ಟೆಹ್ರಾನ್: ರಿಕ್ಟರ್ ಮಾಪಕದಲ್ಲಿ ಭೂಕಂಪ 4.1 ರಷ್ಟು ಇರಾನ್ನ ದಕ್ಷಿಣದ ಆಗ್ನೇಯ ಪ್ರಾಂತ್ಯದ ಕೆರ್ಮನ್ಗೆ ನಲ್ಲಿ ಸಂಭವಿಸಿದೆ.


COMMERCIAL BREAK
SCROLL TO CONTINUE READING

ಇರಾನಿನ ಅಧಿಕೃತ ಸುದ್ದಿ ಸಂಸ್ಥೆ ಐಆರ್ಎನ್ಎ ಪ್ರಕಾರ, ಭೂಕಂಪನವು ರಾವರ್ ನಗರದ ಸಮೀಪ ಹೋಜ್ಡಾಕ್ ಗ್ರಾಮದಲ್ಲಿ ಉಂಟಾಗಿದೆ. ಈ ಭೂಕಂಪದಲ್ಲಿ ಯಾವುದೇ ರೀತಿಯ ಸಾವು ನೋವುಗಳು ಸಂಭವಿಸಿಲ್ಲ ಎಂದು ಹೇಳಲಾಗಿದೆ. ಈ ಹಿಂದೆ ಡಿಸೆಂಬರ್ 1 ರಂದು, ರಿಕ್ಟರ್ ಮಾಪಕದಲ್ಲಿ 6.1 ರಷ್ಟು ಪ್ರಬಲ ಭೂಕಂಪ ಈ  ಪ್ರದೇಶದ ಮೇಲೆ ಉಂಟಾಗಿತ್ತು  ಎಂದು ವರದಿ ತಿಳಿಸಿದೆ.


ಇರಾನ್ ದೇಶವು ಪ್ರಮುಖ ಭೂಕಂಪ ವಲಯದ ಮೇಲೆ ಇರುವುದರಿಂದ  ದಿನನಿತ್ಯದ ಭೂಕಂಪಗಳಿಗೆ ಈ ದೇಶ ಗುರಿಯಾಗುತ್ತದೆ.