ನವದೆಹಲಿ: ಡೆಂಗ್ಯೂ ಒಂದು ಅಪಾಯಕಾರಿ ಕಾಯಿಲೆಯಾಗಿದ್ದು, ಇದು ವಿಶ್ವಾದ್ಯಂತ ವ್ಯಾಪಕವಾಗಿ ಹರಡುತ್ತಿದೆ.  WHO ಪ್ರಕಾರ, ಪ್ರತಿ ವರ್ಷ 35-36 ಸಾವಿರಕ್ಕೂ ಹೆಚ್ಚು ಜನರು ಡೆಂಗ್ಯೂನಿಂದ ಸಾವನ್ನಪ್ಪುತ್ತಾರೆ. ಇತ್ತೀಚಿನ ದಿನಗಳಲ್ಲಿ, ಭಾರತ ಮತ್ತು ಬಾಂಗ್ಲಾದೇಶ ಸೇರಿದಂತೆ ಹಲವು ದೇಶಗಳಲ್ಲಿ ಡೆಂಗ್ಯೂ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಕಳೆದ 9 ತಿಂಗಳಲ್ಲಿ ಬಾಂಗ್ಲಾದೇಶದಲ್ಲಿ 1,017 ಮಂದಿ ಡೆಂಗ್ಯೂಗೆ ಬಲಿಯಾಗಿದ್ದು, ಎರಡು ಲಕ್ಷಕ್ಕೂ ಹೆಚ್ಚು ಮಂದಿ ಈ ಕಾಯಿಲೆಗೆ ತುತ್ತಾಗಿದ್ದಾರೆ.


COMMERCIAL BREAK
SCROLL TO CONTINUE READING

ಅಲ್ ಜಜೀರಾ ವರದಿಯ ಪ್ರಕಾರ, ಡೆಂಗ್ಯೂನಿಂದ ಸಾವನ್ನಪ್ಪಿದವರ ಸಂಖ್ಯೆ ಕಳೆದ ವರ್ಷಕ್ಕಿಂತ 4 ಪಟ್ಟು ಹೆಚ್ಚಾಗಿದೆ. ಮೃತಪಟ್ಟವರಲ್ಲಿ 112 ಮಂದಿ 15 ವರ್ಷದೊಳಗಿನ ಮಕ್ಕಳಾಗಿದ್ದಾರೆ. ಡೆಂಗ್ಯೂ ಪೀಡಿತರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಕಷ್ಟವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆಸ್ಪತ್ರೆಗೆ ದಾಖಲಾದ ಹೆಚ್ಚಿನ ರೋಗಿಗಳು ಎರಡನೇ ಅಥವಾ ಮೂರನೇ ಬಾರಿಗೆ ಡೆಂಗ್ಯೂಗೆ ತುತ್ತಾಗಿದ್ದಾರೆ ಎಂದು ಢಾಕಾದ ಶಹೀದ್ ಸುಹ್ರವರ್ದಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಇದೇ ಕಾರಣಕ್ಕೆ ಅವರ ಸ್ಥಿತಿ ಹದಗೆಡುತ್ತಿದೆ.


ಭಾರತದಲ್ಲಿ ಪರಿಸ್ಥಿತಿ ಹೇಗಿದೆ?
ಭಾರತದ ಹಲವು ರಾಜ್ಯಗಳಲ್ಲಿಯೂ ಡೆಂಗ್ಯೂ ಹಾವಳಿ ಹೆಚ್ಚುತ್ತಿದೆ. ದೆಹಲಿ, ಕೋಲ್ಕತ್ತಾದಂತಹ ನಗರಗಳಲ್ಲಿ ಡೆಂಗ್ಯೂ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ವೈದ್ಯರ ಪ್ರಕಾರ, ದೆಹಲಿ-ಎನ್‌ಸಿಆರ್‌ನ ಆಸ್ಪತ್ರೆಗಳಿಗೆ ಬರುವ ಅರ್ಧಕ್ಕಿಂತ ಹೆಚ್ಚು ರೋಗಿಗಳಲ್ಲಿ ಡೆಂಗ್ಯೂ ಪತ್ತೆಯಾಗುತ್ತಿದೆ. ಇದು ಗಂಭೀರ ಆರೋಗ್ಯ ಬೆದರಿಕೆಯಾಗಿ ಮುಂದುವರೆದಿದೆ, ಈ ಕಾರಣದಿಂದಾಗಿ ಎಲ್ಲಾ ಜನರು ಎಚ್ಚರಿಕೆ ವಹಿಸುವುದು ತುಂಬಾ ಮುಖ್ಯವಾಗಿದೆ. ಇದೇ ವೇಳೆ ದೊರೆತ ಮಾಹಿತಿಯ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಈ ವರ್ಷ ಡೆಂಗ್ಯೂ ಸೋಂಕಿತ ರೋಗಿಗಳ ಸಂಖ್ಯೆ 38 ಸಾವಿರಕ್ಕೂ ಹೆಚ್ಚಿದೆ.


ಡೆಂಗ್ಯೂ ಲಕ್ಷಣಗಳು
ಜ್ವರ, ತಲೆನೋವು, ಸ್ನಾಯು ನೋವು, ಕೀಲು ನೋವು ಮತ್ತು ವಾಂತಿ ಮುಂತಾದವು ಡೆಂಗ್ಯೂನ ಲಕ್ಷಣಗಳಾಗಿವೆ. ತೀವ್ರತರವಾದ ಪ್ರಕರಣಗಳಲ್ಲಿ, ಡೆಂಗ್ಯೂ ರಕ್ತಸ್ರಾವ, ಅಂಗಾಂಗ ವೈಫಲ್ಯ ಮತ್ತು ಸಾವಿಗೆ ಕಾರಣವಾಗಬಹುದು.


ಡೆಂಗ್ಯೂನಿಂದ ನಿಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ?
- ಸೋಂಕಿತ ಸೊಳ್ಳೆಗಳ ಕಡಿತವನ್ನು ತಪ್ಪಿಸಿ.
- ಬೆಳಗ್ಗೆ 5 ರಿಂದ ಸಂಜೆ 7 ರವರೆಗೆ ಹೊರಗೆ ಹೋಗುವುದನ್ನು ತಪ್ಪಿಸಿ.
- ಸಂಪೂರ್ಣ ದೇಹವನ್ನು ಆವರಿಸುವಂತಹ ಬಟ್ಟೆಗಳನ್ನು ಧರಿಸಿ.
- ಸೊಳ್ಳೆ ಪರದೆ ಬಳಸಿ.
- ಸೊಳ್ಳೆ ನಿವಾರಕ ಕ್ರೀಮ್ ಅಥವಾ ಸ್ಪ್ರೇ ಬಳಸಿ.
- ನಿಮ್ಮ ಮನೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ಕ್ರಮಕೈಗೊಳ್ಳಿ.
- ನೀರು ಸಂಗ್ರಹವಾಗಲು ಬಿಡಬೇಡಿ.
- ಟೈರ್‌ಗಳು, ಕೂಲರ್‌ಗಳು, ಮಡಕೆಗಳು ಮತ್ತು ಇತರ ಪಾತ್ರೆಗಳಲ್ಲಿ ನೀರು ಸಂಗ್ರಹವಾಗಲು ಬಿಡಬೇಡಿ.

ಇದನ್ನೂ ಓದಿ-Cholesterol-Diabetes, ತೂಕ ಇಳಿಕೆ, ಕ್ಯಾನ್ಸರ್, ಹೃದ್ರೋಗ ಎಲ್ಲದಕ್ಕೂ ಒಂದೇ ರಾಮಬಾಣ ಈ ರೊಟ್ಟಿ!

- ಮನೆಯ ಒಳಗೆ ಮತ್ತು ಹೊರಗೆ ಶುಚಿತ್ವವನ್ನು ಕಾಪಾಡಿಕೊಳ್ಳಿ.
- ಡೆಂಗ್ಯೂ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ.

ಇದನ್ನೂ ಓದಿ-ಉಗುರು ಬೆಚ್ಚನೆಯ ನೀರಿನಲ್ಲಿ ಬೆರೆಸಿ ಈ ಹಸಿರು ಪೌಡರ್ ಸೇವಿಸಿ, ಮೇಣದ ಹಾಗೆ ಕರಗುತ್ತೆ ಹೊಟ್ಟೆ ಭಾಗದ ಬೊಜ್ಜು!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.