ನವದೆಹಲಿ: ದೇಶದಲ್ಲಿ ಕೊರೊನಾ ಪ್ರಕರಣ(COVID-19)ಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಂಕ್ರಾಮಿಕ ರೋಗದಿಂದ ಜನರು ಕಳೆದ 3 ವರ್ಷಗಳಿಂದ ನೆಮ್ಮದಿಯಿಂದ ಬದುಕಲು ಸಾಧ್ಯವಾಗಿಲ್ಲ. ಇಲ್ಲಿಯವರೆಗೆ ಕೊರೊನಾದ ಹಲವು ರೂಪಾಂತರಗಳು ಕಂಡುಬಂದಿವೆ. ಅಸ್ತಿತ್ವದಲ್ಲಿರುವ ಓಮಿಕ್ರಾನ್ ರೂಪಾಂತರಿ ವೈರಸ್ ಆಗಮನದ ಬಳಿಕ ಇದರ ರೋಗಲಕ್ಷಣಗಳಲ್ಲಿಯೂ ಅನೇಕ ಬದಲಾವಣೆ ಕಂಡುಬಂದಿದೆ. ಕೋವಿಡ್ ರೋಗಲಕ್ಷಣಗಳ ಕುರಿತು ಇತ್ತೀಚಿನ ಸಂಶೋಧನೆಯಲ್ಲಿ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಈ ಸಂಶೋಧನೆಯ ಪ್ರಮುಖ ವಿಷಯಗಳ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.


COMMERCIAL BREAK
SCROLL TO CONTINUE READING

ಕೇವಲ 2 ದಿನಗಳಲ್ಲಿ ಕೊರೊನಾ ಲಕ್ಷಣಗಳು ಗೋಚರಿಸುತ್ತವೆ!


ಕೊರೊನಾ ವೈರಸ್‌(CoronaVirus)ನ ಲಕ್ಷಣಗಳು ಈಗ 10 ಅಥವಾ 14 ದಿನಗಳ ಬದಲು ಕೇವಲ 2 ದಿನಗಳಲ್ಲಿ ಮಾತ್ರ ಗೋಚರಿಸುತ್ತವೆ ಎಂದು ಈ ಸಂಶೋಧನೆಯಲ್ಲಿ ಹೇಳಲಾಗಿದೆ. DHSC ಮತ್ತು ರಾಯಲ್ ಫ್ರೀ ಲಂಡನ್ NHS ಫೌಂಡೇಶನ್ ಟ್ರಸ್ಟ್‌ ನ ಸಹಯೋಗದೊಂದಿಗೆ ಲಂಡನ್‌ನ ಇಂಪೀರಿಯಲ್ ಕಾಲೇಜ್ ಈ ಅಧ್ಯಯನವನ್ನು ನಡೆಸಿದೆ.


ಇದನ್ನೂ ಓದಿ: Mia Khalifa: ವಾರ್ನಿಂಗ್ ಕೊಟ್ಟ ಮಿಯಾ ಖಲೀಫಾ, ಫೋಟೋ ಶೇರ್ ಮಾಡಿ ಹೇಳಿದ್ದೇನು ಗೊತ್ತಾ?


ಆರೋಗ್ಯವಂತ ಜನರಿಗೆ ಕೊರೊನಾ ಸೋಂಕು


ಈ ಅಧ್ಯಯನದಲ್ಲಿ ಆರೋಗ್ಯವಂತ ಜನರೇ ಕೊರೊನಾವೈರಸ್ ಸೋಂಕಿಗೆ(Covid 19 Symptoms)ತುತ್ತಾಗಿರುವುದು ಕಂಡುಬಂದಿದೆ. ಈ ಎಲ್ಲಾ ಜನರನ್ನು ವೀಕ್ಷಣೆಯಲ್ಲಿಟ್ಟು ಅವರ ಆರೋಗ್ಯದ ಮೇಲೆ ನಿಗಾ ಇರಿಸಲಾಗಿತ್ತು. ಸೋಂಕಿಗೆ ಒಳಗಾದ ನಂತರ ದೇಹದಲ್ಲಿ ವೈರಸ್ ಬೆಳವಣಿಗೆ ಮತ್ತು ಅದರ ರೋಗಲಕ್ಷಣಗಳನ್ನು ನಿಕಟವಾಗಿ ಪತ್ತೆಹಚ್ಚಲಾಗಿದೆ. ಈ ಅಧ್ಯಯನವನ್ನು ಇಲ್ಲಿಯವರೆಗಿನ ಅಧ್ಯಯನಕ್ಕಿಂತಲೂ ಸಂಪೂರ್ಣವಾಗಿ ವಿಭಿನ್ನವಾಗಿದೆ ಅಂತಾ ಹೇಳಲಾಗುತ್ತಿದೆ.


ಕೊರೊನಾದಿಂದ ರಕ್ಷಣೆ ಪಡೆಯಲು ಮಾಸ್ಕ್ ತುಂಬಾ ಮುಖ್ಯ


ಸೋಂಕು(COVID 19) ಗಂಟಲಿನಿಂದ ಪ್ರಾರಂಭವಾಗುತ್ತದೆ ಮತ್ತು 5 ದಿನಗಳಲ್ಲಿ ಅದರ ಗರಿಷ್ಠ ಮಟ್ಟವನ್ನು ತಲುಪುತ್ತದೆ ಎಂದು ಅಧ್ಯಯನವು ಬಹಿರಂಗಪಡಿಸಿದೆ. ಈ ಅಧ್ಯಯನದ ನಂತರ ಕೊರೊನಾದಿಂದ ರಕ್ಷಣೆ ಪಡೆಯಲು ಮಾಸ್ಕ್ ಧರಿಸುವ ಮೂಲಕ ಬಾಯಿ ಮತ್ತು ಮೂಗನ್ನು ಮುಚ್ಚುವುದು ಬಹಳ ಮುಖ್ಯ ಅಂತಾ ಸಂಶೋಧಕರು ಹೇಳಿದ್ದಾರೆ.


ಇದನ್ನೂ ಓದಿ: ಜಮ್ಮು & ಕಾಶ್ಮೀರ ಕುರಿತು ಚೀನಾ ಅಧ್ಯಕ್ಷರ ಜೊತೆ ಪಾಕ್ ಪ್ರಧಾನಿ ಮಾತುಕತೆ!


36 ಆರೋಗ್ಯವಂತ ಜನರ ಮೇಲೆ ಪ್ರಯೋಗ


ಈ ಅಧ್ಯಯನದಲ್ಲಿ 36 ಆರೋಗ್ಯವಂತ ಜನರನ್ನು ಪ್ರಯೋಗಕ್ಕೆ ಬಳಸಿಕೊಳ್ಳಲಾಗಿತ್ತು. ಈ ಜನರು ಕೊರೊನಾ ಲಸಿಕೆ(Corona Vaccine) ಪಡೆದಿರಲಿಲ್ಲ ಮತ್ತು ಅವರು ಎಂದಿಗೂ ಸೋಂಕಿಗೆ ಒಳಗಾಗಿರಲಿಲ್ಲ. ಎಲ್ಲರೂ 18 ರಿಂದ 30 ವರ್ಷದೊಳಗಿನವರು. 36 ಜನರ ಪೈಕಿ ಕೇವಲ 18 ಜನರು ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದ್ದರು. ಇನ್ನುಳಿದ 16 ಜನರು ಸೌಮ್ಯ ಅಥವಾ ತೀವ್ರವಾದ ರೋಗಲಕ್ಷಣಗಳನ್ನು ಅನುಭವಿಸಿದ್ದಾರೆ ಅಂತಾ ತಿಳಿದುಬಂದಿದೆ.


ಸೋಂಕು ತಗುಲಿದಾಗ ಈ ಲಕ್ಷಣಗಳು ಕಾಣಿಸಿಕೊಂಡಿದ್ದವು


ಸೋಂಕಿಗೆ ಒಳಗಾದವರಿಗೆ ಮೂಗು ಸೋರುವಿಕೆ, ಶೀತ, ಕೆಮ್ಮು(Corona Infection) ಮತ್ತು ನೋಯುತ್ತಿರುವ ಗಂಟಲು ಸೇರಿದಂತೆ ಸೌಮ್ಯದಿಂದ ಮಧ್ಯಮ ರೋಗಲಕ್ಷಣಗಳು ಕಂಡುಬಂದಿದ್ದವು. ಯಾರೂ ತೀವ್ರವಾದ ಸೋಂಕನ್ನು ಅನುಭವಿಸಲಿಲ್ಲ. 13 ಜನರು ತಮ್ಮ ವಾಸನೆಯನ್ನು ಕಳೆದುಕೊಂಡಿದ್ದರು, ಅದು ಪುನಃ 90 ದಿನಗಳಲ್ಲಿ ಮರಳಿತು. ಅಧ್ಯಯನದಲ್ಲಿ ಭಾಗವಹಿಸಿದ ಎಲ್ಲರನ್ನು 12 ತಿಂಗಳುಗಳವರೆಗೆ ಮೇಲ್ವಿಚಾರಣೆ ಮಾಡಲಾಗುತ್ತದೆ ಅಂತಾ ತಜ್ಞರು ತಿಳಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.