ಉತ್ತರ ವೆನೆಜುವೆಲಾವನ್ನು ಬೆಚ್ಚಿಬೀಳಿಸಿದ ಭೂಕಂಪ
ಇದುವರೆಗೂ ಯಾವುದೇ ಪ್ರಾಣಹಾನಿ ಬಗ್ಗೆ ವರದಿಯಾಗಿಲ್ಲ.
ವೆನೆಜುವೆಲಾದ ಈಶಾನ್ಯ ಕರಾವಳಿಯಲ್ಲಿ ಭೂಕಂಪ ಉಂಟಾಗಿದ್ದು, ಅಲ್ಲಿಯ ಜನರನ್ನುಬೆಚ್ಚಿಬೀಳಿಸಿದೆ. ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆಯು 7.3 ಭೂಕಂಪದ ಪ್ರಮಾಣವನ್ನು ದಾಖಲಿಸಿದೆ. ಅದರ ಕೇಂದ್ರವು ವೆನೆಜುವೆಲಾದ ಯಗ್ವಾರಾಪಾರೋದಿಂದ ವಾಯುವ್ಯದಿಂದ 20 ಕಿಲೋಮೀಟರ್ ದೂರದಲ್ಲಿದೆ ಎಂದು ಹೇಳಲಾಗಿದೆ.
ಭೂಕಂಪ ಉಂಟಾದ ಸ್ಥಳದಲ್ಲಿ ಇದುವರೆಗೂ ಯಾವುದೇ ಪ್ರಾಣಹಾನಿ ಬಗ್ಗೆ ವರದಿಯಾಗಿಲ್ಲ. 1997 ರಲ್ಲಿ ಇದೇ ರೀತಿಯ ಭೂಕಂಪನವು ಅನೇಕ ಜೀವಗಳನ್ನು ಬಲಿತೆಗೆದುಕೊಂಡಿತ್ತು.
ಕುಮಾನ್ನಲ್ಲಿ ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿ ಪ್ರಕಾರ ಶಾಪಿಂಗ್ ಸೆಂಟರ್ನಲ್ಲಿ ಎಲಿವೇಟರ್ ಬಿದ್ದಿದ್ದರಿಂದ ಅನೇಕ ಜನರಿಗೆ ಗಾಯಗೊಂಡಿದ್ದಾರೆ. ಆದರೆ ಆ ಪ್ರದೇಶದಲ್ಲಿ ಯಾವುದೇ ಹಾನಿ ಉಂಟಾಗಿಲ್ಲ ಎಂದು ಹೇಳಲಾಗಿದೆ.