ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ವೈರಸ್ ವಿರುದ್ಧ ಸಮರವನ್ನೇ ಸಾರಿದ್ದಾರೆ. ಈ ಕುರಿತು ಮಾತನಾಡಿದ್ದ ಅವರು, ಮಹಾಭಾರತದ ಯುದ್ಧವನ್ನು ಕೇವಲ 18ದಿನಗಳಲ್ಲಿ ಗೆಲ್ಲಲಾಗಿತ್ತು. ಅದೇ, ರೀತಿ 21 ದಿನಗಳ ಬಳಿಕ ಕೊರೊನಾ ವೈರಸ್ ವಿರುದ್ಧ ಸಾರಿರುವ ನಿರ್ಣಾಯಕ ಯುದ್ಧದಲ್ಲಿ ಗೆಲುವು ಸಾಧಿಸಲಾಗುವುದು ಎಂದು ಘೋಷಿಸಿದ್ದಾರೆ. ಇದೇ ವೇಳೆ  ವಿಪತ್ತಿನ ಈ ಸಂದರ್ಭದಲ್ಲಿ ಈ ಯುದ್ಧದಲ್ಲಿ ಹೋರಾಟ ನಡೆಸುತ್ತಿರುವ ಕೊರೊನಾ ವಿರರಿಗಾಗಿ ದೇಶದ ನಾಗರಿಕರಲ್ಲಿ ಮನವಿ ಕೂಡ ಅವರು ಮಾಡಿದ್ದರು.


COMMERCIAL BREAK
SCROLL TO CONTINUE READING

ಈ ಸಂದರ್ಭದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಈ ಯುದ್ಧದಲ್ಲಿ ಕೊರೊನಾ ವೈರಸ್ ವಿರುದ್ಧ ಸತತ ಹೋರಾಟ ನಡೆಸುತ್ತಿರುವ ವೈದ್ಯರು, ನರ್ಸ್ ಸೇರಿದಂತೆ ಆರೋಗ್ಯ ಸೇವೆ ಹಾಗೂ ಇತೆರ ಅವಶ್ಯಕ ಸೌಕರ್ಯಗಳನ್ನು ಒದಗಿಸುವ ಜನರಿಗಾಗಿ ತಮ್ಮ ಮನೆಯ ಮಹಡಿಯ ಮೂಲಕ, ಬಾಲ್ಕನಿಗಳ ಮೂಲಕ 'ಚಪ್ಪಾಳೆ' ಬಾರಿಸುವ ಮೂಲಕ, ತಟ್ಟೆ/ಶಂಖ ಬಾರಿಸುವ ಮೂಲಕ ಕೃತಜ್ಞತೆಗಳನ್ನು ಸಲ್ಲಿಸಲು ದೇಶದ ನಾಗರಿಕರಿಗೆ ಮನವಿ ಮಾಡಿ ಅವರಿಗಾಗಿ ಪ್ರಾರ್ಥನೆ ಸಲ್ಲಿಸಲು ಕೋರಿದ್ದರು ಮತ್ತು ಇದು ಅವರಲ್ಲಿ ಇನ್ನಷ್ಟು ಉತ್ಸಾಹ ತುಂಬಲಿದೆ ಎಂದು ಹೇಳಿದ್ದರು. ಆದರೆ, ಅವರೇ ಈ ಮನವಿಯನ್ನು ಹಲವರು ಗೇಲಿ ಮಾಡಿದ್ದರು ಮತ್ತು ಟೀಕಿಸಿದ್ದರು. ಆದರೆ, ಪ್ರಧಾನಿ ಮೋದಿ ಅವರ ಈ ಮನವಿ ವಿಶ್ವಾಧ್ಯಂತ ತನ್ನ ಪ್ರಭಾವ ಬೀರಲಾರಂಭಿಸಿದೆ.  ವಿಶ್ವಾದ್ಯಂತ ಹಲವು ದೇಶಗಳಲ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸುತ್ತಿರುವ ಜನರಿಗೆ ಅಭಿನಂದನೆ ಸಲ್ಲಿಸಲು ಅಲ್ಲಿನ ನಾಗರಿಕರು 'ಚಪ್ಪಾಳೆ ತಟ್ಟುತ್ತಿದ್ದಾರೆ.


ಈ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ದೇಶ ಬ್ರಿಟನ್. ಹೌದು, ಸದ್ಯ ಕೊರೊನಾ ವೈರಸ್ ನ ವಿಪತ್ತಿನಿಂದ ವಿರುದ್ಧ ಬ್ರಿಟನ್ ಹೋರಾಟ ನಡೆಸುತ್ತಿದೆ. ಈ ಮಧ್ಯೆ ಸಂಕಷ್ಟದ ಈ ಪರಿಸ್ಥಿತಿಯಲ್ಲಿ ಆರೋಗ್ಯ ಸೇವೆ ಒದಗಿಸುವವರಿಗೆ ಅಭಿನಂದನೆ ಸಲ್ಲಿಸಲು ಮಾರ್ಚ್ 26ರಂದು  ಸಂಪೂರ್ಣ ಬ್ರಿಟನ್ ಜನರು ಚಪ್ಪಾಳೆ ತಟ್ಟುವ ಮೂಲಕ ಅವರನ್ನು ಶ್ಲಾಘಿಸಿದ್ದಾರೆ. ಈ ವೇಳೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಜೊತೆ ಭಾರತೀಯ ಮೂಲದ ವಿತ್ತ ಸಚಿವ ರಿಷಿ ಸುನಕ್ ಕೂಡ 10 ಡೌವ್ನಿಂಗ್ ಸ್ಟ್ರೀಟ್ ಹೊರಗೆ ನಿಂತು ಚಪ್ಪಾಳೆ ತಟ್ಟುವ ಮೂಲಕ ಈ ಯುದ್ಧದಲ್ಲಿ ನಿರತರಾಗಿರುವವರನ್ನು ಪ್ರೋತ್ಸಾಹಿಸಿದ್ದಾರೆ. ಭಾರತದಲ್ಲಿ ಸಾಮಾಜಿಕ ಮಾಧ್ಯಮಗಳ ಮೇಲೆ #Taali ಶಬ್ದ ಟ್ರೆಂಡ್ ಸೃಷ್ಟಿಸಿದ್ದರೇ, ಬ್ರಿಟನ್ ನಲ್ಲಿ #clapforourcarers ಸದ್ಯ ಟ್ರೆಂಡ್ ಮಾಡುತ್ತಿದೆ.


ಕೊರೊನಾ ವೈರಸ್ ಸೋಂಕಿಗೆ ಇದುವರೆಗೆ ಬ್ರಿಟನ್ ನಲ್ಲಿ ಇದುವರೆಗೆ ಸುಮಾರು 400 ಜನರು ಪ್ರಾಣ ಕಳೆದುಕೊಂಡಿದ್ದು, 800೦ ಕ್ಕೂ ಅಧಿಕ ಜನರು ಈ ಮಾರಕ ಸೋಂಕಿನ ವಿರುದ್ಧ ಸಾವು-ನೋವಿನ ಹೋರಾಟ ನಡೆಸುತ್ತಿದ್ದಾರೆ. ಅಲ್ಲಿನ ರಾಜಮನೆತನದ ಸದಸ್ಯರಾಗಿರುವ ಪ್ರಿನ್ಸ್ ಚಾರ್ಲ್ಸ್ ಕೂಡ ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನಿ ಬೋರಿಸ್ ಜಾನ್ಸನ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಗೆ ಒತ್ತು ನೀಡಲು ಕಾರ್ಯತತ್ಪರರಾಗಿದ್ದಾರೆ. ಸದ್ಯ ಬ್ರಿಟನ್ ನಲ್ಲಿ ಕ್ಯಾಫೆ, ಪಬ್, ಬಾರ್, ರೆಸ್ಟೋರೆಂಟ್, ನೈಟ್ ಕ್ಲಬ್, ಥಿಯೆಟರ್, ಸಿನಿಮಾ ಹಾಲ್, ಜಿಮ್ ಹಾಗೂ ಉಪಹಾರಗ್ರಹಗಳನ್ನು ಬಂದ್ ಮಾಡಲು ಆದೇಶಿಸಲಾಗಿದೆ.