ನವದೆಹಲಿ: ಇಂಡೋನೇಷ್ಯಾದಲ್ಲಿ ಮತ್ತೆ ಭೂಕಂಪ ಸಂಭವಿಸಿದ್ದು, ಭೂಕಂಪದ ಪ್ರಮಾಣ ರಿಕ್ಟರ್ ಮಾಪಕದಲ್ಲಿ 7.3 ತೀವ್ರತೆ ದಾಖಲಾಗಿದೆ. ಆದಾಗ್ಯೂ, ಇಂಡೋನೇಷ್ಯಾದ ಜಿಯೋಫಿಸಿಕ್ಸ್ ಏಜೆನ್ಸಿಯ ಪ್ರಕಾರ, ಈ ಭೂಕಂಪದಿಂದ ಯಾವುದೇ ಸುನಾಮಿಯ ಸಂಭವಿಸುವ ಸಾಧ್ಯತೆ ಇಲ್ಲಾ ಎನ್ನಲಾಗಿದೆ. 


COMMERCIAL BREAK
SCROLL TO CONTINUE READING

ಇಂಡೋನೇಷ್ಯಾದ ಜಿಯೋಫಿಸಿಕ್ಸ್ ಏಜೆನ್ಸಿ, ಇಂಡೋನೇಷ್ಯಾದ ಬಂಡಾ ಸಾಗರದಲ್ಲಿ 7.2 ತೀವ್ರತೆಯ ಭೂಕಂಪನ ಸಂಭವಿಸಿದ್ದು ಸುನಾಮಿಯ ಸಾಧ್ಯತೆಯಿಲ್ಲ ಎಂದು ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.




ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ (USGS) ಈ ಸುದ್ದಿಯನ್ನು ದೃಢಪಡಿಸಿದೆ. ಯುಎಸ್ಜಿಎಸ್ ರಿಕ್ಟರ್ ಮಾಪಕದಲ್ಲಿ ಭೂಕಂಪದ ಪ್ರಮಾಣ 7.3 ದಾಖಲಾಗಿತ್ತು ಎಂದು ತಿಳಿಸಿದೆ.