Coronavirus Latest News - ಕರೋನಾ ವೈರಸ್‌ನ ಮೂರನೇ ಅಲೆಯ (Coronavirus Third Wave) ಸಾಧ್ಯತೆಯ ಅಪಾಯಗಳ ವಿರುದ್ಧ ಹೋರಾಡುತ್ತಿರುವ ಭಾರತವು, ಎರಡನೇ ಕರೋನ ಅಲೆಯ (Coronavirus Second Wave) ಭೀಕರ ರೂಪವನ್ನು ಕಂಡಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಸಾವುಗಳು ಸಂಭವಿಸಿದ್ದರೂ, ಯುಎಸ್ ವರದಿಯು ಇದಕ್ಕಿಂತ 10 ಪಟ್ಟು ಹೆಚ್ಚು  ಸಾವುಗಳನ್ನು ವರದಿ ಮಾಡಿದೆ. ಭಾರತದಲ್ಲಿ ಕರೋನಾ ಸಾಂಕ್ರಾಮಿಕ (Corona Pandemic) ರೋಗದಿಂದಾಗಿ 34 ರಿಂದ 47 ಲಕ್ಷ ಸಾವುಗಳು ಸಂಭವಿಸಿವೆ ಎಂದು ಅಮೆರಿಕದ ಒಂದು ಸಂಶೋಧನಾ ಗುಂಪು ವರದಿ ಮಾಡಿದೆ. ಇದು ಕೇಂದ್ರ ಸರ್ಕಾರದ ನೀಡಿರುವ ಅಂಕಿಅಂಶಗಳಿಗಿಂತ ಸುಮಾರು 10 ಪಟ್ಟು ಹೆಚ್ಚಾಗಿದೆ.


COMMERCIAL BREAK
SCROLL TO CONTINUE READING

ಆರೋಗ್ಯ ಸಚಿವಾಲಯದ (Union Health Ministry) ಪ್ರಕಾರ, ಭಾರತದಲ್ಲಿ ಇದುವರೆಗೆ 4,14,482 ಜನರು ಕರೋನಾದಿಂದ ಸಾವನ್ನಪ್ಪಿದ್ದು, ಭಾರತ ವಿಶ್ವದ ಮೂರನೇ ಸ್ಥಾನದಲ್ಲಿದೆ. ಇದೆ ವೇಳೆ, ಅಮೆರಿಕಾದಲ್ಲಿ 609000 ಮತ್ತು ಬ್ರೆಜಿಲ್ನಲ್ಲಿ 542000 ಸಾವುಗಳು ಸಂಭವಿಸಿವೆ. ಅಮೇರಿಕನ್ ಸ್ಟಡಿ ಗ್ರೂಪ್ ಆಫ್ ಗ್ಲೋಬಲ್ ಡೆವಲಪ್‌ಮೆಂಟ್‌ನ (US Study Group Of Global Development) ವರದಿಯಲ್ಲಿ ಮಂಡಿಸಲಾಗಿರುವ ಹಕ್ಕು ಇದುವರೆಗೆ ಯಾವುದೇ ಸಂಘಟನೆ ಉಲ್ಲೇಖಿಸಿರುವ ಅಂಕಿ-ಸಂಖ್ಯೆಗಿಂತ ಹೆಚ್ಚಾಗಿದೆ.


ಇದನ್ನೂ ಓದಿ-Nuclear Crisis: ಪರಮಾಣು ದಾಳಿಗೆ ಸಿದ್ಧತೆ ನಡೆಸುತ್ತಿದೆಯೇ ಚೀನಾ?


ಕೊರೊನಾದಿಂದ ಮೃತಪಟ್ಟವರ ಸಂಖ್ಯೆ ವಾಸ್ತವದಲ್ಲಿ ಹಲವು ಮಿಲಿಯನ್ ಆಗಿದೆ ಎಂಬುದು ಸಂಶೋಧಕರ ಅಭಿಪ್ರಾಯ. ಈ ಅಂಕಿ-ಅಂಶಗಳನ್ನು ಗಮನಿಸಿದರೆ. ಭಾರತದಲ್ಲಿ ಸ್ಯಾತಂತ್ರ್ಯ ಮತ್ತು ವಿಭಜನೆಯ (Indian Independence And Partition) ನಂತರದ ಅತಿ ದೊಡ್ಡ ದುರಂತ ಇದಾಗಿದೆ ಎಂದಿದ್ದಾರೆ. ಕರೋನಾ ಕಾಲದಲ್ಲಿ (Corona Pandemic) ಸಂಭವಿಸಿದ ಸಾವುಗಳು ಮತ್ತು ಅದಕ್ಕಿಂತ ಮುಂಚಿನ ವರ್ಷಗಳಲ್ಲಿ ಸಂಭವಿಸಿದ ಸಾವುಗಳ ಡೇಟಾವನ್ನು ವಿಶ್ಲೇಷಿಸಿರುವ ಗುಂಪು ಈ ನಿಷ್ಕರ್ಷಕ್ಕೆ ತಲುಪಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಸೆಂಟರ್ 2020 ರಂದ 2021ರವರೆಗಿನ ಅಂಕಿ-ಸಂಖ್ಯೆಗಳನ್ನು ಪ್ರಕಟಿಸಿದ್ದು, ಕೊರೊನಾಗೆ ಸಂಬಂಧಿಸಿದ ಸಾವುಗಳ ಕುರಿತು ಕೇಂದ್ರ ಸರ್ಕಾರ ನೀಡಿರುವ ಅಂಕಿ-ಅಂಶಗಳನ್ನು ಪ್ರಶ್ನಿಸಿದೆ.


ಇದನ್ನೂ ಓದಿ-ವಿಶ್ವಾಸಮತವನ್ನು ಗೆದ್ದ ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ಡಿಯುಬಾ


ಸೆಂಟರ್ ಫಾರ್ ಗ್ಲೋಬಲ್ ಡೆವಲಪ್ಮೆಂಟ್ (US Centre For Global Development) ಅಧ್ಯಯನದ ವತಿಯಿಂದ ಮಂಗಳವಾರ ಬಿಡುಗಡೆಗೊಳಿಸಲಾಗಿರುವ ವರದಿಯಲ್ಲಿ ಸರ್ಕಾರಿ ಅಂಕಿ-ಅಂಶಗಳು, ಅಂತರರಾಷ್ಟ್ರೀಯ ಅಂದಾಜುಗಳು, ಸೇರೋಲಾಜಿಕಲ್ ವರದಿ ಹಾಗೂ ಮನೆ-ಮನೆಗಳಲ್ಲಿ ನಡೆಸಲಾದ ಸಮೀಕ್ಷೆಗಳನ್ನು ಆಧಾರಗಳನ್ನಾಗಿಸಲಾಗಿದೆ. ಈ ಅಧ್ಯಯನ ವರದಿಯ ವಿಶೇಷತೆ ಎಂದರೆ, ಈ ಅಧ್ಯಯನದ ಲೇಖಕರಲ್ಲಿ ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿರುವ ಅರವಿಂದ ಸುಬ್ರಮಣ್ಯಮ್ ಕೂಡ ಶಾಮೀಲಾಗಿದ್ದಾರೆ. ಸಂಶೋಧಕರ ಪ್ರಕಾರ ಭಾರತದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ ಸಾವಿರ ಅಥವಾ ಲಕ್ಷಗಳಿಗೆ ಮಾತ್ರ ಸೀಮಿತವಾಗದೆ, ಅದು ದಶಲಕ್ಷಗಳಲ್ಲಿದೆ ಎನ್ನಲಾಗಿದೆ.


ಇದನ್ನೂ ಓದಿ-ಪಾಕ್ ಉಗ್ರ ಸಂಘಟನೆಗಳ ಜೊತೆಗಿನ ಹೊಂದಾಣಿಕೆಯನ್ನು ನಿರಾಕರಿಸಿದ ತಾಲಿಬಾನ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ