`ಅಜಾದ್ ಕಾಶ್ಮೀರ್` ಎಂದು ಹೆಸರಿಸಲಾದ ಈ ಪಾಕ್ ಕುದುರೆಯೇ ಕಥೆ ನಿಮಗೆ ತಿಳಿದಿದೆಯೇ?
ಅವಸ್ಥೆಯಿಂದ ಬಳಲುತ್ತಿರುವ ಪಾಕಿಸ್ತಾನಕ್ಕೆ ಇದೀಗ ಹೊಸ ಸಮಸ್ಯೆಯೊಂದು ಹುಟ್ಟಿಕೊಂಡಿದೆ.
ನವದೆಹಲಿ:ಅವಸ್ಥೆಯ ಆಗರವಾಗಿರುವ ಪಾಕಿಸ್ತಾನಕ್ಕೆ ಇದೀಗ ಹೊಸ ಸಮಸ್ಯೆಯೊಂದು ಹುಟ್ಟಿಕೊಂಡಿದೆ. ಪಾಕ್ ಕುದುರೆ ರೆಸರ್ ಉಸ್ಮಾನ್ ಖಾನ್ ವರ್ಷ 2020ರ ಟೋಕಿಯೋ ಒಲಿಂಪಿಕ್ಸ್ ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಒಲಿಂಪಿಕ್ಸ್ ನಲ್ಲಿ ನಡೆಸಲಾಗುವ ಸಿಂಗಲ್ ಇಕ್ವೆಸ್ಟ್ರಿನ್ ಸ್ಪರ್ಧೆಗೆ ಅವರು ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಪಾಕಿಸ್ತಾನದ ಸಮಸ್ಯೆ ಇಲ್ಲಿಂದ ಪ್ರಾರಂಭವಾಗಿದೆ. ಏಕೆಂದರೆ, ಉಸ್ಮಾನ್ ಅವರ ಕುದುರೆಗೆ 'ಆಜಾದ್ ಕಾಶ್ಮೀರ್' ಎಂದು ಹೆಸರಿಡಲಾಗಿದೆ. ಹೀಗಾಗಿ ಭಾರತದ ಒಲಿಂಪಿಕ್ ಪದಾಧಿಕಾರಿಗಳು ಇದರ ಮೇಲೆ ಪ್ರಶ್ನೆ ಎತ್ತಿದ್ದಾರೆ. ಕುದುರೆಗೆ ಪಾಕ್ ಈ ರೀತಿ ಹೆಸರಿಟ್ಟಿರುವುದರ ವಿರುದ್ಧ ಭಾರತ ಆಕ್ಷೇಪ ಎತ್ತಿದೆ.
ಇಂಟರ್ನ್ಯಾಷನಲ್ ಇಕ್ವೆಸ್ಟ್ರಿಯನ್ ಫೆಡರೇಶನ್ (ಎಫ್ಐಎ) ಪ್ರಕಾರ, ಉಸ್ಮಾನ್ ಖಾನ್ ಕಳೆದ ವರ್ಷ ಏಪ್ರಿಲ್ನಲ್ಲಿ ಆಸ್ಟ್ರೇಲಿಯಾದಿಂದ 12 ವರ್ಷದ ಕುದುರೆಯನ್ನು ಖರೀದಿಸಿದ್ದರು ಎಂದಿದೆ. ಬಳಿಕ ಅವರು ತಮ್ಮ ಕುದುರೆಗೆ 'ಆಜಾದ್ ಕಾಶ್ಮೀರ' ಎಂಬ ಹೆಸರನ್ನು ಇಟ್ಟಿದ್ದಾರೆ ಎಂದಿದೆ. ಭಾರತದಿಂದ ಫವಾದ್ ಮಿರ್ಜಾ ಈ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ.
ಭಾರತೀಯ ಒಲಿಂಪಿಕ್ ಅಸೋಸಿಯೇಶನ್ ಪಾಕಿಸ್ತಾನದ ಕುದುರೆ ಹೆಸರಿನ ವಿಷಯದಲ್ಲಿ ಇದೀಗ ಕಾನೂನಿನ ಆಯ್ಕೆಗಳ ಕುರಿತು ಚಿಂತನೆ ನಡೆಸಲು ಆರಂಭಿಸಿದೆ. ಇದರ ವಿರುದ್ಧ ಅಂತಾರಾಷ್ಟ್ರೀಯ ಆಯ್ಕೆ ಸಮಿತಿಗೆ ದೂರು ನೀಡುವುದರ ಕುರಿತೂ ಕೂಡ ಸಂಘ ವಿಚಾರ-ವಿಮರ್ಶೆ ನಡೆಸುತ್ತಿದೆ. ಪಾಕಿಸ್ತಾನ ಆಟಗಾರನ ಈ ಕ್ರಮ ಒಲಿಂಪಿಕ್ ಚಾರ್ಟರ್ ನ ನಿಯಮ 50ರ ಉಲ್ಲಂಘನೆಯಾಗಿದೆ ಎಂದಿದೆ. ಆಟದಲ್ಲಿನ ನಿಸ್ಪಕ್ಷಪಾತದ ಕುರಿತು ಈ ನಿಯಮ ಬರೆಯಲಾಗಿದೆ. ನಿಯಮ 50ರ ಪ್ರಕಾರ, ಒಲಿಂಪಿಕ್ಸ್ ಕ್ರೀಡಾಕೂಟದ ಸಂದರ್ಭದಲ್ಲಿ ಸ್ಥಳ ಅಥವಾ ಅನ್ಯ ಯಾವುದೇ ಕ್ಷೇತ್ರದಲ್ಲಿ ಯಾವುದೇ ರೀತಿಯ ರಾಜಕೀಯ, ಧಾರ್ಮಿಕ, ಜಾತೀಯ ಪ್ರಚಾರ ಮಾಡಲು ಅನುಮತಿ ನೀಡುವುದಿಲ್ಲ.
ಪಾಕಿಸ್ತಾನ 'ಆಜಾದ್ ಕಾಶ್ಮೀರ' ಎಂದು ಕರೆಯುವ ಪ್ರದೇಶಕ್ಕೆ ಭಾರತ ಪಾಕ್ ಆಕ್ರಮಿತ ಕಾಶ್ಮೀರ ಎಂದು ಹೇಳುತ್ತದೆ. ಭಾರತೀಯ ಒಲಿಂಪಿಕ್ ಅಧಿಕಾರಿಗಳು ಒಲಿಂಪಿಕ್ ಚಾರ್ಟರ್ ನ ನಿಯಮ 50ರ ಅಡಿ ಇದೀಗ ತಮ್ಮ ಆಕ್ಷೇಪ ಎತ್ತಿದ್ದಾರೆ. ಒಂದು ವೇಳೆ ಭಾರತದ ಈ ಆಕ್ಷೇಪಕ್ಕೆ ಅಂತಾರಾಷ್ಟ್ರೀಯ ಒಲಿಂಪಿಕ್ ಅಸೋಸಿಯೇಷನ್ ಮನ್ನಣೆ ದೊರಕಿದ್ದೇ ಆದಲ್ಲಿ, IOCನ ನಿಯಮ 50ರ ಅಡಿ ಪಾಕಿಸ್ತಾನ ತನ್ನ ಒಲಿಂಪಿಕ್ ಕೋಟಾ ಕಳೆದುಕೊಳ್ಳಲಿದೆ. ಅಷ್ಟೇ ಯಾಕೆ ಈ ಸ್ಪರ್ಧೆಗೆ ಅರ್ಹತೆ ಪಡೆದವರ ಪಟ್ಟಿಯಲ್ಲಿ ಉಸ್ಮಾನ್ ಏಕೈಕ ಪಾಕಿಸ್ತಾನಿ ಕುದುರೆ ಸವಾರರಾಗಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ.