ಸ್ಟಾಕ್ ಹೋಮ್:ಕೊರೊನಾ ವೈರಸ್ ನಿಂದ ಪಾರಾಗಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯವಾಗಿದೆ ಹಾಗೂ ಜನರು ಅದರ ಪಾಲನೆ ಕೂಡ ಮಾಡುತ್ತಿದ್ದಾರೆ. ಆದರೆ, ಸ್ವೀಡನ್ ನಲ್ಲಿರುವ ಒಂದು ರೆಸ್ಟಾರೆಂಟ್ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯ ಒಂದು ಉತ್ತಮ ಉದಾಹರಣೆ ಪ್ರಸ್ತುತಪಡಿಸುತ್ತಿದೆ. ಈ ರೆಸ್ಟಾರೆಂಟ್ ಹೆಸರು 'ಟೇಬಲ್ ಫಾರ್ ಒನ್'. ಹೆಸರಿಗೆ ತಕ್ಕಂತೆ ಈ ರೆಸ್ಟಾರೆಂಟ್ ನಲ್ಲಿ ಒಂದು ಬಾರಿಗೆ ಓರ್ವ ವ್ಯಕ್ತಿ ಮಾತ್ರ ಕುಳಿತುಕೊಳ್ಳಬಹುದು. ರೆಸ್ಟಾರೆಂಟ್ ನ ಈ ಸೃಜನಶೀಲತೆ ಕೇವಲ ಇದಕ್ಕೆ ಮಾತ್ರ ಸೀಮಿತವಾಗಿಲ್ಲ. ಇದರಲ್ಲಿನ ಆಸನ ವ್ಯವಸ್ಥೆ ಯಾವುದೇ ಒಂದು ಕೊನೆಯಲ್ಲಿ ಮಾಡಲಾಗಿಲ್ಲ. ಇಲ್ಲಿ ಬಯಲು ಮೈದಾನದಲ್ಲಿ ಆಸನದ ವ್ಯವಸ್ಥೆ ಮಾಡಲಾಗಿದೆ. ಅಂದರೆ, ಇಲ್ಲಿ ಪ್ರಕೃತಿಯ ಮಡಿಲಲ್ಲಿ ಕುಳಿತು ನೀವು ಇಲ್ಲಿನ ಪದಾರ್ಥಗಳನ್ನು ಆಸ್ವಾದಿಸಬಹುದು.


COMMERCIAL BREAK
SCROLL TO CONTINUE READING

ಅಷ್ಟೇ ಯಾಕೆ ಗ್ರಾಹಕರು ಆರ್ಡರ್ ಮಾಡುವ ತಿನಸುಗಳನ್ನು ಅವರ ಟೇಬಲ್ ಗೆ ತಲುಪಿಸುವ ವ್ಯವಸ್ಥೆ ಕೂಡ ಇಲ್ಲಿ ವಿಶಿಷ್ಟವಾಗಿದೆ. ಹೌದು, ಇಲ್ಲಿನ ಕಿಚನ್ ನಿಂದ ಗ್ರಾಹಕರ ಟೇಬಲ್ ವರೆಗೆ ಒಂದು ಹಗ್ಗವನ್ನು ತೂಗು ಹಾಕಲಾಗಿದೆ. ಈ ಹಗ್ಗಕ್ಕೆ ಒಂದು ಬಕೆಟ್ ಅನ್ನು ತೂಗು ಹಾಕಲಾಗಿದೆ. ಕಿಚನ್ ನಲ್ಲಿ ಆಹಾರ ಸಿದ್ಧವಾದ ಬಳಿಕ ಅದನ್ನು ಬಕೆಟ್ ನಲ್ಲಿ ಇತ್ತು ಹಗ್ಗದ ಸಹಾಯದಿಂದ ಗ್ರಾಹಕರಿಗೆ ತಲುಪಿಸಲಾಗುತ್ತದೆ. ಆದರೆ, ಇದುವರೆಗೆ ಈ ರೆಸ್ಟೋರೆಂಟ್ ನ ಅಧಿಕೃತ ಉದ್ಘಾಟನೆಯಾಗಿಲ್ಲ. ಸ್ವೀಡಿಶ್ ಜೋಡಿ ರೈಸ್ ಮಸ್ ಪರ್ಸನ್ ಹಾಗೂ ಲಿಂಡಾ ಕಾರ್ಲ್ ಸನ್ ಈ ರೆಸ್ಟೋರೆಂಟ್ ನ ಉದ್ಘಾಟನೆಯ ತಯಾರಿಯಲ್ಲಿ ತೊಡಗಿದ್ದಾರೆ ಹಾಗೂ ಮೇ 10ನೇ ತಾರೀಖಿಗೆ ಈ ಹೋಟೆಲ್ ಉದ್ಘಾಟನೆಯಾಗಲಿದೆ.


ತಮ್ಮ ಪೋಷಕರ ಜೊತೆಗೆ ಊಟಕ್ಕೆ ಕುಳಿತುಕೊಂಡಾಗ ರೈಸ್ ಮನ್ ಹಾಗೂ ಲಿಂಡಾ ಅವರಿಗೆ ಈ ರೀತಿಯ ರೆಸ್ಟೋರೆಂಟ್ ನ ಪರಿಕಲ್ಪನೆ ಮೂಡಿದೆ. ಕೆಲ ದಿನಗಳ ನಿಂದೆ ರೈಸ್ ಮನ್ ಅವರ ಅತ್ತೆ ಮತ್ತು ಮಾವ ಅವರ ಮನೆಗೆ ಲಂಚ್ ಮಾಡಲು ಬಂದಿದ್ದರು. ಈ ಸಂದರ್ಭದಲ್ಲಿ ಅವರ ಈ ಗಳಿಗೆಯನ್ನು ವಿಶಿಷ್ಟವಾಗಿಸಲು  ತಮ್ಮ ಮನೆಯ ಕಾರ್ಡನ್ ನಲ್ಲಿ ಅವರ ಟೇಬಲ್ ಅನ್ನು ಅಲಂಕರಿಸಿದ್ದರು. ತಾಜಾ ಗಾಳಿಯ ನಡುವೆ ಊಟದ ಅನುಭವ ನೀಡುವುದು ಇದರ ಹಿಂದಿನ ಉದ್ದೇಶವಾಗಿತ್ತು. ಈ ವೇಳೆ ಕಿಚನ್ ನ ಕಿಟಕಿಯಿಂದ ಅವರಿಗೆ ಊಟ ಬಡಿಸುವಾಗ ಈ ರೆಸ್ಟೋರೆಂಟ್ ಪರಿಕಲ್ಪನೆ ಮೂಡಿದೆ. ಆ ಬಳಿಕ ಉಭಾಯರು ತಮ್ಮ ಈ ಪರಿಕಲ್ಪನೆಯನ್ನು ನಿಜ ಜೀವನಕ್ಕೆ ಇಳಿಸಿದ್ದಾರೆ.


ತಮ್ಮ ಈ ರೆಸ್ಟೋರೆಂಟ್ ಕುರಿತು ಮಾತನಾಡುವ ಲಿಂಡಾ ತಮ್ಮ ಈ ರೆಸ್ಟೋರೆಂಟ್ ಕೊವಿಡ್ 19 ನಿಂದ ಸಂಪೂರ್ಣ ಸುರಕ್ಷತೆ ನೀಡುವ ಏಕಮಾತ್ರ ರೆಸ್ಟೋರೆಂಟ್ ಆಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ತಮ್ಮ ರೆಸ್ಟೋರೆಂಟ್ ನಲ್ಲಿ ಸ್ವಚ್ಚತೆಯ ಕುರಿತು ವಿಶೇಷ ಕಾಳಜಿ ವಹಿಸಲಾಗುವುದು ಎಂದು ಹೇಳಿರುವ ಅವರು, ಊಟದ ಟೇಬಲ್ ಅನ್ನು ದಿನದಲ್ಲಿ ಎರಡು ಬಾರಿ ಸ್ಯಾನೆಟೈಸ್ ಮಾಡಲಾಗುತ್ತದೆ ಹಾಗೂ ಪಾತ್ರೆಗಳನ್ನೂ ಕೂಡ ಎರಡು ಬಾರಿ ಸ್ವಚ್ಛಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ.