ಇಮ್ರಾನ್ ಖಾನ್ ಅನೈತಿಕ ಮಕ್ಕಳಲ್ಲಿ ಕೆಲವರು ಭಾರತೀಯರು- ಮಾಜಿ ಪತ್ನಿ ರೆಹಾಮ್ ಖಾನ್ ಆತ್ಮಕತೆಯಲ್ಲಿ ಸ್ಪೋಟಕ ಮಾಹಿತಿ
ನವದೆಹಲಿ: ಮಾಜಿ ಪಾಕಿಸ್ತಾನದ ಕ್ರಿಕೆಟ್ ಆಟಗಾರ ಮತ್ತು ರಾಜಕಾರಣಿ ಇಮ್ರಾನ್ ಖಾನ್ ಗೆ ಹುಟ್ಟಿದ ಐವರು ಅನೈತಿಕ ಮಕ್ಕಳಲ್ಲಿ ಕೆಲವರು ಭಾರತೀಯರು ಇದ್ದಾರೆ ಎನ್ನುವ ಸ್ಪೋಟಕ ಅಂಶವನ್ನು ಇಮ್ರಾನ್ ಖಾನ್ ಮಾಜಿ ಪತ್ನಿ ರೆಹಾಮ್ ಖಾನ್ ತಮ್ಮ ಆತ್ಮಕತೆಯಲ್ಲಿ ಬರೆದುಕೊಂಡಿದ್ದಾರೆ.
2015 ರಲ್ಲಿ ಇಮ್ರಾನ್ ಖಾನ್ ರನ್ನು ವರಿಸಿದ್ದ ರೆಹಾಮ್ ಖಾನ್ ಮದುವೆಯಾದ ಹತ್ತು ತಿಂಗಳ ನಂತರ ವಿಚ್ಚೇದನ ನೀಡಿದ್ದರು. ಈಗ ತಮ್ಮ ಆತ್ಮಕತೆಯ ಪುಸ್ತಕದಲ್ಲಿ ಹಲವಾರು ಇಮ್ರಾನ್ ಖಾನ್ ಕುರಿತಾಗಿ ವಿವಾದಾತ್ಮಕ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿ ಅವರ ಅನೈತಿಕ ಸಂಭಂದದಂತಹ ವಿಷಯಗಳು ಸಾಕಷ್ಟು ಸುದ್ದಿಗೆ ಒಳಗಾಗಿವೆ.
ಈಗ ಈ ಪುಸ್ತಕ ನಿನ್ನೆ ಅಷ್ಟೇ ಇಂಗ್ಲೆಂಡ್ ನಲ್ಲಿ ಬಿಡುಗಡೆಯಾಗಿದ್ದು ಇದರಲ್ಲಿ ಒಂದು ಅಧ್ಯಾಯದಲ್ಲಿ ರೆಹಾಮ್ ಖಾನ್ ಅನೈನಿಕ ಸಂಬಂದದಿಂದ ಹುಟ್ಟಿದ ಮಕ್ಕಳ ಕುರಿತಾಗಿ ಇಮ್ರಾನ್ ಖಾನ್ ನಡುವೆ ನಡೆದ ಸಂಭಾಷಣೆಯನ್ನು ಪ್ರಕಟಿಸಿದ್ದಾರೆ.
ಪುಸ್ತಕದಲ್ಲಿನ ಸಂಭಾಷಣೆ ಹೀಗಿದೆ:
ರೆಹಮ್ ಖಾನ್: ನಿಮಗೆ ಐವರು ಅನೈತಿಕ ಮಕ್ಕಳಿದ್ದಾರಂತೆ! ಅದು ನಿಮಗೆ ಹೇಗೆ ಗೊತ್ತು?
ಇಮ್ರಾನ್ ಖಾನ್: ತಾಯಂದಿರು ಹೇಳಿದ್ದರು
ರೆಹಮ್ ಖಾನ್: ಎಲ್ಲರೂ ಬಿಳಿಯರೇ ?
ಇಮ್ರಾನ್ ಖಾನ್: ಇಲ್ಲ, ಕೆಲವು ಭಾರತೀಯರು. ಮೊದಲನೆಯವರಿಗೆ ಈಗ 34.