ವಿಶ್ವಸಂಸ್ಥೆ: ಮಧ್ಯ ಅಮೇರಿಕದಲ್ಲಿ 1,27,000 ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದು, ಈವರೆಗೆ 124 ಜನರು ಸಾವನ್ನಪ್ಪಿದ್ದಾರೆ. ಕ್ಸಿನ್ಹುವಾ ಸುದ್ದಿ ಸಂಸ್ಥೆ, ಮಧ್ಯ ಅಮೆರಿಕದಲ್ಲಿ ಸೊಳ್ಳೆಯಿಂದ ಹರಡುವ ರೋಗವಾದ ಡೆಂಗ್ಯೂ ಮಹಾಮಾರಿಗೆ ಆಗಸ್ಟ್ 8 ರಿಂದ ಈವರೆಗೆ ಕನಿಷ್ಠ 124 ಜನರು ಸಾವನ್ನಪ್ಪಿದ್ದಾರೆ ಎಂದು ಯುನೈಟೆಡ್ ನೇಷನ್ಸ್ ಕೋಡಿನೇಷನ್ ಆಫೀಸ್ ಫಾರ್ ಹ್ಯೂಮನ್ ಅಫೇರ್ಸ್ (ಒಸಿಎಚ್ಎ) ಅಧಿಕಾರಿಗಳು ಬುಧವಾರ ಹೇಳಿರುವುದಾಗಿ ವರದಿ ಮಾಡಿದೆ. 


COMMERCIAL BREAK
SCROLL TO CONTINUE READING

ಮಕ್ಕಳು ಮತ್ತು ಹದಿಹರೆಯದವರೇ ಅಧಿಕ:
"ಇದು ಮಕ್ಕಳು ಮತ್ತು ಹದಿಹರೆಯದವರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ" ಎಂದು OCHA ಹೇಳಿದೆ. ಮಧ್ಯ ಅಮೆರಿಕಾದಲ್ಲಿ ಡೆಂಗ್ಯೂ ನಿವಾರಣೆಗಾಗಿ, ವಿಶ್ವಸಂಸ್ಥೆ ಮತ್ತು ಮಾನವ ಸಂಘಟನೆಗಳು ವೈದ್ಯಕೀಯ ಸರಬರಾಜು ಮತ್ತು ಸಲಕರಣೆಗಳಿಗಾಗಿ ಸರ್ಕಾರಕ್ಕೆ ಸಹಾಯ ಮಾಡುತ್ತಿವೆ ಎನ್ನಲಾಗಿದೆ.


ಜನರಿಗೆ ಅರಿವು ಮೂಡಿಸುವ ಪ್ರಯತ್ನ ಜಾರಿ:
ಸಮುದಾಯ ವೆಕ್ಟರ್ ನಿಯಂತ್ರಣ ಮತ್ತು ಕಣ್ಗಾವಲು ತಂಡದಿಂದ ಡೆಂಗ್ಯೂ ಬಗೆ ಮನೆ-ಮನೆಗೆ ಹೋಗಿ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ. ಇದಲ್ಲದೆ ಸಮುದಾಯ ಆರೋಗ್ಯ ಕೇಂದ್ರಗಳಿಗೆ ನೇರ ತಾಂತ್ರಿಕ ಬೆಂಬಲ ಒದಗಿಸಲಾಗುತ್ತಿದೆ ಎಂದು ಹೇಳಲಾಗಿದೆ.