Viral Video:  ದೇಹಕ್ಕೆ ತ್ವರಿತವಾಗಿ ಶಕ್ತಿ ಬೇಕು ಅಥವಾ ಏನಾದರೂ ಆರೋಗ್ಯಕರವಾಗಿರುವುದನ್ನು ಸೇವಿಸಬೇಕು ಎಂದರೆ, ಹೆಚ್ಚಿನ ಜನರು ಬಾಳೆಹಣ್ಣು ತಿನ್ನಲು ಇಷ್ಟಪಡುತ್ತಾರೆ. ಆದರೆ ಇಂದು ನಾವು ನಿಮಗೆ ನಾವು ನಿಮಗೆ ಒಂದು ಬಾಳೆಹಣ್ಣಿನ ಪರಿಚಯವನ್ನು ಮಾಡಿಕೊಡುತ್ತಿದ್ದು, ಈ ಬಾಳೆಹಣ್ಣನ್ನು ನೋಡಿ ನೀವೂ ಕೂಡ ಒಂದು ಕ್ಷಣ ನಿಬ್ಬೆರಗಾಗುವಿರಿ. ಏಕೆಂದರೆ ಒಬ್ಬ ವ್ಯಕ್ತಿ  ಈ ಸಂಪೂರ್ಣ ಬಾಳೆಹಣ್ಣನ್ನು ಮುಗಿಸಲು ಸಾಧ್ಯವಿಲ್ಲ. ಇಂದು ನಾವು ನಿಮಗೆ ವಿಶ್ವದ ಅತಿದೊಡ್ಡ ಬಾಳೆಹಣ್ಣಿನ ವೀಡಿಯೊವನ್ನು ತೋರಿಸುತ್ತಿದ್ದೇವೆ, ಇದರ ತೂಕ ಒಂದು ಚಿಕ್ಕ ಮಗುವಿನ ತೂಕಕ್ಕೆ ಸಮನಾಗಿರುತ್ತದೆ ಮತ್ತು ಅದನ್ನು ತಿನ್ನುವುದು ಯಾವುದೇ ಮನುಷ್ಯನ ಸಾಮರ್ಥ್ಯದ ವಿಷಯವಲ್ಲ. ಹಾದಾದರೆ, ತಡಮಾಡದೆ  ನೀವೂ ಕೂಡ ಈ ದೈತ್ಯ ಬಾಳೆಹಣ್ಣಿನ ವಿಡಿಯೋವನ್ನು ಒಮ್ಮೆ ನೋಡಿಯೇ ಬಿಡಿ.


ಇದನ್ನೂ ಓದಿ- Viral Video: ಇಂತಹ ಲಿಪ್ ಲಾಕ್ ಸೀನ್ ನೀವು ನಿಮ್ಮ ಲೈಫಲ್ಲೇ ನೋಡಿರ್ಲಿಕ್ಕಿಲ್ಲ! ವಿಡಿಯೋ ನೋಡಿ...​

COMMERCIAL BREAK
SCROLL TO CONTINUE READING

ಚಿಕ್ಕ ಮಗುವಿನ ತೂಕಕ್ಕೆ ಸಮಾನ
ಮನಕ್ ಗುಪ್ತಾ ಎಂಬ ಬಳಕೆದಾರರು ಅತಿದೊಡ್ಡ ಬಾಳೆಹಣ್ಣಿನ ಈ ವೀಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ ಒಬ್ಬ ವ್ಯಕ್ತಿಯು ತನ್ನ ಕೈಯಲ್ಲಿ ಈ ದೊಡ್ಡ ಬಾಳೆಹಣ್ಣನ್ನು ಹಿಡಿದುಕೊಂಡು ಅದನ್ನು ತಿನ್ನಲು ಪ್ರಯತ್ನಿಸುತ್ತಿರುವುದನ್ನು ನೀವು ನೋಡಬಹುದು.  ಆದರೆ ಅದನ್ನು ಸಂಪೂರ್ಣವಾಗಿ ತಿನ್ನುವುದು ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ. ಈ ವೀಡಿಯೊದಲ್ಲಿ ಆಸ್ಟ್ರೇಲಿಯಾದ ಪಪುವಾ ನ್ಯೂಗಿನಿಯಾ ದ್ವೀಪದ ಕೆಲವು ತುಣುಕುಗಳನ್ನು ತೋರಿಸಲಾಗಿದೆ, ಅಲ್ಲಿ ಈ ರೀತಿಯ ಬಾಳೆ ಗಿಡಗಳನ್ನು ಬೆಳೆಸಲಾಗುತ್ತದೆ ಮತ್ತು ಅದರಲ್ಲಿ ಅದರಲ್ಲಿ ಬರುವ ಬಾಳೆ ಹಣ್ಣುಗಳು ಉದ್ದಳತೆ ಒಂದು ಮೊಳಕ್ಕೆ ಸಮನಾಗಿರುತ್ತದೆ.


ಇದನ್ನೂ ಓದಿ-Viral Video: ಕಾಗೆ ದಾಳಿಯಿಂದ ಫಜೀತಿಗೊಳಗಾದ ಯುವಕ, ಅಷ್ಟಕ್ಕೂ ಆತ ಮಾಡಿದ್ದೇನು? ವಿಡಿಯೋ ನೋಡಿ...


ಗಿನ್ನೆಸ್ ಪುಸ್ತಕದಲ್ಲಿ ದಾಖಲೆಯಾಗಿದೆ
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ  ನ್ಯೂ ಪಪುವಾ ಗಿನಿಯಾದಿಂದ  ಬರುವ ಈ ಬಾಳೆಹಣ್ಣಿನ ಗಿಡಗಳನ್ನು ವಿಶ್ವದ ಅತಿ ದೊಡ್ಡ ಬಾಳೆ ಗಿಡ ಎಂದು ನಮೂಡಾಗಿದೆ. ಈ ಗಿಡದಲ್ಲಿ ಬರುವ ಬಾಳೆಹಣ್ಣಿನ ತೂಕ ಸುಮಾರು 3 ಕೆ.ಜಿ.ಯಷ್ಟಿದ್ದು, ಅಂದರೆ ಒಂದು ನವಜಾತ ಶಿಶುವಿಗೆ ಸಮ ಎಂದು ಹೇಳಲಾಗುತ್ತಿದೆ. ಆದರೆ, ಈ ಹಣ್ಣು ಹಣ್ಣಾಗಲು 5 ​​ವರ್ಷ ತೆಗೆದುಕೊಳ್ಳುವುದರಿಂದ ಇವುಗಳಿಗೆ ಹೆಚ್ಚಿನ ವ್ಯಾಪಾರ ಇಲ್ಲ. ಈ ಗಿಡದ ಕಾಂಡವು 15 ಮೀಟರ್ ಎತ್ತರದಲ್ಲಿದೆ ಮತ್ತು ಎಲೆಗಳು ಸಹ ನೆಲದಿಂದ 20 ಮೀಟರ್ ಎತ್ತರದಲ್ಲಿರುತ್ತವೆ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ-Viral Video: ರಸ್ತೆಗಿಳಿದ ವಿಶ್ವದ ಅತಿ ದೊಡ್ಡ ಹಾವು ಅನಕೊಂಡ, ನೋಡಿ ಸ್ಥಭ್ದರಾದ ಜನ!


ಅತಿದೊಡ್ಡ ಬಾಳೆಹಣ್ಣಿನ ವಿಡಿಯೋ ವೈರಲ್ ಆಗಿದೆ
ಅದೇನೇ ಇದ್ದರೂ ಪ್ರಸ್ತುತ ವಿಶ್ವದ ಅತಿ ದೊಡ್ಡ ಬಾಳೆಹಣ್ಣಿನ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ 38 ಸೆಕೆಂಡುಗಳ ವೀಡಿಯೊವನ್ನು 88 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಒಬ್ಬ ಬಳಕೆದಾರರು ಇಷ್ಟು ದೊಡ್ಡ ಬಾಳೆಹಣ್ಣು ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾ ಕಾಮೆಂಟ್ ಮಾಡಿದರೆ, ಇನ್ನೊಬ್ಬರು ಒಳ್ಳೆಯ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ ಎಂದು ಬರೆದಿದ್ದಾರೆ. ಇನ್ನೊಂದೆಡೆ ಮತ್ತೊರ್ವ ಬಳಕೆದಾರರು 5 ವರ್ಷಗಳಲ್ಲಿ ಹಣ್ಣಾಗುವ ಈ ಬಾಳೆಹಣ್ಣು ತಿನ್ನಲು ಕನಿಷ್ಠ 5 ದಿನಗಳು ಬೇಕು ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. 


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.