ಸಿಂಗಾಪುರ: ಅಮೇರಿಕ ಮತ್ತು ಉತ್ತರ ಕೊರಿಯಾ ಐತಿಹಾಸಿಕ ಶೃಂಗ ಸಭೆಯಲ್ಲಿ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ಅವರು ಈ ಹಿಂದಿನ ಎಲ್ಲಾ ಭಿನ್ನಮತಗಳನ್ನು ಮರೆತು 'ಅಣ್ವಸ್ತ್ರ ನಿಶ್ಯಸ್ತ್ರೀಕರಣ' ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. 


COMMERCIAL BREAK
SCROLL TO CONTINUE READING

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭೇಟಿ ಸಂದರ್ಭದಲ್ಲಿ ಉತ್ತರ ಕೊರಿಯ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹಲವು ಮಹತ್ವದ ದಾಖಲೆಗಳಿಗೆ ಸಹಿ ಹಾಕಿದ್ದಾರೆ. ಅಷ್ಟೇ ಅಲ್ಲದೆ, ದಕ್ಷಿಣ ಕೊರಿಯಾ ಪುನಶ್ಚೇತನ ಒಪ್ಪಂದಕ್ಕೂ ಸಮ್ಮತಿ ಸೂಚಿಸಿ ಸಹಿ ಹಾಕಿದ್ದಾರೆ ಎನ್ನಲಾಗಿದೆ. 


ಈ ಒಪ್ಪಂದದ ಪ್ರಮುಖ ಅಂಶಗಳು ಹೀಗಿವೆ
1) ಶಾಂತಿ ಮತ್ತು ಸಮೃದ್ಧಿಗಾಗಿ ಎರಡು ರಾಷ್ಟ್ರಗಳ ಜನರ ಬೇಡಿಕೆಯಂತೆ ಯುಎಸ್-ಡಿಪಿಆರ್ಕೆ(DPRK-Democratic People's Republic of Korea) ಸಂಬಂಧಗಳನ್ನು ಸ್ಥಾಪಿಸಲು ಯುನೈಟೆಡ್ ಸ್ಟೇಟ್ಸ್ ಮತ್ತು ಡಿಪಿಆರ್ಕೆ ಬದ್ಧವಾಗಿದೆ.
2) ಯುನೈಟೆಡ್ ಸ್ಟೇಟ್ಸ್ ಮತ್ತು ಡಿಪಿಆರ್ಕೆ ಕೊರಿಯಾದ ಪರ್ಯಾಯ ದ್ವೀಪದಲ್ಲಿ ಶಾಶ್ವತ ಮತ್ತು ಸ್ಥಿರವಾದ ಶಾಂತಿಯುತ ಆಡಳಿತ ನಿರ್ಮಾಣಕ್ಕೆ ಪ್ರಯಾಣಿಸುವುದು.
3) ಏಪ್ರಿಲ್ 27, 2018ರ ಪನ್ಮುಂಜಮ್ ಘೋಷಣೆಯನ್ನು ಪುನಃ ದೃಢಪಡಿಸಿ, ಡಿಪಿಆರ್ಕೆ ಕೊರಿಯನ್ ಪರ್ಯಾಯ ದ್ವೀಪದ ಸಂಪೂರ್ಣ ನಿರಾಕರಣೆಯ ಕಡೆಗೆ ಕೆಲಸ ಮಾಡಲು ಬದ್ಧವಾಗುವುದು.


ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಕಿಮ್ 'ಅಣ್ವಸ್ತ್ರ ನಿಶ್ಯಸ್ತ್ರೀಕರಣ'ಕ್ಕೆ ಒಪ್ಪಿಗೆ ನೀಡಿದ್ದು, ಶೀಘ್ರ ಆ ಕುರಿತು ಕ್ರಮಕೈಗೊಳ್ಳಲಿದ್ದಾರೆ. ಅಲ್ಲದೆ, ಕಿಮ್ ಜಾಂಗ್ ಉನ್ ರನ್ನು ವೈಟ್ ಹೌಸ್ ಗೆ ಆಹ್ವಾನಿಸುವಿರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಟ್ರಂಪ್ ಖಂಡಿತಾ ಆಹ್ವಾನಿಸುತ್ತೇನೆ. ಹಳೆಯ ಭಿನ್ನಾಭಿಪ್ರಾಯಗಳನ್ನು ಮರೆಯಲು ನಾವು ನಿರ್ಣಯಿಸಿದ್ದೇವೆ ಎಂದು ಹೇಳಿದರು.