ನವದೆಹಲಿ: ಅಮೆರಿಕ ನೇತೃತ್ವದ ಕಮಾಂಡೋ ದಾಳಿಯಲ್ಲಿ ಅಬೂಬಕರ್ ಅಲ್-ಬಾಗ್ದಾದಿ ಸಾವಿನ ನಂತರ ಐಸಿಸ್ ಹೊಸ ನಾಯಕ ಯಾರೆಂದು ಅಮೆರಿಕಕ್ಕೆ ತಿಳಿದಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದಾರೆ.



COMMERCIAL BREAK
SCROLL TO CONTINUE READING

'ಐಸಿಸ್ ಗೆ ನೂತನ ನಾಯಕನನ್ನು ನೇಮಿಸಲಾಗಿದೆ. ಅವನು ಯಾರೆಂದು ನಮಗೆ ತಿಳಿದಿದೆ!" ಟ್ರಂಪ್ ಟ್ವೀಟ್ ಮಾಡಿದ್ದಾರೆ. ಆದರೆ ಯುಎಸ್ ಅಧಿಕಾರಿಗಳು ಹೆಚ್ಚಿನ ವಿವರಗಳನ್ನು ನೀಡಿಲ್ಲ ಎನ್ನಲಾಗಿದೆ. ಐಸಿಸ್ ಈ ಹಿಂದೆ ತನ್ನ ನಾಯಕ ಅಲ್-ಬಾಗ್ದಾದಿಯವರ ಮರಣವನ್ನು ಖಚಿತಪಡಿಸಿದೆ ಮತ್ತು ಅವರ ಬದಲಿಗೆ ಅಬು ಇಬ್ರಾಹಿಂ ಅಲ್-ಹಶಿಮಿ ಅಲ್-ಖುರೈಶಿ ಎಂದು ಹೆಸರಿಸಿದೆ.


2014 ರಿಂದ ಐಸಿಸ್ ನೇತೃತ್ವ ವಹಿಸಿದ್ದ ಮತ್ತು ವಿಶ್ವದ ಮೋಸ್ಟ್ ವಾಂಟೆಡ್ ವ್ಯಕ್ತಿಯಾಗಿದ್ದ ಬಾಗ್ದಾದಿ ಭಾನುವಾರ ಸಿರಿಯಾದ ವಾಯುವ್ಯ ಪ್ರಾಂತ್ಯದ ಇಡ್ಲಿಬ್‌ನಲ್ಲಿ ಯುಎಸ್ ವಿಶೇಷ ಪಡೆಗಳ ದಾಳಿಯಲ್ಲಿ ಹತ್ಯೆಯಾಗಿದ್ದರು.