Diwali Celebration In US Pennsylvania: ಭಾರತದಲ್ಲಿ ಮಾತ್ರವಲ್ಲ ಈಗ ವಿದೇಶದಲ್ಲೂ ಕೂಡ ದೀಪಾವಳಿ ಆಚರಣೆಗಾಗಿ ರಜೆ ಇರಲಿದೆ. ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ದೀಪಾವಳಿಯನ್ನು ರಾಷ್ಟ್ರೀಯ ರಜಾದಿನವೆಂದು ಘೋಷಿಸಲಾಗಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಪೆನ್ಸಿಲ್ವೇನಿಯಾ ಹಿಂದೂ ಹಬ್ಬ ದೀಪಾವಳಿಯನ್ನು ರಾಷ್ಟ್ರೀಯ ರಜಾದಿನವೆಂದು ಘೋಷಿಸಿ ಆದೇಶ ಹೊರಡಿಸಿದೆ. 


COMMERCIAL BREAK
SCROLL TO CONTINUE READING

ಈ ಕುರಿತಂತೆ ಪೆನ್ಸಿಲ್ವೇನಿಯಾ ಸೆನೆಟರ್ ನಿಖಿಲ್ ಸವಾಲ್ ಬುಧವಾರ (ಏಪ್ರಿಲ್ 26) ದಂದು ಟ್ವೀಟ್ ಮಾಡಿದ್ದು, ಯುನೈಟೆಡ್ ಸ್ಟೇಟ್ಸ್ ಆಫ್ ಪೆನ್ಸಿಲ್ವೇನಿಯಾ ಹಿಂದೂ ಹಬ್ಬ ದೀಪಾವಳಿಯನ್ನು ರಾಷ್ಟ್ರೀಯ ರಜಾದಿನವೆಂದು ಘೋಷಿಸಿದೆ. ಪೆನ್ಸಿಲ್ವೇನಿಯಾ ಸ್ಟೇಟ್ ಸೆನೆಟ್ ದೀಪಾವಳಿಯನ್ನು ರಾಷ್ಟ್ರೀಯ ರಜಾದಿನವೆಂದು ಗುರುತಿಸಲು ಸರ್ವಾನುಮತದಿಂದ ಅಂಗೀಕಾರವನ್ನು ನೀಡಿದೆ. ಈ ಬೆಳಕು ಮತ್ತು ಸಂಪರ್ಕದ ಹಬ್ಬವನ್ನು ಆಚರಿಸುವ ಎಲ್ಲಾ ಪೆನ್ಸಿಲ್ವೇನಿಯನ್ನರಿಗೆ ಸ್ವಾಗತ. ನೀವು ನಮಗೆ ಮುಖ್ಯ. . ಈ ಮಸೂದೆಯನ್ನು ಪರಿಚಯಿಸುವಲ್ಲಿ ನಿಮ್ಮೊಂದಿಗೆ ಕೈ ಜೋಡಿಸುವ ಸೌಭಾಗ್ಯ ನಮ್ಮದಾಯಿತು ಇದಕ್ಕಾಗಿ, @rothman_greg ನಿಮಗೆ ಧನ್ಯವಾದಗಳು ಎಂದು ಮಾಹಿತಿ ಹಂಚಿಕೊಂಡಿದ್ದಾರೆ. 


ದೀಪಾವಳಿಯಂದು ಈ ಕೆಲಸವನ್ನು ಮಾಡಿದರೆ ಸಕಲೈಶ್ವರ್ಯ ನಿಮ್ಮದಾಗುತ್ತದೆ


ಮೈ ಟ್ವಿನ್ ಟಿಯರ್ಸ್ ವರದಿಯ ಪ್ರಕಾರ,  2023ರ ಫೆಬ್ರವರಿಯಲ್ಲಿ, ಪೆನ್ಸಿಲ್ವೇನಿಯಾ ಸ್ಟೇಟ್ ಸೆನೆಟರ್ ಗ್ರೆಗ್ ರೋಥ್‌ಮನ್ ಮತ್ತು ಸೆನೆಟರ್ ನಿಖಿಲ್ ಸವಾಲ್ ದೀಪಾವಳಿಯನ್ನು ಅಧಿಕೃತ ರಾಷ್ಟ್ರೀಯ ರಜಾದಿನವನ್ನಾಗಿ ಮಾಡುವ ಮಸೂದೆಯನ್ನು ಪರಿಚಯಿಸಿದರು ಎಂಬುದು ಗಮನಾರ್ಹವಾಗಿದೆ. 


ಅಮೆರಿಕದ ಈ ರಾಜ್ಯದಲ್ಲಿದ್ದಾರೆ ಸುಮಾರು 200,000 ದಕ್ಷಿಣ ಏಷ್ಯಾ ನಾಗರೀಕರು: 
ಮೈ ಟ್ವಿನ್ ಟಿಯರ್ಸ್ ವರದಿಯ ಪ್ರಕಾರ, ಅಮೆರಿಕದ ಪೆನ್ಸಿಲ್ವೇನಿಯಾ ರಾಜ್ಯದಲ್ಲಿ ಸುಮಾರು 200,000 ದಕ್ಷಿಣ ಏಷ್ಯಾದ ಪ್ರಜೆಗಳು ವಾಸಿಸುತ್ತಿದ್ದಾರೆ. ಇವರಲ್ಲಿ ಹೆಚ್ಚಿನ ಮಂದಿ ಹಿಂದೂಗಳ ಪವಿತ್ರ ಬೆಳಕಿನ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಮಸೂದೆಯಲ್ಲಿ ಇದನ್ನು ಉಲ್ಲೇಖಿಸಿರುವ ಸೆನೆಟರ್ ನಿಖಿಲ್ ಸವಾಲ್, ನಾವು ವಿವಿಧ ಸಂಸ್ಕೃತಿಗಳ ನಡುವೆ ಸಾಮರಸ್ಯವನ್ನು ಬಲಪಡಿಸಲು ಬಯಸುತ್ತೇವೆ. ಪ್ರತಿ ವರ್ಷ ಈ ಪವಿತ್ರ ಬೆಳಕಿನ ಹಬ್ಬ ದೀಪಾವಳಿಯನ್ನು ಇಲ್ಲಿನ ಜನರು ಮನೆ, ಮಂದಿರ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಆಚರಿಸುತ್ತಾರೆ. ದೀಪಾವಳಿಯನ್ನು ಅಧಿಕೃತ ರಜಾದಿನವನ್ನಾಗಿ ಘೋಷಿಸುವ ಮೂಲಕ ನಾವು ಪರಸ್ಪರ ಸಹೋದರತ್ವವನ್ನು ಹೆಚ್ಚಿಸಲು ಬಯಸುತ್ತೇವೆ ಎಂದು ಹೇಳಿದ್ದರು. 


ಇದನ್ನೂ ಓದಿ- ದೀಪಾವಳಿಯಂದು ಈ 6 ವಸ್ತುಗಳನ್ನು ಮನೆಗೆ ತರುವುದರಿಂದ ಅದೃಷ್ಟ


ದೀಪಾವಳಿ ಹಬ್ಬವು ಕತ್ತಲನ್ನು ಹೋಗಲಾಡಿಸಿ ಬೆಳಕು ಪಸರಿಸುವ ಹಬ್ಬವಾಗಿರುವುದರಿಂದ ಇದಕ್ಕೆ ಅಧಿಕೃತ ಮಾನ್ಯತೆ ನೀಡುವುದು ಅಗತ್ಯವಾಗಿದೆ. ಹಾಗಾಗಿ ಇದನ್ನು ಅಧಿಕೃತ ರಾಷ್ಟ್ರೀಯ ರಜಾದಿನವೆಂದು ಘೋಷಿಸುವಂತೆ ಸೆನೆಟರ್ ಗ್ರೆಗ್ ರೋಥ್‌ಮನ್ ಮತ್ತು ನಿಖಿಲ್ ಸವಾಲ್ ಪ್ರಸ್ತಾಪಿಸಿದ್ದರು ಎಂಬುದು ಉಲ್ಲೇಖನೀಯ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.