COMMERCIAL BREAK
SCROLL TO CONTINUE READING

ತೆಹರಾನ್:  ಇರಾನಿನ ಅಧ್ಯಕ್ಷ ಹಸ್ಸನ್ ರೌಹಾನಿ ಮಧ್ಯ ಏಶಿಯಾ ರಾಷ್ಟ್ರಗಳ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಬಹುದೆಂದು ಅಭಿಪ್ರಾಯಪಟ್ಟರು. 


ಇಲ್ಲಿನ ಚಾಬರ್ ಪೋರ್ಟ್ನ ಉದ್ಘಾಟನಾ ಸಮಾರಂಭ ಸಂಧರ್ಭದಲ್ಲಿ ದೇಶವನ್ನು ಉದ್ದೇಶಿಸಿ ಟಿವಿ ಮೂಲಕ ಮಾತನಾಡುತ್ತಾ ಈ ಪ್ರದೇಶದಲ್ಲಿ ಸಮಸ್ಯೆಗಳಿವೆ ಎಂದಾದಲ್ಲಿ ಅವುಗಳನ್ನು ಯಾವುದೇ ಬಾಹ್ಯಶಕ್ತಿಗಳ ಮೂಲಕ ಪರಿಹರಿಸಿಕೊಳ್ಳದೆ ಅವುಗಳನ್ನು ನಾವು ನಮ್ಮ ನಡುವಿನ ಮಾತುಕತೆಯಿಂದ ಪರಿಹಾರ ಕೊಂಡುಕೊಳ್ಳಬಹುದು,ಇದಕ್ಕೆ ಯಾವುದೇ ಶಸ್ತ್ರಾಸ್ತ್ರ ಅಥವಾ ಬಾಹ್ಯಶಕ್ತಿಗಳ ಅಗತ್ಯವಿಲ್ಲ ಎಂದರು. 


ರೌಹಾನಿಯವರ ಈ ಹೇಳಿಕೆಯು ಮುಖ್ಯವಾಗಿ ಶಿಯಾರನ್ನು ಪ್ರತಿನಿಧಿಸುವ ಇರಾನ್ ಮತ್ತು ಸುನ್ನಿ ಸಮುದಾಯವನ್ನು ಪ್ರತಿನಿಧಿಸುವ ಸೌಧಿ ಅರೇಬಿಯಾದ ನಡುವಿರುವ ಘರ್ಷಣೆಯನ್ನು ಪರೋಕ್ಷವಾಗಿ ಪ್ರಸ್ತಾಪಿಸಿದೆ.ಮಧ್ಯಏಶಿಯಾದಲ್ಲಿ ಈ ಎರಡು ಸಮುದಾಯಗಳ ನಡುವಿರುವ ಈ ಸಂಘರ್ಷವು ಈ ಭಾಗದಲ್ಲಿ ಹೆಚ್ಚು ಅಶಾಂತಿಯನ್ನು ಉಂಟು ಮಾಡಿದೆ. ಅದರಲ್ಲೂ ಪ್ರಮುಖವಾಗಿ ಸಿರಿಯಾ ಮತ್ತು ಯೆಮೆನ್ಗಳಲ್ಲಿ ಇದು ಹಿಂಸಾಚಾರಕ್ಕೆ ಇಡುಮಾಡುತ್ತಿದೆ.ಇದಕ್ಕೆ ಮುಖ್ಯಕಾರಣ ಬಾಹ್ಯಶಕ್ತಿಗಳ ಪ್ರಭಾವದಿಂದಾಗಿ ಈ ರೀತಿಯ ಗಲಭೆಗಳು ನಿರಂತರವಾಗಿ ಇಲ್ಲಿ ಸಂಭವಿಸುತ್ತಿವೆ ಎಂದು ಇರಾನ್ ಅಧ್ಯಕ್ಷ  ಹಸ್ಸನ್ ರೌಹಾನಿ ಅಭಿಪ್ರಾಯಪಟ್ಟಿದ್ದಾರೆ.