ಕೊರೋನಾ ವೈರಸ್ ಹರಡುವಿಕೆಯನ್ನು ಸಾಂಕ್ರಾಮಿಕ ಎಂದು ಘೋಷಿಸಿದ ವಿಶ್ವ ಆರೋಗ್ಯ ಸಂಸ್ಥೆ
ಜಾಗತಿಕವಾಗಿ ಕೊರೊನಾವೈರಸ್ ಭೀತಿ ಹೆಚ್ಚುತ್ತಿರುವ ಬೆನ್ನಲ್ಲೇ ಈಗ ವಿಶ್ವ ಆರೋಗ್ಯ ಸಂಸ್ಥೆ ಈಗ ಇದನ್ನು ಸಾಂಕ್ರಾಮಿಕ ಎಂದು ಘೋಷಿಸಿದೆ.
ನವದೆಹಲಿ: ಜಾಗತಿಕವಾಗಿ ಕೊರೊನಾವೈರಸ್ ಭೀತಿ ಹೆಚ್ಚುತ್ತಿರುವ ಬೆನ್ನಲ್ಲೇ ಈಗ ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಸಾಂಕ್ರಾಮಿಕ ಎಂದು ಘೋಷಿಸಿದೆ.
ಈ ವಿಚಾರವಾಗಿ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಕಳೆದ ಎರಡು ವಾರಗಳಲ್ಲಿ ಚೀನಾದ ಹೊರಗಿನ ಪ್ರಕರಣಗಳ ಸಂಖ್ಯೆ 13 ಪಟ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಈ ವೈರಸ್ ಮೇಲೆ ಆತಂಕಕಾರಿಯಾದ ನಿಷ್ಕ್ರಿಯತೆಗೆ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಸಾಂಕ್ರಾಮಿಕ ರೋಗವು ಒಂದೇ ಸಮಯದಲ್ಲಿ ಪ್ರಪಂಚದ ಅನೇಕ ದೇಶಗಳಲ್ಲಿ ಹರಡುವ ರೋಗವಾಗಿದೆ.ಆದಾಗ್ಯೂ, ಕೊರೊನಾ ವೈರಸ್ ಸಾಂಕ್ರಾಮಿಕ ಎಂದು ಕರೆಯುವುದರಿಂದ ದೇಶಗಳು ಏನು ಮಾಡಬೇಕೆಂಬುದರ ಬಗ್ಗೆ WHO ತನ್ನ ಸಲಹೆಯನ್ನು ಬದಲಾಯಿಸುತ್ತಿದೆ ಎಂದರ್ಥವಲ್ಲ ಎಂದು ಡಾ ಟೆಡ್ರೊಸ್ ಹೇಳಿದರು. ಈಗ ತುರ್ತು ಮತ್ತು ಆಕ್ರಮಣಕಾರಿ ಕ್ರಮ ತೆಗೆದುಕೊಳ್ಳುವ ಮೂಲಕ ಕೊರೊನಾ ವೈರಸ್ ಹಾದಿಯನ್ನು ಬದಲಾಯಿಸುವಂತೆ ಅವರು ಸರ್ಕಾರಗಳಿಗೆ ಕರೆ ನೀಡಿದರು.
ಈಗಾಗಲೇ ಹಲವಾರು ದೇಶಗಳು "ಈ ವೈರಸ್ ಅನ್ನು ನಿಗ್ರಹಿಸಬಹುದು ಮತ್ತು ನಿಯಂತ್ರಿಸಬಹುದು ಎಂದು ಸಾಬೀತುಪಡಿಸಿವೆ ಎಂದು ಅವರು ಹೇಳಿದರು. ಸರ್ಕಾರಗಳು ಆರೋಗ್ಯವನ್ನು ರಕ್ಷಿಸುವುದು, ಅಡ್ಡಿಪಡಿಸುವಿಕೆಯನ್ನು ಕಡಿಮೆ ಮಾಡುವುದು ಮತ್ತು ಮಾನವ ಜೀವನವನ್ನು ಗೌರವಿಸುವುದರ ನಡುವೆ ಉತ್ತಮ ಸಮತೋಲನವನ್ನು ಸಾಧಿಸಬೇಕಾಗಿತ್ತು ಎಂದು ಅವರು ಹೇಳಿದರು.