ಮಿಸೌರಿ: ಪ್ರತಿಯೊಂದು ದೇಶದಲ್ಲಿ ಚಿತ್ರ ವಿಚಿತ್ರ ನಿಯಮಗಳು ಅಸ್ತಿತ್ವದಲ್ಲಿವೆ. ಹಲವು ದೇಶಗಳಲ್ಲಿ ಮಹಿಳೆಯರನ್ನು ಪುರುಷರಷ್ಟೇ ಗೌರವಿಸಲಾಗುತ್ತದೆ. ಆದರೆ, ಇನ್ನೊಂದೆಡೆ ಮಹಿಳೆಯರಿಗೆ ತಾವಾಗಿಯೇ ತಿನ್ನಲು, ಅಥವಾ ಸುತ್ತಾಡಲು ಅಥವಾ ಬಟ್ಟೆಗಳನ್ನು ಧರಿಸಲು ಅನುಮತಿ ಇಲ್ಲದ ಇರುವ ಕೆಲ ದೇಶಗಳೂ ಕೂಡ ಇವೆ. ಮಹಿಳೆಯರ ಒಳ ಉಡುಪು ಧರಿಸುವಿಕೆಯ ಮೇಲೆ ನಿರ್ಬಂಧನೆ ವಿಧಿಸಿರುವ ಒಂದು ದೇಶ ಕೂಡ ಅಸ್ತಿತ್ವದಲ್ಲಿದ್ದು, ಆ ದೇಶದ ಕುರಿತು ನಾವು ಇಲ್ಲಿ ನಿಮಗೆ ಮಾಹಿತಿ ನೀಡುತ್ತಿದ್ದೇವೆ,


COMMERCIAL BREAK
SCROLL TO CONTINUE READING

ಈ ವಿಲಕ್ಷಣ ಕಾನೂನು ಅಮೆರಿಕದ ಒಂದು ರಾಜ್ಯದಲ್ಲಿದೆ. ಅಮೆರಿಕಾದ ಮಿಸೌರಿ ರಾಜ್ಯದಲ್ಲಿ ಒಂದು ಕಾನೂನು ಅಸ್ತಿತ್ವದಲ್ಲಿದ್ದು, ಇದು ಮಹಿಳೆಯರಿಗೆ ಒಳಉಡುಪು ಧರಿಸಲು ಅನುಮತಿ ನೀಡುವುದಿಲ್ಲ. ಒಂದು ವೇಳೆ ಈ ರಾಜ್ಯದಲ್ಲಿ ಈ ಕಾನೂನನ್ನು ಯಾವುದೇ ಓರ್ವ ಮಹಿಳೆ ಉಲ್ಲಂಘಿಸಿದ್ದೆ ಆದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ. ನೂರಾರು ವರ್ಷಗಳಿಂದ ಈ ಕಾನೂನು ಅಲ್ಲಿ ಅಸ್ತಿತ್ವದಲ್ಲಿದೆ.


ಒಳ ಉಡುಪು ಧರಿಸುವ ಮಹಿಳೆಯರು ಅವರ ನೀಳಕಾಯ, ಸುಂದರ ಆಕಾರ, ಸ್ಲಿಮ್ ದೇಹಕ್ಕಾಗಿ ಸಾಮಾನ್ಯ ಅಮೆರಿಕನ್ ಪುರುಷರಿಂದ ಮೆಚ್ಚುಗೆಯ ಹಕ್ಕನ್ನು ಕಸಿದುಕೊಳ್ಳುತ್ತಾರೆ ಎಂದು ಅಲ್ಲಿನ ಜನರು ಭಾವಿಸುತ್ತಾರೆ. ಈ ಕಾರಣಕ್ಕಾಗಿ, ಮಹಿಳೆಯರು ಒಳ ಉಡುಪು ಧರಿಸಬಾರದು. ಆದರೆ ಈ ವಿಚಿತ್ರ ಕಾನೂನು ಸಂಪೂರ್ಣ ಅಮೇರಿಕಾಗೆ ಅನ್ವಯಿಸುವುದಿಲ್ಲ. ಕೇವಲ ಮಧ್ಯ ಪಶ್ಚಿಮ ರಾಜ್ಯವಾದ ಮಿಸೌರಿಯ ಮಹಿಳೆಯರಿಗೆ ಮಾತ್ರ ಇದು ಅನ್ವಹಿಸುತ್ತದೆ. ಅಷ್ಟೇ ಅಲ್ಲ ಈ ರಾಜ್ಯದಲ್ಲಿ ಯಾವುದೇ ಓರ್ವ ಮಹಿಳೆ ನೈಟ್ ಗೌನ್ ಧರಿಸಿದ್ದು ಮತ್ತು ಆಕೆ ಅಗ್ನಿ ಅವಘಡದಲ್ಲಿ ಸಿಲುಕಿಕೊಂಡಿದ್ದರೆ, ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಕೆಯನ್ನು ಉಳಿಸಲು ಸಾಧ್ಯವಿಲ್ಲ. ಏಕೆಂದರೆ ಅಲ್ಲಿ ಅಗ್ನಿಶಾಮಕ ದಳದ ಸಿಬ್ಬಂಧಿಗಳು ಆ ರೀತಿ ಮಾಡುವುದು ಕಾನೂನುಬಾಹಿರವಾಗಿದೆ.