ನವದೆಹಲಿ:ಕೊರೊನಾ ವೈರಸ್ ಲಾಕ್ ಡೌನ್ ನಡುವೆ ಯುನೈಟೆಡ್ ಕಿಂಗ್ಡಂ ನಲ್ಲಿ ಪಾಪ್ಪಜ್ಜಿಗಳಿಗೆ ಬೇಡಿಕೆ ಹೆಚ್ಚಾಗತೊಡಗಿದೆ ಹಾಗೂ ಇದರ ಇಂದಿನ ಕಾರಣ ಕೂಡ ಲಾಕ್ ಡೌನ್ ಎಂದು ಹೇಳಲಾಗಿದೆ. ಯುಕೆಯಲ್ಲಿ ಜನರು ತಮ್ಮ ಕುಟುಂಬ ಹಾಗೂ ಮಕ್ಕಳ ಮನರಂಜನೆಗೆ ನಾಯಿಗಳನ್ನು ಖರೀದಿಸಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. 


COMMERCIAL BREAK
SCROLL TO CONTINUE READING

'ಕೆನೆಲ್ ಕ್ಲಬ್' ಸಂಘಟನೆ ನೀಡಿರುವ ಒಂದು ವರದಿಯ ಪ್ರಕಾರ ನಾಯಿಗಳ ಮಾಹಿತಿ ಪಡೆಯುವವರ ಸಂಖ್ಯೆಯಲ್ಲಿ ಶೇ. 180ರಷ್ಟು ಏರಿಕೆಯಾಗಿದೆ. ಆದರೆ, ಆದರೆ, ಸಾಮಾಜಿಕ ಚಟುವಟಿಕೆಗಳು ಆರಂಭವಾಗುತ್ತಿದ್ದಂತೆ ಇವುಗಳಲ್ಲಿ ಹಲವು ನಾಯಿಗಳು ಸಾವನ್ನಪ್ಪಲಿವೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ ಮತ್ತು ಜನರು ಮುಂಬರುವ ಜವಾಬ್ದಾರಿಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಲಿದ್ದಾರೆ ಎಂದಿದ್ದಾರೆ.


ನಾಯಿ ತಳಿಗಳನ್ನು ಮಾರಾಟ ಮಾಡುವವರು ನಾಯಿಗಳ ಭವಿಷ್ಯದ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ, ಜನರು ಮಾತ್ರ ಲಾಕ್ ಡೌನ್ ಅವಧಿಯಲ್ಲಿ ತಮ್ಮ ಕುಟುಂಬ ಹಾಗೂ ಮಕ್ಕಳ ಮನರಂಜನೆಗೆ ನಾಯಿ ಖರೀದಿಸಲು ಬಯಸುತ್ತಿದ್ದಾರೆ, ಆದರೆ, ಒಂದು ನಾಯಿಯನ್ನು ಬೆಳೆಸಲು ಬೇಕಾಗುವ ಪರಿಶ್ರಮ ಹಾಗೂ ಹಣದ ಕುರಿತು ಅವರಿಗೆ ಮಾಹಿತಿ ಇಲ್ಲ ಎಂದು ಅವರು ಹೇಳಿದ್ದಾರೆ.


ಮೂಲಗಳಿಂದ ಬಂದ ಮಾಹಿತಿ ಪ್ರಕಾರ ಯುನೈಟೆಡ್ ಕಿಂಗ್ಡಮ್ ನಲ್ಲಿ ಹೆಚ್ಚಾಗಿರುವ ಈ ಆಕಸ್ಮಿಕ ನಾಯಿಗಳ ಬೇಡಿಕೆಯ ಹಿನ್ನೆಲೆ, ನಾಯಿ ತಳಿ ಮಾರಾಟಗಾರರು ನಾಯಿಯನ್ನು ಕೇಳಲು ಬರುವವರ ಹಿನ್ನೆಲೆಯನ್ನು ಪರೀಕ್ಷಿಸುತ್ತಿದ್ದಾರೆ. ಒಂದು ವೇಳೆ ನಾಯಿಯನ್ನು ಖರೀದಿಸಲು ಬಂದವರ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಕೊರತೆ ಕಂಡುಬಂದರೆ ಅವರು ನಾಯಿಗಳನ್ನು ಸಾಕಲು ನೀಡಲು ನಿರಾಕರಿಸುತ್ತಿದ್ದಾರೆ ಎನ್ನಲಾಗಿದೆ. ದೇಶಾದ್ಯಂತ ಹೆಚ್ಚಾಗುತ್ತಿರುವ ನಾಯಿಗಳ ಬೇಡಿಕೆಯ ಹಿನ್ನೆಲೆ ಅಲ್ಲಿನ ರೆಸ್ಕ್ಯೂ ಸೆಂಟರ್ ಗಳಲ್ಲಿಯೂ ಕೂಡ ನಾಯಿಗಳ ಕೊರತೆ ಎದುರಾಗುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ.