12 ವರ್ಷಗಳಿಂದ ಈತ ಮಾಡುವುದು ಕೇವಲ ಅರ್ಧ ಗಂಟೆ ನಿದ್ದೆ! ಆದರೂ ಕೂಡ ಫುಲ್ ಫಿಟ್ ಇದ್ದಾರೆ ಈ 40 ವರ್ಷದ ವ್ಯಕ್ತಿ
Daisuke Hori: ನೀವು ದಿನಕ್ಕೆ ಎಷ್ಟು ಗಂಟೆಗಳ ಕಾಲ ಮಲಗುತ್ತೀರಿ. ಸಾಮಾನ್ಯವಾಗಿ ಯಾರಾದರೂ 6 ರಿಂದ 8 ಗಂಟೆಗಳವರೆಗೆ ಮಲಗುತ್ತಾರೆ. ಆದರೆ ಈ ವ್ಯಕ್ತಿ ದಿನಕ್ಕೆ ಅರ್ಧ ಗಂಟೆ ಮಾತ್ರ ಮಲಗುತ್ತಾನೆ.
Daisuke Hori: ನೀವು ದಿನಕ್ಕೆ ಎಷ್ಟು ಗಂಟೆಗಳ ಕಾಲ ಮಲಗುತ್ತೀರಿ. ಸಾಮಾನ್ಯವಾಗಿ ಯಾರಾದರೂ 6 ರಿಂದ 8 ಗಂಟೆಗಳವರೆಗೆ ಮಲಗುತ್ತಾರೆ. ಆದರೆ ಈ ವ್ಯಕ್ತಿ ದಿನಕ್ಕೆ ಅರ್ಧ ಗಂಟೆ ಮಾತ್ರ ಮಲಗುತ್ತಾನೆ.
ನಾವು ಸಾಮಾನ್ಯವಾಗಿ ದಿನಕ್ಕೆ 6 ರಿಂದ 8 ಗಂಟೆಗಳವರೆಗೆ ಮಲಗುತ್ತೇವೆ. ಆದರೆ ಕೆಲವರು 8 ರಿಂದ 10 ಗಂಟೆಗಳವರೆಗೆ ನಿದ್ದೆ ಮಾಡುತ್ತಾರೆ. ಆರೋಗ್ಯವಾಗಿರಲು ಜನರು ದಿನಕ್ಕೆ ಕನಿಷ್ಠ 6 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡಬೇಕು ಎಂದು ವೈದ್ಯರು ಸೂಚಿಸುತ್ತಾರೆ. ಅತಿಯಾದ ನಿದ್ರೆ ಅಥವಾ ನಿದ್ರೆಯ ಕೊರತೆಯು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹಲವಾರು ಅಧ್ಯಯನಗಳು ಈಗಾಗಲೇ ಬಹಿರಂಗ ಪಡಿಸಿವೆ.
ಮನುಷ್ಯನಿಗೆ ಆಹಾರದಷ್ಟೇ ನಿದ್ರೆಯೂ ತುಂಬಾ ಮುಖ್ಯ ಆದರೆ ಒಬ್ಬ ವ್ಯಕ್ತಿ ದಿನಕ್ಕೆ 30 ನಿಮಿಷ ಮಾತ್ರ ನಿದ್ದೆ ಮಾಡುವ ಮೂಲಕ ಎಲ್ಲರಿಗೂ ಶಾಕ್ ನೀಡುತ್ತಿದ್ದಾರೆ. ಅವರು ಬೇರಾರು ಅಲ್ಲ ಜಪಾನ್‌ನ ಡೈಸುಕಿ ಹೋರಿ. ಈತ, ದಿನಕ್ಕೆ ಕೇವಲ ಅರ್ಧ ಗಂಟೆ ಮಾತ್ರ ನಿದ್ದೆ ಮಾಡುವುದರಿಂದ ಅವರ ಕಾರ್ಯ ಕ್ಷಮತೆ ಹೆಚ್ಚಿದೆ ಎನ್ನುತ್ತಾರೆ.
ಜಪಾನ್‌ನ ಹ್ಯೂಗೋ ಪ್ರಿಫೆಕ್ಚರ್‌ನ ಡೈಸುಕಿ ಹೋರಿ ಅವರು ಕಳೆದ 12 ವರ್ಷಗಳಿಂದ ಕೇವಲ ಅರ್ಧ ಗಂಟೆ ಮಾತ್ರ ನಿದ್ದೆ ಮಾಡುತ್ತಾರೆ ಎಂದು ಹೇಳಿದ್ದಾರೆ. ತಿದಿನ ಕೇವಲ 30 ನಿಮಿಷ ಮಾತ್ರ ನಿದ್ದೆ ಮಾಡಲು ದೇಹ ಹಾಗೂ ಮೆದುಳಿಗೆ ತರಬೇತಿ ನೀಡಿದ್ದು, ಕಳೆದ 12 ವರ್ಷಗಳಿಂದ ಈ ರೀತಿ ನಿದ್ದೆ ಕಡಿಮೆ ಮಾಡಲು ಆರಂಭಿಸಿದ್ದು, ಈ ಮೂಲಕ ಈಗ ಕೇವಲ 30 ನಿಮಿಷ ಮಲಗಿದರೂ ಸುಸ್ತಾಗುವುದಿಲ್ಲ ಎಂದು ಹೇಳಿದ್ದಾರೆ. ಊಟಕ್ಕೆ ಒಂದು ಗಂಟೆ ಮೊದಲು ಆಟವಾಡುವುದು ಅಥವಾ ಕಾಫಿ ಕುಡಿಯುವುದು ನಿದ್ರೆಯನ್ನು ದೂರ ಮಾಡುತ್ತದೆ ಎಂದು ಡೈಸುಕಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Viral video: ದಾರಿ ಮಧ್ಯೆ ಕಂಡುಬಂತು ಅಪರೂಪದ ಚಿನ್ನದ ಹಾವು! ದುಬೈನಿಂದ ತೆವೆಳುತ್ತಾ ಬಂತು ಎಂದ ನೆಟ್ಟಿಗರು
ಹೆಚ್ಚು ದುಡಿದು ದಕ್ಷತೆ ಹೆಚ್ಚಿಸಿಕೊಳ್ಳಲು ಬಯಸುವವರು ಹೆಚ್ಚು ಹೊತ್ತು ನಿದ್ದೆ ಮಾಡುವುದಕ್ಕಿಂತ ಕಡಿಮೆ ಅವಧಿಯ ಗುಣಮಟ್ಟದ ನಿದ್ದೆಯಿಂದ ಹೆಚ್ಚು ಪ್ರಯೋಜನ ಪಡೆಯುತ್ತಾರೆ ಎಂದ ಡೈಸುಕಿ, ಇಂತಹ ಕಾರ್ಯವಿಧಾನಗಳನ್ನು ಅನುಸರಿಸುವುದರಿಂದ ವೈದ್ಯರು ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ಸ್ವಲ್ಪ ಸಮಯ ನಿದ್ರೆ ಮಾಡಿದರೂ ಹೆಚ್ಚು ದಕ್ಷತೆ ಹೊಂದುತ್ತಾರೆ ಎಂದಿದ್ದಾರೆ.
ಜಪಾನ್‌ನ ಯೋಮಿಯುರಿ ಎಂಬ ಟಿವಿ ಚಾನೆಲ್ ಡೈಸುಕಿ ಹೋರಿ ದಿನಕ್ಕೆ ಕೇವಲ 30 ನಿಮಿಷಗಳ ಕಾಲ ನಿದ್ದೆ ಮಾಡಿ ದಿನವಿಡೀ ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ತೋರಿಸಲು "ವಿಲ್ ಯು ಗೋ ವಿತ್ ಮಿ" ರಿಯಾಲಿಟಿ ಶೋ ಅನ್ನು ಸ್ಥಾಪಿಸಿದೆ.
2016 ರಲ್ಲಿ, ಡೈಸುಕಿ ಹೋರಿ ಜಪಾನ್ ಶಾರ್ಟ್ ಸ್ಲೀಪರ್ಸ್ ಟ್ರೈನಿಂಗ್ ಅಸೋಸಿಯೇಷನ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಆ ಸಂಸ್ಥೆಯಲ್ಲಿ 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತಮ್ಮಂತೆ ಸ್ವಲ್ಪ ಸಮಯ ಹೇಗೆ ಮಲಗಬೇಕು ಎಂದು ತರಬೇತಿ ನೀಡಿದ್ದಾರೆ. ಆದರೆ ಅಲ್ಟ್ರಾ ಶಾರ್ಟ್ ಸ್ಲೀಪರ್ಸ್‌ಗೆ ಆರೋಗ್ಯ ಸಮಸ್ಯೆಗಳು ಏಕೆ ಬರುವುದಿಲ್ಲ ಎಂಬುದು ವೈದ್ಯರಿಗೂ ಅರ್ಥವಾಗದ ಪ್ರಶ್ನೆ.
ಇದನ್ನೂ ಓದಿ: ಕಾಮನ ಬಿಲ್ಲನ್ನು ಹೋಲುವಂತಿದೆ ಈ ಹಾವು! ಸ್ವರ್ಗದಿಂದ ಧರೆಗಿಳಿದಂತಿದೆ ಧೈತ್ಯ ಹೆಬ್ಬಾವು
ಪ್ರತಿದಿನ ಗಂಟೆಗಟ್ಟಲೆ ನಿದ್ದೆ ಮಾಡುವ ಬದಲು, ಕೆಲವೇ ನಿಮಿಷಗಳ ಕಾಲ ಗುಣಮಟ್ಟದ ನಿದ್ರೆಯನ್ನು ಪಡೆಯುವುದು ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಡೈಸುಕಿ ಹೋರಿ ವಿವರಿಸುತ್ತಾರೆ. ಗುಣಮಟ್ಟದ ನಿದ್ರೆಯಿಂದ ಏಕಾಗ್ರತೆಯೂ ಹೆಚ್ಚುತ್ತದೆ ಎಂದರು. ಜೀವನದಲ್ಲಿ ಗುರಿಯತ್ತ ಗಮನ ಹರಿಸಲು ಬಯಸುವ ಜನರು ಈ ವಿಧಾನದಿಂದ ಹೆಚ್ಚು ಪ್ರಯೋಜನ ಪಡೆಯುತ್ತಾರೆ ಎಂದು ಡೈಸುಕಿ ಹೇಳಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.