ದುಬೈ: ಇಸ್ಲಾಮಿಕ್ ಗಣರಾಜ್ಯದ ಏಕೈಕ ಪರಮಾಣು ವಿದ್ಯುತ್ ಸ್ಥಾವರದ ಬಳಿ ದಕ್ಷಿಣ ಇರಾನ್‌ನಲ್ಲಿ ಶುಕ್ರವಾರ 5 ರ ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದಲ್ಲಿ ಯಾವುದೇ ಹಾನಿ ಅಥವಾ ಗಾಯಗಳ ಬಗ್ಗೆ ತಕ್ಷಣದ ವರದಿಗಳು ಬಂದಿಲ್ಲ.


COMMERCIAL BREAK
SCROLL TO CONTINUE READING

ಯು.ಎಸ್. ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಬೆಳಗ್ಗೆ 5:23 ಕ್ಕೆ ಇರಾನ್‌ನ ಬುಶೆಹ್ರ್ ಪ್ರಾಂತ್ಯಕ್ಕೆ ಭೂಕಂಪ ಅಪ್ಪಳಿಸಿತು. ಇದು 5.1 ರಷ್ಟು ತೀವ್ರತೆ ಹೊಂದಿತ್ತು ಮತ್ತು ಭೂಕಂಪದ ಆಳ 38 ಕಿಲೋಮೀಟರ್ (24 ಮೈಲಿ) ಎಂದು ತಿಳಿದುಬಂದಿದೆ.


ಭೂಕಂಪದ ಬಗ್ಗೆ ಇರಾನಿನ ರಾಜ್ಯ ಮಾಧ್ಯಮಗಳು ವರದಿ ಮಾಡಿಲ್ಲ. ಭೂಕಂಪದ ತೀವ್ರತೆ 5 ರಷ್ಟಿದ್ದಾಗ ಸಾಕಷ್ಟು ಹಾನಿ ಉಂಟುಮಾಡುತ್ತದೆ. ಆದಾಗ್ಯೂ, ಬುಶೆರ್ ಪರಮಾಣು ವಿದ್ಯುತ್ ಸ್ಥಾವರವನ್ನು ಹೆಚ್ಚು ಬಲವಾದ ಭೂಕಂಪವನ್ನೂ ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ.


ಇರಾನ್ ದೈನಂದಿನ ಭೂಕಂಪಗಳಿಗೆ ಗುರಿಯಾಗುತ್ತಲೇ ಇರುತ್ತದೆ. 2003 ರಲ್ಲಿ, 6.6 ತೀವ್ರತೆಯ ಭೂಕಂಪನವು ಐತಿಹಾಸಿಕ ನಗರವಾದ ಬಾಮ್ ಅನ್ನು ಸಮತಟ್ಟಾಗಿಸಿ 26,000 ಜನರನ್ನು ಬಲಿ ತೆಗೆದುಕೊಂಡಿತು. ಬಾಮ್ ಬುಶೆರ್ ಪರಮಾಣು ಸ್ಥಾವರ ಬಳಿ ಇದೆ, ಅದು ಆ ಸಮಯದಲ್ಲಿ ಹಾನಿಗೊಳಗಾಗಲಿಲ್ಲ.