Hindu Temple: ಪಾಕಿಸ್ತಾನದಲ್ಲಿ ಮತ್ತೆ ಹಿಂದೂಗಳ ವಿರುದ್ಧ ತಾರತಮ್ಯ, ದೇವಸ್ಥಾನಕ್ಕೆ ಭೂಮಿ ನೀಡಲು ನಿರಾಕರಿಸಿದ ಸರ್ಕಾರ
Hindu Temple: ಇಸ್ಲಾಮಾಬಾದ್‌ನಲ್ಲಿ ಹಿಂದೂ ಸಮುದಾಯಕ್ಕೆ ದೇವಸ್ಥಾನ, ಸಮುದಾಯ ಕೇಂದ್ರ ಮತ್ತು ಸ್ಮಶಾನ (ಶ್ಮಶಾನ) ನಿರ್ಮಾಣಕ್ಕಾಗಿ ಇದನ್ನು ಹಂಚಲಾಯಿತು. ಆದರೆ ಈಗ ಹಸಿರು ಪ್ರದೇಶ ಎಂಬ ಕಾರಣ ನೀಡಿ ನಿವೇಶನ ಮಂಜೂರು ಮಾಡುವುದನ್ನು ರದ್ದುಗೊಳಿಸಲಾಗಿದೆ.
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಹಿಂದೂಗಳ ವಿರುದ್ಧ ತಾರತಮ್ಯದ ಮತ್ತೊಂದು ಪ್ರಕರಣ ಮುನ್ನೆಲೆಗೆ ಬಂದಿದೆ. ಇಲ್ಲಿ ರಾಜಧಾನಿ ಅಭಿವೃದ್ಧಿ ಪ್ರಾಧಿಕಾರ (ಸಿಡಿಎ) ಇಸ್ಲಾಮಾಬಾದ್‌ನಲ್ಲಿ ಮಂದಿರ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡುವುದನ್ನು ರದ್ದುಗೊಳಿಸಿದೆ. ರಾಜಧಾನಿಯ ಗ್ರೀನ್ ಬೆಲ್ಟ್‌ನಲ್ಲಿ ಹೊಸ ಕಟ್ಟಡಗಳ ನಿರ್ಮಾಣವನ್ನು ಕ್ಯಾಬಿನೆಟ್ ನಿಷೇಧಿಸಿದ ನಂತರ ಜಮೀನು ಹಂಚಿಕೆಯನ್ನು ರದ್ದುಗೊಳಿಸಲಾಗಿದೆ ಎಂದು ನಾಗರಿಕ ಸಂಸ್ಥೆಯ ವಕೀಲ ಜಾವೇದ್ ಇಕ್ಬಾಲ್ ಸೋಮವಾರ ಇಸ್ಲಾಮಾಬಾದ್ ಹೈಕೋರ್ಟ್‌ಗೆ (ಐಎಚ್‌ಸಿ) ತಿಳಿಸಿದರು.
5 ವರ್ಷಗಳ ಹಿಂದೆ ಹಂಚಿಕೆ ಆರಂಭವಾಗಿದೆ:
ಈ ಹಿಂದೆ ಸಿಡಿಎ ಅಲ್ಪಸಂಖ್ಯಾತ ಸಮುದಾಯದ ಅನುಕೂಲಕ್ಕಾಗಿ ಎಚ್-9/2 ಸೆಕ್ಟರ್‌ನಲ್ಲಿ ದೇವಸ್ಥಾನ (Temple) ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡಿತ್ತು. ಈ ಸ್ಥಳದಲ್ಲಿ ದೇವಸ್ಥಾನ, ಸಮುದಾಯ ಭವನ ಹಾಗೂ ಸ್ಮಶಾನ ಭೂಮಿ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ವರದಿ ತಿಳಿಸಿದೆ. ಕಳೆದ ವರ್ಷ ಜುಲೈನಲ್ಲಿ ನಡೆದ ವಿಚಾರಣೆ ವೇಳೆ ಸಿಡಿಎಯ ನಗರ ಯೋಜನಾ ನಿರ್ದೇಶಕರು 2016ರಲ್ಲಿ ನಿವೇಶನ ಹಂಚಿಕೆ ಪ್ರಕ್ರಿಯೆ ಆರಂಭವಾಗಿದೆ ಎಂದು ಪೀಠಕ್ಕೆ ತಿಳಿಸಿದ್ದರು.
ಇದನ್ನೂ ಓದಿ- ತೀವ್ರ ಸಂಕಷ್ಟದಲ್ಲಿ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ, ಹಣದುಬ್ಬರ ಪ್ರಮಾಣ ಶೇ 9 ಕ್ಕೆ ಏರಿಕೆ
ದೇವಸ್ಥಾನ, ಸಮುದಾಯ ಭವನ ಮತ್ತು ಸ್ಮಶಾನ (ಶ್ಮಶಾನ) ನಿರ್ಮಾಣಕ್ಕಾಗಿ ಈ ಸ್ಥಳವನ್ನು ಹಿಂದೂ ಸಮುದಾಯಕ್ಕೆ (Hindu Community) ನೀಡಲಾಗಿದೆ ಎಂದು ವಿಚಾರಣೆ ವೇಳೆ ತಿಳಿಸಲಾಗಿದೆ. ವರದಿಯ ಪ್ರಕಾರ, "ಧಾರ್ಮಿಕ ವ್ಯವಹಾರಗಳ ಸಚಿವಾಲಯ, ವಿಶೇಷ ಶಾಖೆ ಮತ್ತು ಇಸ್ಲಾಮಾಬಾದ್ ಆಡಳಿತದೊಂದಿಗೆ ಸಮಾಲೋಚಿಸಿದ ನಂತರ ಪ್ಲಾಟ್ ಹಂಚಿಕೆ ಮಾಡಲಾಗಿದೆ" ಉಲ್ಲೇಖಿಸಲಾಗಿದೆ.
ಹಿಂದೂ ಪಂಚಾಯತ್ ಗೆ ಭೂಮಿ ಹಸ್ತಾಂತರ:
"2017 ರಲ್ಲಿ 3.89 ಕನಲ್‌ಗಳ ಪ್ರದೇಶವನ್ನು ನೀಡಲಾಯಿತು ಮತ್ತು 2018 ರಲ್ಲಿ ಹಿಂದೂ ಪಂಚಾಯತ್‌ಗೆ ಹಸ್ತಾಂತರಿಸಲಾಯಿತು" ಎಂದು ಸಿಡಿಎ ಅಧಿಕಾರಿ ಪೀಠಕ್ಕೆ ತಿಳಿಸಿದರು.
ಇದನ್ನೂ ಓದಿ- Global Vaccination Program: ಕೊರೊನಾ ಲಸಿಕೆ ಹಾಕಿಸಿಕೊಂಡು ಕೋಟ್ಯಾಧಿಪತಿಯಾದ ಮಹಿಳೆ
ಮಾನವ ಹಕ್ಕುಗಳ ಆಯೋಗದ (HRC) ಸದಸ್ಯ ಕೃಷ್ಣ ಶರ್ಮಾ ಪ್ರಕಾರ, ಇಸ್ಲಾಮಾಬಾದ್ ಮತ್ತು ಅದರ ಹೊರವಲಯದಲ್ಲಿ ಸುಮಾರು 3,000 ಹಿಂದೂ ಕುಟುಂಬಗಳು ವಾಸಿಸುತ್ತಿವೆ. ಹೋಳಿ ಮತ್ತು ದೀಪಾವಳಿಯಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಿಸಲು ಅಥವಾ ಮದುವೆ ಮತ್ತು ಅಂತ್ಯಕ್ರಿಯೆಗಳನ್ನು ಮಾಡಲು ಅವರಿಗೆ ಸೂಕ್ತವಾದ ಸ್ಥಳದ ಕೊರತೆಯಿದೆ ಎಂದು ವರದಿ ಹೇಳಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.