World's Largest Railway Station grand central terminal: ಜಗತ್ತಿನ ಅತಿ ದೊಡ್ಡ ರೈಲು ನಿಲ್ದಾಣ ಎಲ್ಲಿದೆ ಗೊತ್ತಾ? ಈ ಬಗ್ಗೆ ಮಾಹಿತಿ ಇಲ್ಲದಿದ್ದರೆ ಈ ವರದಿಯನ್ನು ಸಂಪೂರ್ಣವಾಗಿ ಓದಿ. ನೀವು ಈ ನಿಲ್ದಾಣವು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾ ಮತ್ತು ಭಾರತ ದಲ್ಲಿರಬಹುದು ಎಂದು ಊಹೆ ಮಾಡಬಹುದು. ಆದರೆ ನಿಮ್ಮ ಊಹೆ ತಪ್ಪು. ಅಮೆರಿಕದ (ಯುಎಸ್) ನ್ಯೂಯಾರ್ಕ್ ನಗರದಲ್ಲಿ ಜಗತ್ತಿನ ಅತಿ ದೊಡ್ಡ ರೈಲು ನಿಲ್ದಾಣ ಇದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Tail Baby: 6 ಸೆಂ.ಮೀ ಬಾಲದೊಂದಿಗೆ ಜನಿಸಿದ ಹೆಣ್ಣು ಮಗು! ಬಾಲ ಕಂಡು ಭಯದಿಂದ ವೈದ್ಯರು ಮಾಡಿದ್ದು…!


ವಿಶ್ವದ ಅತಿದೊಡ್ಡ ರೈಲು ನಿಲ್ದಾಣದ ಶೀರ್ಷಿಕೆಯನ್ನು ಗ್ರ್ಯಾಂಡ್ ಸೆಂಟ್ರಲ್ ಟರ್ಮಿನಲ್ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಈ ನಿಲ್ದಾಣವನ್ನು 1901 ರಿಂದ 1903 ರ ಅವಧಿಯಲ್ಲಿ ನಿರ್ಮಿಸಲಾಯಿತು ಎಂದು ಹೇಳಲಾಗುತ್ತದೆ. ಈ ನಿಲ್ದಾಣದ ನಿರ್ಮಾಣದ ಹಿಂದಿನ ಕುತೂಹಲಕಾರಿ ಕಥೆಯೆಂದರೆ, ಆ ಸಮಯದಲ್ಲಿ ಪೆನ್ಸಿಲ್ವೇನಿಯಾದ ರೈಲು ನಿಲ್ದಾಣದೊಂದಿಗೆ ಸ್ಪರ್ಧಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆಯಂತೆ.


'ಜನರಿಗೆ ತಿಳಿದಿಲ್ಲದ ಅತಿದೊಡ್ಡ ರೈಲು ನಿಲ್ದಾಣದ ವಿಷಯಗಳು'


ಭಾರೀ ಯಂತ್ರಗಳು ಇಲ್ಲದ ಕಾಲದಲ್ಲಿ ಇದನ್ನು ನಿರ್ಮಿಸಲಾಗಿದೆ ಎಂದರೆ ಅದು ಅಚ್ಛರಿಯ ವಿಷಯವೇ. ಈ ಅತಿದೊಡ್ಡ ರೈಲು ನಿಲ್ದಾಣವನ್ನು ನಿರ್ಮಿಸಲು ಎರಡು ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಲಾಗಿದೆ. ಅಮೇರಿಕನ್ ಮಾಧ್ಯಮ ವರದಿಗಳ ಪ್ರಕಾರ, ಈ ರೈಲು ನಿಲ್ದಾಣವು ಎಷ್ಟು ದೊಡ್ಡದಾಗಿದೆ ಎಂದರೆ ಇದನ್ನು ನಿರ್ಮಿಸಲು 10,000 ಪುರುಷರು ಒಟ್ಟಾಗಿ ಕೆಲಸ ಮಾಡುತ್ತಿದ್ದರು. ನಿಲ್ದಾಣವು ಅದರ ಗಾತ್ರಕ್ಕೆ ಮಾತ್ರವಲ್ಲದೆ ಅದರ ವಾಸ್ತುಶಿಲ್ಪ ಮತ್ತು ವಿನ್ಯಾಸಕ್ಕೂ ಹೆಸರುವಾಸಿಯಾಗಿದೆ.


ಈ ನಿಲ್ದಾಣದಲ್ಲಿ ಒಟ್ಟು 44 ಪ್ಲಾಟ್‌ಫಾರ್ಮ್‌ಗಳಿದ್ದು, ಇಲ್ಲಿ 44 ರೈಲುಗಳು ಏಕಕಾಲದಲ್ಲಿ ನಿಲ್ಲಬಹುದಾಗಿದೆ. ಗ್ರ್ಯಾಂಡ್ ಸೆಂಟ್ರಲ್ ಟರ್ಮಿನಲ್‌ನಲ್ಲಿ ಅನೇಕ ಚಲನಚಿತ್ರಗಳನ್ನು ಸಹ ಚಿತ್ರೀಕರಿಸಲಾಗಿದೆ.


ಇದನ್ನೂ ಓದಿ:Turkiye Earthquake: ಅದ್ಭುತ ಪವಾಡ! 13 ದಿನಗಳ ಬಳಿಕ ಅವಶೇಷಗಳಡಿ ಸಿಲುಕಿದ್ದ ಪತಿ-ಪತ್ನಿಯ ರಕ್ಷಣೆ


ಈ ನಿಲ್ದಾಣವನ್ನು ಹೊರತುಪಡಿಸಿ ಭಾರತದ ಬಗ್ಗೆ ಮಾತನಾಡುವುದಾದರೆ, ದೇಶದ ಅತಿದೊಡ್ಡ ರೈಲ್ವೆ ಜಂಕ್ಷನ್ ಶೀರ್ಷಿಕೆಯು ಯುಪಿಯ ಮಥುರಾ ಹೆಸರಿನಲ್ಲಿ ನೋಂದಣಿಯಾಗಿದೆ. ರೈಲ್ವೆ ನಿಲ್ದಾಣದ ಮೂಲಕ ಕನಿಷ್ಠ 3 ಮಾರ್ಗಗಳು ಹಾದುಹೋಗುವ ಆ ಸ್ಥಳಗಳನ್ನು ಜಂಕ್ಷನ್‌ಗಳು ಎಂದು ಕರೆಯಲಾಗುತ್ತದೆ. ಈ ಮೂಲಕ ವಿಶ್ವದ ಅತಿ ಉದ್ದದ ಪ್ಲಾಟ್‌ಫಾರ್ಮ್ ಉತ್ತರ ಪ್ರದೇಶದ ಗೋರಖ್‌ಪುರ ರೈಲು ನಿಲ್ದಾಣದಲ್ಲಿದೆ. ಈ ಹಿಂದೆ ಈ ದಾಖಲೆ ಖರಗ್‌ಪುರ ನಿಲ್ದಾಣದ ಹೆಸರಿನಲ್ಲಿ ದಾಖಲಾಗಿತ್ತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.