ನವದೆಹಲಿ: ಅಮೇರಿಕಾದಲ್ಲಿ ಈಗ ಡೆಲ್ಟಾ ರೂಪಾಂತರದಿಂದಾಗಿ ಕೋವಿಡ್ ಪ್ರಕರಣಗಳು ವೇಗವಾಗಿ ಏರುತ್ತಿವೆ ಎಂದು ಬುಧುವಾರದ ಅಂಕಿ ಅಂಶಗಳ ಮೂಲಕ ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Johnson & Johnson ನ ಸಿಂಗಲ್ ಶಾಟ್ ಡೆಲ್ಟಾ ರೂಪಾಂತರದ ವಿರುದ್ಧ ಪರಿಣಾಮಕಾರಿ


ಹೊಸ ಪ್ರಕರಣಗಳ ಏಳು ದಿನಗಳ ಸರಾಸರಿ ಜುಲೈ 6 ರ ವೇಳೆಗೆ 13,859 ಆಗಿದ್ದು, ಎರಡು ವಾರಗಳ ಹಿಂದಿನ ಅವಧಿಗೆ ಹೋಲಿಸಿದರೆ ಶೇ 21 ರಷ್ಟು ಹೆಚ್ಚಾಗಿದೆ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ) ತಿಳಿಸಿದೆ.ಜುಲೈ 4 ರ ರಜಾದಿನದ ವಾರಾಂತ್ಯದ ನಂತರ ವರದಿಯ ವಿಳಂಬದಿಂದಾಗಿ ಪ್ರಕರಣಗಳು ಮತ್ತಷ್ಟು ಏರಿಕೆಯಾಗಬಹುದು ಎನ್ನಲಾಗಿದೆ.


ಸಿಡಿಸಿ ಪ್ರಕಾರ, ಜುಲೈ 3 ಕ್ಕೆ ಕೊನೆಗೊಂಡ ಎರಡು ವಾರಗಳಲ್ಲಿ ಡೆಲ್ಟಾ ರೂಪಾಂತರ (Delta variantವು ಹಿಂದಿಗಿಂತಲೂ ಹೆಚ್ಚು ಹರಡಬಲ್ಲದು, ಇದು ಸುಮಾರು ಶೇ 52 ರಷ್ಟು ಪ್ರಕರಣಗಳಿಗೆ ಕಾರಣವಾಗಿದೆ.ಯಾವುದೇ ದೇಶದ ಲಸಿಕೆಗಳ ಹೆಚ್ಚಿನ ಲಭ್ಯತೆಯ ಹೊರತಾಗಿಯೂ, ಅಮೆರಿಕದ ರೋಗನಿರೋಧಕ ಅಭಿಯಾನವು ಏಪ್ರಿಲ್‌ನಿಂದ ತೀವ್ರವಾಗಿ ಕುಸಿಯಿತು.


ಇದನ್ನೂ ಓದಿ:Joe Biden - ಅಮೆರಿಕ ವಾರದ ಅಂತ್ಯದ ವೇಳೆ 160 ಮಿಲಿಯನ್ ಜನರಿಗೆ ಲಸಿಕೆ ಗುರಿ ತಲುಪಲಿದೆ


ಸ್ವಾತಂತ್ರ್ಯ ದಿನಾಚರಣೆಯ ವೇಳೆಗೆ ಶೇ 70 ರಷ್ಟು ವಯಸ್ಕರಿಗೆ ಭಾಗಶಃ ಲಸಿಕೆ ಹಾಕುವ ಗುರಿಯನ್ನು ಅಧ್ಯಕ್ಷ ಜೋ ಬಿಡೆನ್ ಹಾಕುವುದಾಗಿ ಜೋ ಬಿಡೆನ್ ಹೇಳಿದ್ದರು.ಆದರೆ ವಾಸ್ತವಿಕವಾಗಿ ಈಗ ಪ್ರಸ್ತುತ ಅಂಕಿ ಅಂಶವು ಶೇ 67 ರಷ್ಟಿದೆ.ಕಡಿಮೆ ವ್ಯಾಕ್ಸಿನೇಷನ್ ದರವನ್ನು ಹೊಂದಿರುವ ಮಧ್ಯ ಪೂರ್ವ ಮತ್ತು ದಕ್ಷಿಣದ ಪ್ರದೇಶಗಳು ಈಶಾನ್ಯದಂತಹ ಹೆಚ್ಚಿನ ವ್ಯಾಕ್ಸಿನೇಷನ್ ದರವನ್ನು ಹೊಂದಿರುವ ಪ್ರದೇಶಗಳಿಗಿಂತ ಹೆಚ್ಚಿನ ಪ್ರಮಾಣದ ಪ್ರಕರಣಗಳನ್ನು ಹೊಂದಿವೆ,ಇದು ಇತ್ತೀಚಿನ ವಾರಗಳಲ್ಲಿ ಹೆಚ್ಚು ಸ್ಪಷ್ಟವಾಗಿದೆ.


ಇದನ್ನೂ ಓದಿ:"ಡೆಲ್ಟಾ ರೂಪಾಂತರವು ಶೇ 60 ಕ್ಕಿಂತ ಅಧಿಕ ಪ್ರಸರಣವನ್ನು ಹೊಂದಿದೆ"


ಮಿಸೌರಿಯ ಸ್ಪ್ರಿಂಗ್ಫೀಲ್ಡ್ನಲ್ಲಿನ ಆಸ್ಪತ್ರೆಯು ವಾರಾಂತ್ಯದಲ್ಲಿ ಆಸ್ಪತ್ರೆಗೆ ದಾಖಲಾದ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ವೆಂಟಿಲೆಟರ್ ಗಳ ಕೊರತೆಯನ್ನು ಅನುಭವಿಸಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.160,000 ಜನಸಂಖ್ಯೆಯನ್ನು ಹೊಂದಿರುವ ಎರಡು ಆಸ್ಪತ್ರೆಗಳ ನಗರವು ಸೋಮವಾರದ ವೇಳೆಗೆ 213  ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ, ಶುಕ್ರವಾರ 168 ಮತ್ತು ಮೇ 24 ರಂದು 31 ಕ್ಕೆ ಏರಿದೆ ಎಂದು ಕಾನ್ಸಾಸ್ ಸಿಟಿ ಸ್ಟಾರ್ ತಿಳಿಸಿದೆ.


ಇದನ್ನೂ ಓದಿ: Delta Plus Update: 12 ರಾಜ್ಯಗಳಲ್ಲಿ Delta Plus ರೂಪಾಂತರಿಯ 51 ಪ್ರಕರಣಗಳು, 8 ರಾಜ್ಯಗಳಿಗೆ ಪ್ರತ್ಯೇಕ ನಿರ್ದೇಶನ


'ನಾವು ಅಮೆರಿಕಾದಲ್ಲಿ ಸಾಂಕ್ರಾಮಿಕ ರೋಗದ ಎರಡು ವಿಭಿನ್ನ ಪಥಗಳನ್ನು ನೋಡುತ್ತಿದ್ದೇವೆ, ಇದರಲ್ಲಿ ಲಸಿಕೆಯನ್ನು ಹಾಕಿಸಿಕೊಳ್ಳದೆ ಇರುವಂತಹ ವ್ಯಕ್ತಿಗಳ ಸ್ಥಳಗಳಲ್ಲಿ ಇದು ಹೆಚ್ಚು ಸಮಸ್ಯೆಯಾಗಿದೆ" ಎಂದು ಜಾನ್ಸ್ ಹಾಪ್ಕಿನ್ಸ್ ಕೇಂದ್ರದ ಅಮೆಶ್ ಅಡಾಲ್ಜಾ ಹೇಳಿದ್ದಾರೆ."ದೇಶದ ಇತರ ಭಾಗಗಳಲ್ಲಿ, ಸಾಂಕ್ರಾಮಿಕ ರೋಗವು ಹೆಚ್ಚಾಗಿ ಸಾಮಾನ್ಯ ಉಸಿರಾಟದ ವೈರಸ್ ಆಗಿ ನಿರ್ವಹಿಸಲ್ಪಡುತ್ತದೆ" ಎಂದು ಅವರು ಹೇಳಿದರು.


ಫಿಜರ್, ಜಾನ್ಸನ್ ಮತ್ತು ಜಾನ್ಸನ್ ಮತ್ತು ಅಸ್ಟ್ರಾಜೆನೆಕಾ ಲಸಿಕೆಗಳು ತೀವ್ರವಾದ ಕೋವಿಡ್ ವಿರುದ್ಧ ಹೆಚ್ಚಿನ ಪರಿಣಾಮಕಾರಿತ್ವವನ್ನು ಉಳಿಸಿಕೊಂಡಿವೆ ಮತ್ತು ತಜ್ಞರ ಪ್ರಕಾರ, ಮಾಡರ್ನಾ ಲಸಿಕೆಯ ವಿಷಯದಲ್ಲೂ ಇದು ನಿಜವಾಗಿದೆ ಎನ್ನಲಾಗುತ್ತಿದೆ. ಆದ್ದರಿಂದ ಈಗ ಎಲ್ಲರಿಗೂ ಲಸಿಕೆ ಹಾಕುವುದು ಈಗ ಅತಿ ತುರ್ತಾದ ಸಂಗತಿಯಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 


ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.