ನವದೆಹಲಿ: ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿಯಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಅಲ್ ಖೈದಾ ಸಂಸ್ಥಾಪಕ ಒಸಾಮಾ ಬಿನ್ ಲಾಡೆನ್ ಅವರ ಪುತ್ರ ಹಾಗೂ ಉತ್ತರಾಧಿಕಾರಿ ಹಮ್ಜಾ ಬಿನ್ ಲಾಡೆನ್ ಸಾವನ್ನಪ್ಪಿದ್ದಾರೆ ಎಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಖಚಿತಪಡಿಸಿದ್ದಾರೆ ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ತಿಳಿಸಿದೆ. 



COMMERCIAL BREAK
SCROLL TO CONTINUE READING

'ಹಮ್ಜಾ ಬಿನ್ ಲಾಡೆನ್ ಅವರ ನಷ್ಟವು ಅಲ್ ಖೈದಾಗೆ ಪ್ರಮುಖ ನಾಯಕತ್ವ ಕೌಶಲ್ಯ ಮತ್ತು ಅವರ ತಂದೆಯೊಂದಿಗಿನ ಸಾಂಕೇತಿಕ ಸಂಪರ್ಕವನ್ನು ಕಸಿದುಕೊಳ್ಳುವುದಲ್ಲದೆ, ಗುಂಪಿನ ಪ್ರಮುಖ ಕಾರ್ಯಾಚರಣೆಯ ಚಟುವಟಿಕೆಗಳನ್ನು ನಾಶ ಮಾಡುತ್ತದೆ' ಎಂದು ಟ್ರಂಪ್ ಶ್ವೇತಭವನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಎಂದು ಯುಎಸ್ ಮಾಧ್ಯಮ ವರದಿ ಮಾಡಿದೆ. ಆದರೆ, ಹಮ್ಜಾ ಎಲ್ಲಿ ಕೊಲ್ಲಲ್ಪಟ್ಟರು ಮತ್ತು ಯಾವ ಸಂದರ್ಭಗಳಲ್ಲಿ ಎಂದು ಟ್ರಂಪ್ ನಿರ್ದಿಷ್ಟಪಡಿಸಿಲ್ಲ ಎನ್ನಲಾಗಿದೆ


ಹಮ್ಜಾ ಅವರ ಕೊನೆಯ ಸಾರ್ವಜನಿಕ ಹೇಳಿಕೆಯನ್ನು ಅಲ್ ಖೈದಾದ ಮಾಧ್ಯಮ ಸಂಸ್ಥೆ 2018 ರಲ್ಲಿ ಬಿಡುಗಡೆ ಮಾಡಿತು. ಆ ಸಂದೇಶದಲ್ಲಿ ಅವರು ಸೌದಿ ಅರೇಬಿಯಾಕ್ಕೆ ಬೆದರಿಕೆ ಹಾಕಿದ್ದರು ಮತ್ತು ಅರೇಬಿಯನ್ ಪರ್ಯಾಯ ದ್ವೀಪದ ಜನರನ್ನು ದಂಗೆ ಏಳುವಂತೆ ಕರೆ ನೀಡಿದರು. ಈ ವರ್ಷದ ಮಾರ್ಚ್‌ನಲ್ಲಿ ಸೌದಿ ಅರೇಬಿಯಾ ಅವರ ಪೌರತ್ವವನ್ನು ತೆಗೆದುಹಾಕಿತು.