Cow Cuddling Tehrapy Benefits: ಆಸ್ಟ್ರೇಲಿಯಾದಲ್ಲಿ ಭಾರತೀಯ ಹಸುಗಳಿಂದ ಖಿನ್ನತೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಭಾರತದಲ್ಲಿ, ಹಸುವಿನ ಗೋಮೂತ್ರ ಮತ್ತು ಹಸುವಿನ ಹಾಲಿನ ಚಿಕಿತ್ಸೆಯ ಕುರಿತು ಹಕ್ಕು ಮಂಡಿಸಲಾಗುತ್ತಿದ್ದರೆ, ಆಸ್ಟ್ರೇಲಿಯಾದಲ್ಲಿ, ಹಸು ಖಿನ್ನತೆಗೆ ಚಿಕಿತ್ಸೆಯಾಗಿದೆ. ಕೇಳಲು ಸ್ವಲ್ಪ ವಿಚಿತ್ರ ಎನಿಸಿದರೂ ಕೂಡ ಇದು ನಿಜ. ಅಲ್ಲಿ ಹಸುಗಳನ್ನು ತಬ್ಬಿಕೊಳ್ಳುವ ಥೆರಪಿ ನಡೆಯುತ್ತಿದ್ದು, ಅದರಿಂದ ಖಿನ್ನತೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದ ಹಸುಗಳ ಆರೈಕೆಗಾಗಿ ಹಣವನ್ನೂ ಕೂಡ ಅಲ್ಲಿ ಪಡೆಯಲಾಗುತ್ತಿದೆ.


COMMERCIAL BREAK
SCROLL TO CONTINUE READING

ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ, ದೀರ್ಘಕಾಲದವರೆಗೆ ಮನೆಯಿಂದಲೇ ಕೆಲಸ ಮಾಡುವ ಜನರು ಮಾನಸಿಕ ಆರೋಗ್ಯದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ, ಇದಕ್ಕಾಗಿ ಭಾರತೀಯ ಹಸುಗಳನ್ನು ಈಗ ಆಸ್ಟ್ರೇಲಿಯಾದ ಉತ್ತರ ಕ್ವೀನ್ಸ್‌ಲ್ಯಾಂಡ್‌ನಲ್ಲಿ ಬಳಸಲಾಗುತ್ತಿದೆ. ಇಲ್ಲಿ 'ಹಸುಗಳನ್ನು ತಬ್ಬಿಕೊಳ್ಳುವ ಕೇಂದ್ರ'ಗಳನ್ನು ಸ್ಥಾಪಿಸಲಾಗಿದ್ದು, ಅವುಗಳಲ್ಲಿ ಮಾನಸಿಕ ಒತ್ತಡ ಮತ್ತು ಖಿನ್ನತೆಯಿಂದ ಬಳಲುತ್ತಿರುವವರು ಬಂದು ಹಸುಗಳೊಂದಿಗೆ ಕಾಲ ಕಳೆದು ಖಿನ್ನತೆಯಿಂದ ಮುಕ್ತರಾಗುತ್ತಿದ್ದಾರೆ. ಅಷ್ಟೇ ಅಲ್ಲ ಇದೀಗ ಅನೇಕ ವಿಮಾ ಕಂಪನಿಗಳು ಸಹ ಈ ಚಿಕಿತ್ಸೆಯನ್ನು ತಮ್ಮ ಆರೋಗ್ಯ ವಿಮೆ ಯೋಜನೆಗಳಲ್ಲಿ ಶಾಮೀಲುಗೊಳಿಸುತ್ತಿವೆ ಎನ್ನಲಾಗಿದೆ. ಇದಕ್ಕಾಗಿ ಭಾರತೀಯ ಹಸುಗಳನ್ನು ಮಾತ್ರ ಬಳಸಲಾಗುತ್ತಿದೆ.


ಇದನ್ನೂ ಓದಿ-ಕೆಲವೇ ದಿನಗಳಲ್ಲಿ ವೇಗವಾಗಿ ತೂಕ ಕಳೆದುಕೊಳ್ಳಬೇಕೇ? ಹಸಿರು ಪಪ್ಪಾಯಿ ಟ್ರೈ ಮಾಡಿ ನೋಡಿ!


ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, ಖಿನ್ನತೆಗೆ ಒಳಗಾದ ಜನರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಅಂತಹವರಲ್ಲಿ ಕೆಲ ಜನರು ಬಂದು ಹಸುಗಳೊಂದಿಗೆ ಸಾಕಷ್ಟು ಸಮಯ ಕಳೆಯುತ್ತಿದ್ದಾರೆ, ಅದು ಅವರಿಗೆ ಪ್ರಯೋಜನವನ್ನು ನೀಡುತ್ತಿದೆ. ಹಸುಗಳೊಂದಿಗೆ ಸಮಯ ಕಳೆಯುವ ಮೂಲಕ ಅವರು ಸುಧಾರಿಸುತ್ತಿದೆ ಮತ್ತು ಅವರಲ್ಲಿನ ಒಂಟಿತನದ ಭಾವನೆ ದೂರಾಗುತ್ತಿದೆ. ಹೀಗಾಗಿ ಅನೇಕ ಜನರು ಈ ಚಿಕಿತ್ಸೆಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ.


ಇದನ್ನೂ ಓದಿ-Paan Hair Mask: ಕೂದಲಿನ ಹಲವು ಸಮಸ್ಯೆಗಳಿಗೆ ರಾಮಬಾಣ ಉಪಾಯ ಈ ಪಾನ್ ಹೆಯರ್ ಮಾಸ್ಕ್!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.