Moscow Drone Attack News: ಮಂಗಳವಾರ ಬೆಳಗ್ಗೆ ಮಾಸ್ಕೋ ಮೇಲೆ ಉಕ್ರೇನ್ ಸರಣಿ ಡ್ರೋನ್ ದಾಳಿ ನಡೆಸಿದೆ ಎಂದು ರಷ್ಯಾ ಆರೋಪಿಸಿದೆ. ಕೀವ್ ಕನಿಷ್ಟ ಎಂಟು ಡ್ರೋನ್‌ಗಳನ್ನು ಬಳಸಿ 'ಭಯೋತ್ಪಾದಕ ದಾಳಿ' ನಡೆಸಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ. ಹಲವು ಕಟ್ಟಡಗಳಿಗೆ ಸಣ್ಣಪುಟ್ಟ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾರೂ ಗಂಭೀರವಾಗಿ ಗಾಯಗೊಂಡಿಲ್ಲ ಎಂದು ರಾಜಧಾನಿಯ ಮೇಯರ್ ಸೆರ್ಗೆಯ್ ಸೊಬಯಾನಿನ್ ಹೇಳಿದ್ದಾರೆ. ತುರ್ತು ಸೇವೆಗಳು ಘಟನಾ ಸ್ಥಳದಲ್ಲಿವೆ ಎಂದು ಹೇಳಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  ಸಂಕಷ್ಟಕ್ಕೆ ಸಿಲುಕಿದ ಇಮ್ರಾನ್ ಖಾನ್ ನಿಂದ ನಡೆದ್ಹೋಯ್ತು ಲೋಪ, ಯುಟರ್ನ್ ಗೆ ಕಾರಣ ಇಲ್ಲಿದೆ


ಎಲ್ಲಾ ಡ್ರೋನ್‌ಗಳನ್ನು ತಡೆಹಿಡಿಯಲಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿಕೊಂಡಿದೆ. ವಿದ್ಯುನ್ಮಾನ ಯುದ್ಧದಿಂದಾಗಿ ಅವರಲ್ಲಿ ಮೂವರು ನಿಯಂತ್ರಣ ಕಳೆದುಕೊಂಡು ಗುರಿಯಿಂದ ದೂರ ಸರಿದಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ಮಾಸ್ಕೋ ಪ್ರದೇಶದಲ್ಲಿ ಪ್ಯಾಂಟ್‌ಸಿರ್-ಎಸ್ ಮೇಲ್ಮೈಯಿಂದ ಆಕಾಶಕ್ಕೆ ಹಾರುವ ಕ್ಷಿಪಣಿ ವ್ಯವಸ್ಥೆಯಿಂದ ಇನ್ನೂ ಐದು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ. ಈ ಮೊದಲು 30 ಡ್ರೋನ್‌ಗಳು ದಾಳಿಯಲ್ಲಿ ಭಾಗಿಯಾಗಿದ್ದವು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಅವುಗಳಲ್ಲಿ ಹಲವು ಕಟ್ಟಡಗಳು ಉರುಳಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.


ಕೀವ್‌ನಿಂದ ಯಾವುದೇ ಕಾಮೆಂಟ್ ಈ ಬಗ್ಗೆ ಬಂದಿಲ್ಲ. ಆದರೆ ಸೋಮವಾರ ಉಕ್ರೇನ್‌ನ ಮಿಲಿಟರಿ ಗುಪ್ತಚರ ಮುಖ್ಯಸ್ಥ ಜನರಲ್ ಕಿರಿಲೋ ಬುಡಾನೋವ್ ಕೀವ್‌ನ ಮೇಲಿನ ರಷ್ಯಾದ ಕ್ಷಿಪಣಿ ದಾಳಿಗೆ ಪ್ರತಿಕ್ರಿಯೆಯ ಬಗ್ಗೆ ಎಚ್ಚರಿಸಿದ್ದಾರೆ.


ಇದನ್ನೂ ಓದಿ: Putin ಭೇಟಿಯ ಬಳಿಕ ಅನಾರೋಗ್ಯಕ್ಕೀಡಾದ ಬೇಲಾರೂಸ್ ಅಧ್ಯಕ್ಷ, ವಿಷಪ್ರಾಶದ ವದಂತಿ!


ದಾಳಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಫೋಟೋಗಳು ರಷ್ಯಾದ ರಾಜಧಾನಿಯ ಮೇಲೆ ಆಕಾಶದಲ್ಲಿ ಹೊಗೆಯ ಗರಿಗಳನ್ನು ತೋರಿಸಿದೆ. ಕೆಲವರು ಒಡೆದ ಕಿಟಕಿಯನ್ನು ಪೋಸ್ಟ್‌ ಮಾಡಿದ್ದಾರೆ. ಇಬ್ಬರು ಜನರು ವೈದ್ಯಕೀಯ ಸಹಾಯವನ್ನು ಕೋರಿದ್ದಾರೆ ಎಂದು ಟೆಲಿಗ್ರಾಮ್ ಪೋಸ್ಟ್‌ನಲ್ಲಿ ಸೊಬಯಾನಿನ್ ಈ ಮಾಹಿತಿಯನ್ನು ನೀಡಿದ್ದಾರೆ. ದಾಳಿಯು ಹಲವಾರು ಕಟ್ಟಡಗಳಿಗೆ ಸಣ್ಣ ಹಾನಿ ಉಂಟುಮಾಡಿದೆ ಎಂದು ಅವರು ಹೇಳಿದರು. ದಾಳಿಯಲ್ಲಿ ಹಾನಿಗೊಳಗಾದ ಎರಡು ಕಟ್ಟಡಗಳ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ಸೋಬಯಾನಿನ್ ಹೇಳಿದ್ದಾರೆ.


ಮಾಸ್ಕೋ ಮೇಲಿನ ದಾಳಿಗಳು ಉಕ್ರೇನಿಯನ್ ರಾಜಧಾನಿ ಕೀವ್ ಮೇಲೆ ರಾತ್ರಿಯ ರಷ್ಯಾದ ಡ್ರೋನ್ ದಾಳಿಗೆ ಪ್ರತಿಕ್ರಿಯೆಯಾಗಿ ಬಂದಿವೆ. ಇದರಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ. ಉಕ್ರೇನ್‌ನ ವಾಯು ರಕ್ಷಣಾ ಪಡೆ 20 ಕ್ಕೂ ಹೆಚ್ಚು ಡ್ರೋನ್‌ಗಳನ್ನು ತಡೆದಿದೆ ಆದರೆ ಬೀಳುವ ಅವಶೇಷಗಳಿಂದಾಗಿ ಕಟ್ಟಡಗಳಿಗೆ ಬೆಂಕಿ ತಗುಲಿದೆ ಎಂದು ಉಕ್ರೇನಿಯನ್ ಅಧಿಕಾರಿಗಳು ಹೇಳಿದ್ದಾರೆ.


ಇದನ್ನೂ ಓದಿ: ದೇವಸ್ಥಾನದಲ್ಲಿ ಏಕಾಏಕಿ ಬಟ್ಟೆ ಬಿಚ್ಚಿ ಬೆತ್ತಲಾದ ಯುವತಿ.. ಬೆಚ್ಚಿಬಿದ್ದ ಭಕ್ತರು!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.