿದ್ದಾರೆ. ನಗರದಲ್ಲಿ ಜನರ ಆರೋಗ್ಯದ ಮಾಹಿತಿ ಪಡೆದುಕೊಳ್ಳಲು, ತಾಪಮಾನ ಅಳೆಯಲು ಹಾಗೂ ಸೋಂಕಿನ ಅಧಿಕ ಶಂಕೆ ಇರುವ ಪ್ರದೇಶಗಳಲ್ಲಿ ಯಾತ್ರೆ ನಡೆಸುವ ಜನರನ್ನು ಐಸೊಲೆಶನ್ ಮಾಡುವಂತಹ ಕ್ರಮಗಳ ಮೂಲಕ ಲಕ್ಷ ಕೇಂದ್ರೀಕರಿಸಲಾಗಿದೆ.


ಇದನ್ನೂ ಓದಿ-ಬಾವಲಿಗಳಲ್ಲಿ ಹೊಸ ಕೊರೊನಾ ಪತ್ತೆ ಹಚ್ಚಿದ ಚೀನಾ ಸಂಶೋಧಕರು


ಅಲೆದಾಟದ ಮೇಲೆ ನಿರ್ಬಂಧ
ಚೀನಾದ ಗ್ವಾಂಗ್ಝೂ ಪ್ರಾಂತ್ಯದಲ್ಲಿ ಭಾರತದಲ್ಲಿ ಕಂಡು ಬಂದ ಕೊರೊನಾ ವೈರಸ್ ನ ಹೊಸ ರೂಪಾಂತರಿ ಪತ್ತಿಯಾಗಿದೆ ಎಂದು ಚೀನಾ ಹೇಳಿಕೊಂಡಿದೆ. ಹೀಗಾಗಿ ಗ್ವಾಂಗ್ಝೂ ನಗರದಿಂದ ಹಲವು ನಗರಗಳು ತನ್ನನ್ನು ತಾನು ಬೇರ್ಪಡಿಸಿಕೊಂಡಿವೆ. ನಗರ ಹಾಗೂ ಅಕ್ಕಪಕ್ಕದ ಪ್ರದೇಶಗಳಿಂದ ಜನರನ್ನು ಪಾಂತ್ಯದ ಹೊರಹೋಗುವಿಕೆಯ ಮೇಲೆ ನಿರ್ಬಂಧ ವಿಧಿಸಲಾಗಿದೆ. ಪ್ರಾಂತ್ಯದಲ್ಲಿರುವ ಸಿನೆಮಾ ಹಾಲ್, ಮಾಲ್ ಹಾಗೂ ಇತರೆ ಮನರಂಜನಾ ಸ್ಥಳಗಳನ್ನು ಬಂದ್ ಮಾಡಲಾಗಿದೆ.


ಇದನ್ನೂ ಓದಿ-Narendra Modi ಸರ್ಕಾರದ ಹೊಸ ದಾಖಲೆ, ಈ ವಿಷಯದಲ್ಲಿ US ಹಿಂದಿಕ್ಕಿ 5ನೇ ಅತಿ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದ ಭಾರತ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.