ಕಾಶ್ಮೀರ ಸಮಸ್ಯೆಗೆ ಸಂಧಾನ ವಹಿಸುವುದಾಗಿ ಹೇಳಿದ ಡೊನಾಲ್ಡ್ ಟ್ರಂಪ್
ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರದಂದು ಮತ್ತೆ ಕಾಶ್ಮೀರ ಸಮಸ್ಯೆಗೆ ಮಧ್ಯಸ್ಥಿಕೆ ವಹಿಸುವ ಪ್ರಸ್ತಾಪವನ್ನು ಇಟ್ಟಿದ್ದಾರೆ.
ನವದೆಹಲಿ: ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರದಂದು ಮತ್ತೆ ಕಾಶ್ಮೀರ ಸಮಸ್ಯೆಗೆ ಮಧ್ಯಸ್ಥಿಕೆ ವಹಿಸುವ ಪ್ರಸ್ತಾಪವನ್ನು ಇಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ ನಂತರ ಈಗ ಡೊನಾಲ್ಡ್ ಟ್ರಂಪ್ ಈ ಪ್ರಸ್ತಾಪವನ್ನು ಇಟ್ಟಿದ್ದಾರೆ ಎನ್ನಲಾಗಿದೆ. ಜಮ್ಮು ಕಾಶ್ಮೀರ ಸಂಕೀರ್ಣ ಸ್ಥಳವೆಂದು ಹೇಳಿದ ಟ್ರಂಪ್, ಎರಡು ದೇಶಗಳ ನಡುವೆ ಧರ್ಮದ ಬಿಕ್ಕಟ್ಟು ಇರುವುದನ್ನು ಉಲ್ಲೇಖಿಸಿದರು. ತಾವು ಈ ಮಧ್ಯಸ್ಥಿಕೆ ಮೂಲಕ ಸಾಧ್ಯವಾದಷ್ಟು ಸಮಸ್ಯೆಗೆ ಇತ್ಯರ್ಥ ಕಂಡುಕೊಳ್ಳಲು ಪ್ರಯತ್ನಿಸುವುದಾಗಿ ಹೇಳಿದರು.
'ಎರಡು ದೇಶಗಳು ದೀರ್ಘಾವಧಿಯಿಂದಲೂ ಸಂಬಂಧ ಚೆನ್ನಾಗಿಲ್ಲ, ನಿಜ ಹೇಳಬೇಕೆಂದರೆ ಇದು ಸ್ಪೋಟಕ ಸ್ಥಿತಿ ಎಂದು ಟ್ರಂಪ್ ವ್ಯಾಖ್ಯಾನಿಸಿದ್ದಾರೆ. ನಾವು ಪರಿಸ್ಥಿತಿಗೆ ಸಹಾಯ ಮಾಡುತ್ತೇವೆ, ಆದರೆ ನಿಮಗೆ ತಿಳಿದಿರುವಂತೆ ಆ ಎರಡು ದೇಶಗಳ ನಡುವೆ ಭಾರಿ ಸಮಸ್ಯೆಗಳಿವೆ.ಮಧ್ಯಸ್ಥಿಕೆ ವಹಿಸಲು ಅಥವಾ ಏನನ್ನಾದರೂ ಮಾಡಲು ನಾನು ಸಾಧ್ಯವಾದಷ್ಟು ಉತ್ತಮವಾಗಿ ಪ್ರಯತ್ನಿಸುತ್ತೇನೆ. ಅವರಿಬ್ಬರೊಂದಿಗೂ ಉತ್ತಮ ಸಂಬಂಧವಿದೆ, ಆದರೆ ಅವರು ನಿಖರವಾಗಿ ಸ್ನೇಹಿತರಲ್ಲ, ಅಲ್ಲಿ ಸಂಕೀರ್ಣ ಪರಿಸ್ಥಿತಿ ಇದೆ. ಧರ್ಮದೊಂದಿಗೆ ಬಹಳಷ್ಟು ಸಂಬಂಧವಿದೆ. ಧರ್ಮವು ಒಂದು ಸಂಕೀರ್ಣ ವಿಷಯವಾಗಿದೆ' ಡೊನಾಲ್ಡ್ ಟ್ರಂಪ್ ಹೇಳಿದರು.
ಜಿ 7 ಶೃಂಗಸಭೆಯ ಕಾಲಾವಧಿಯಲ್ಲಿ ಪ್ರಧಾನಿ ಮೋದಿ ಅವರೊಂದಿಗೆಈ ವಿಷಯವನ್ನು ಎತ್ತುವುದಾಗಿ ಟ್ರಂಪ್ ಸೂಚಿಸಿದ್ದಾರೆ. ಈ ಹಿಂದೆ ಭಾರತ ಮತ್ತು ಪಾಕಿಸ್ತಾನ ಒಪ್ಪಿದರೆ ಕಾಶ್ಮೀರದ ಬಗ್ಗೆ ಮಧ್ಯಸ್ಥಿಕೆ ವಹಿಸಲು ಟ್ರಂಪ್ ಮುಂದಾಗಿದ್ದರು. ಕಳೆದ ತಿಂಗಳು, ಇಮ್ರಾನ್ ಖಾನ್ ಅವರ ಜಂಟಿ ಮಾಧ್ಯಮದಲ್ಲಿ, ಪ್ರಧಾನಿ ಮೋದಿ ಕಾಶ್ಮೀರ ವಿಷಯದ ಬಗ್ಗೆ ತಮ್ಮ ಮಧ್ಯಸ್ಥಿಕೆ ಯನ್ನು ಕೋರಿದ್ದಾರೆ ಎಂದು ಹೇಳಿದ್ದರು, ಆದರೆ ಇದನ್ನು ಭಾರತ ನಿರಾಕರಿಸಿತ್ತು.