ಕೊರೊನಾ ವೈರಸ್ ವಿಶ್ವಾದ್ಯಂತ ಆತಂಕ ಸೃಷ್ಟಿಸಿದೆ. ಇದುವರೆಗೆ ಈ ಮಾರಕ ವೈರಸ್ ದಾಳಿಗೆ ವಿಶ್ವಾದ್ಯಂತ ಸುಮಾರು ಏಳು ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಒಂದೆಡೆ ಅಮೇರಿಕದಲ್ಲಿ ಈ ಮಾರಕ ರೋಗಕ್ಕೆ 93 ಜನ ಬಲಿಯಾಗಿದ್ದಾರೆ ಇತ್ತ ಭಾರತದಲ್ಲಿಯೂ ಕೂಡ ಇದುವರೆಗೆ ಮೂವರು ಬಲಿಯಾಗಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಮೇರಿಕದಲ್ಲಿ ಗೂಗಲ್ ವೆಬ್ ಸೈಟ್ ವೊಂದನ್ನು ಲೈವ್ ಮಾಡಿದೆ. ಈ ವೆಬ್ ಸೈಟ್ ಗೆ ಭೇಟಿ ನೀಡಿ ನೀವು ಕೊರೊನಾ ವೈರಸ್ ಅಥವಾ Covid-19ನ ಟೆಸ್ಟ್ ಕುರಿತು ಮಾಹಿತಿ ಪಡೆಯಬಹುದು. ಗೂಗಲ್ ನ ಅಂಗಸಂಸ್ಥೆಯಾಗಿರುವ ವರ್ಲಿ ಈ ವೆಬ್ಸೈಟ್ ಅನ್ನು ಅಭಿವೃದ್ಧಿಗೊಳಿಸಿದೆ.


COMMERCIAL BREAK
SCROLL TO CONTINUE READING

ಗೂಗಲ್ ನ ಮೂಲ ಕಂಪನಿ ಅಲ್ಫಾಬೆಟ್ ನ ಅಂಗಸಂಸ್ಥೆಯಾಗಿರುವ ವರ್ಲಿ ಈ ವೆಬ್ಸೈಟ್ ಅನ್ನು ಸಿದ್ಧಪಡಿಸಿದೆ. ವರ್ಲಿಯ ಪ್ರಾಜೆಕ್ಟ್ ಬೇಸ್ಲೈನ್ ಅಡಿಯಲ್ಲಿ ಈ ವೆಬ್ಸೈಟ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಆದರೆ, ಸದ್ಯ ಈ ವೆಬ್ಸೈಟ್ ಅಮೆರಿಕಾದ ಕೆಲವೇ ಕೆಲ ಪ್ರಾಂತ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ವೆಬ್ಸೈಟ್ ನಿಂದ ನೀವು Covid-19ಗೆ ಸಂಬಂಧಿಸಿದ ಟೆಸ್ಟ್ ಕುರಿತು ಮಾಹಿತಿ ಪಡೆಯಬಹುದು. ಇದರಲ್ಲಿ ಮೊದಲು ನೀವು get started ಆಯ್ಕೆಯನ್ನು ಕ್ಲಿಕ್ಕಿಸಬೇಕು. ಬಳಿಕ ಕೆಳಗೆ ಸೂಚಿಸಲಾಗಿರುವ ಐದು ಸ್ಟೆಪ್ಸ್ ಗಳನ್ನು ಅನುಸರಿಸಬೇಕು.


1. ಎಲ್ಲಕ್ಕಿಂತ ಮೊದಲು ನೀವು ಈ ವೆಬ್ಸೈಟ್ ಗೆ ಭೇಟಿ ನೀಡಿ sign up ಆಗಬೇಕು. ಬಳಿಕ ವೆಬ್ಸೈಟ್ ನಲ್ಲಿ ನಿಮ್ಮ ಖಾತೆ ತೆರೆದುಕೊಳ್ಳಲಿದೆ.
2. ಖಾತೆ ತೆರೆದ ಬಳಿಕ ನೀವು Covid-19 ಗೆ ಸಂಬಂಧಿಸಿದ ಒಂದು ಪರ್ಮಿಶನ್ ಫಾರ್ಮ್ ಭರ್ತಿ ಮಾಡಬೇಕು. ಫಾರ್ಮ್ ನಲ್ಲಿ ಕೇಳಲಾಗಿರುವ ಮಾಹಿತಿಯನ್ನು ನೀವು ನೀಡಿದ ಬಳಿಕ ಅದನ್ನು ಸಬ್ಮಿಟ್ ಮಾಡಬೇಕು.
3. ಬಳಿಕ ವೆಬ್ಸೈಟ್ ಮೂಲಕ ನಿಮ್ಮ ಸ್ಕ್ರೀನಿಂಗ್ ಪ್ರಕ್ರಿಯೆ ನಡೆಯಲಿದೆ. ಈ ಪ್ರಕ್ರಿಯೆಯ ಒಂದು ಭಾಗವಾಗಿ ನಿಮಗೆ ಕೆಲವು ಪ್ರಶ್ನೆಗಳನ್ನು ಕೇಳಲಾಗುವುದು. ಈ ಪ್ರಶ್ನೆಗಳು ನಿಮ್ಮ ಆರೋಗ್ಯ ಹಾಗೂ ಲಕ್ಷಣಗಳನ್ನು ಆಧರಿಸಿ ಇರಲಿವೆ.
4. ಒಂದು ವೇಳೆ ನಿಮ್ಮ ಲಕ್ಷಣಗಳು ಕೊರೊನಾ ಪಾಸಿಟಿವ್ ಕಂಡು ಬಂದರೆ ನಿಮ್ಮನ್ನು ಕೊರೊನಾ ಟೆಸ್ಟ್ ಗಾಗಿ ಆಯ್ಕೆಮಾಡಲಾಗುವುದು. ಇದಕ್ಕಾಗಿ ಅವಶ್ಯಕವಾಗಿರುವ ಮಾಹಿತಿಯನ್ನು ನಿಮಗೆ ವೆಬ್ಸೈಟ್ ಮೂಲಕವೇ ನೀಡಲಾಗುವುದು.
5. ಈ ನಾಲ್ಕೂ ಹಂತಗಳು ಮುಗಿದ ಬಳಿಕ ನಿಮ್ಮ ಖಾತೆಯಲ್ಲಿ ನಿಮಗೆ ಕೊರೊನಾ ವೈರಸ್ ಗೆ ಸಂಬಂಧಿಸಿದ ರಿಪೋರ್ಟ್ ಸಿಗಲಿದೆ. ಇದರಲ್ಲಿ ನಿಮ್ಮ ರಿಪೋರ್ಟ್ ಪಾಸಿಟಿವ್ ಆಗಿದೆಯೋ ಅಥವಾ ನೆಗೆಟಿವ್ ಆಗಿದೆಯೋ ಎಂಬುದು ಇದರಲ್ಲಿ ತಿಳಿಯಲಿದೆ.


ಈ ಕುರಿತು ಮಾಹಿತಿ ನೀಡಿರುವ ಗೂಗಲ್ ಸಂಸ್ಥೆಯ ಮುಖ್ಯಸ್ಥ ಸುಂದರೆ ಪಿಚೈ, ನಾವು ಮತ್ತೊಂದು ವೆಬ್ಸೈಟ್ ಮೇಲೆಯೂ ಕೂಡ ಕಾರ್ಯನಿರ್ವಹಿಸುತ್ತಿದ್ದು, ಈ ವೆಬ್ಸೈಟ್ ಮೂಲಕ ಕೊರೊನಾ ವೈರಸ್ ಗೆ ಸಂಬಂಧಿಸಿದಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದಿದ್ದಾರೆ. ಈ ವೆಬ್ಸೈಟ್ ನಲ್ಲಿ ನಿಮಗೆ ಕೊರೊನಾ ವೈರಸ್ ಗೆ ಸಂಬಂಧಸಿದ ಸಂಪೂರ್ಣ ಮಾಹಿತಿ ಸಿಗಲಿದೆ. ಜೊತೆಗೆ ಕೊರೊನಾ ವೈರಸ್ ನ ಕುರಿತು ಜನರಿಗೆ ಶಿಕ್ಷಣ ಹಾಗೂ ಮುಂಜಾಗೃತಾ ಕ್ರಮಗಳ ಕುರಿತು ಕೂಡ ಹೇಳಲಾಗುವುದು.