ಇರಾನ್-ಇರಾಕ್ ಗಡಿಯಲ್ಲಿ ಭೂಕಂಪ: 207 ಸಾವು, 1,700ಕ್ಕೂ ಹೆಚ್ಚು ಮಂದಿಗೆ ಗಾಯ
ತೆಹರಾನ್: ಇರಾನ್ ಮತ್ತು ಇರಾಕ್ ಗಡಿಯಲ್ಲಿ ಭೂಕಂಪ ಸಂಭವಿಸಿದ್ದು, 207 ಮಂದಿ ಸಾವನ್ನಪ್ಪಿದ್ದು, 1,700ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ ಎಂದು ವರದಿ ತಿಳಿಸಿದೆ.
ಇರಾನ್ ಮತ್ತು ಇರಾಕ್ ಗಡಿಯಲ್ಲಿ ಸಂಭವಿಸಿರುವ ಭೂಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ ತೀವ್ರತೆಯಷ್ಟು ದಾಖಲಾಗಿದೆ. ಟ್ವಿಟ್ಟರ್ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಸುಲೇಮಾನ ಪ್ರದೇಶದಲ್ಲಿ ಕಟ್ಟಡಗಳು ಬೀಳುತ್ತಿರುವ ಮತ್ತು ಜನರು ಗಾಬರಿಗೊಂಡು ಹೊರಬರುವ ದೃಶ್ಯವನ್ನು ಕಾಣಬಹುದಾಗಿದೆ.
ಸೌದಿಯಾ ಸರ್ಕಾರಿ ದೂರದರ್ಶನವು ಈ ಮೊದಲು 164 ಸಾವು ಹಾಗೂ 1686 ಅಧಿಕ ಜನರು ಭೂಕಂಪದಲ್ಲಿ ಗಾಯಗೊಂಡಿದ್ದಾರೆ ಎಂದು ವರದಿ ಮಾಡಿತ್ತು. ಈ ಘಟನೆಯಿಂದ ಎರಡು ದೇಶಗಳ ಗಡಿಯಲ್ಲಿನ ಜನರು ಭಯಬೀತರಾಗಿದ್ದಾರೆ. ಇರಾನ್ ನ ಕರ್ಮಾನಶಾಹ ಪ್ರಾಂತ್ಯದ ರಾಜ್ಯಪಾಲ ಮೊಜತಬಾ ಹೇಳುವಂತೆ "ನಾವು ಈಗಾಗಲೇ ಮೂರು ಭೂಕಂಪ ನಿರಾಶ್ರಿತರಿಗೆ ಶಿಬಿರ ತೆರೆಯಲು ತಯಾರಿ ನಡೆಸಿದ್ದೇವೆ" ಎಂದು ತಿಳಿಸಿದ್ದಾರೆ.
ಯುಎಸ್ ಭೂ ಸಮೀಕ್ಷೆ ವರದಿಯನ್ವಯ, ಭೂಕಂಪವು ಹಲಬಜಾದಿಂದ 30 ಕಿ.ಮೀ ದೂರದ ದಕ್ಷಿಣ-ಪಶ್ಚಿಮ(ನೈಋತ್ಯ) ಭಾಗದಲ್ಲಿ ರಾತ್ರಿಯ ವೇಳೆಯಲ್ಲಿ ಈ ಘಟನೆಯು ಸಂಭವಿಸಿದೆ ಎಂದು ತಿಳಿದು ಬಂದಿದೆ. ಭೂಕಂಪವಾಗಿರುವ ಪ್ರದೇಶವು ಅರಬ್ ನ ಯುರೇಷಿಯನ್ ಟೆಕ್ನೋನಿಕ್ ಪ್ರದೇಶದಲ್ಲಿ ಬರುವುದರಿಂದ ಈ ಪ್ರದೇಶವು ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ. ಇರಾನ್ ನಲ್ಲಿ 2003ರಲ್ಲಿ ಸಂಭವಿಸಿದ ಭೂಕಂಪವು 31,000 ಜನರನ್ನು ಬಲಿತೆಗೆದುಕೊಂಡಿತ್ತು.