Economic Crisis:  ಕೊಲಂಬೊ: ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಪ್ರಿಂಟಿಂಗ್ ಪೇಪರ್ ಕೊರತೆ ಎದುರಾಗಿದ್ದು, ಲಕ್ಷಾಂತರ ಶಾಲಾ ವಿದ್ಯಾರ್ಥಿಗಳ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಪ್ರಿಂಟಿಂಗ್ ಪೇಪರ್ ಆಮದು ಮಾಡಿಕೊಳ್ಳಲು ಸರ್ಕಾರದ ಖಜಾನೆಯಲ್ಲಿ ಸಾಕಷ್ಟು ಹಣ ಇಲ್ಲದಿರುವುದರಿಂದ ಮುಂದಿನ ಆದೇಶದವರೆಗೆ ಪರೀಕ್ಷೆಗಳನ್ನು ರದ್ದುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಶ್ರೀಲಂಕಾ 1948 ರಿಂದ ಅತ್ಯಂತ ತೀವ್ರವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. 


COMMERCIAL BREAK
SCROLL TO CONTINUE READING

ಮುಂದಿನ ತರಗತಿಗೆ ಮಕ್ಕಳಿಗೆ ಬಡ್ತಿ ಸಿಗುತ್ತದೆಯೇ?
'ಇಂಡಿಪೆಂಡೆಂಟ್' ವರದಿ ಪ್ರಕಾರ, 9, 10 ಮತ್ತು 11 ನೇ ತರಗತಿಯ ಪರೀಕ್ಷೆಗಳನ್ನು ಅನಿರ್ದಿಷ್ಟವಾಗಿ ರದ್ದುಗೊಳಿಸಲಾಗಿದೆ ಮತ್ತು ಶೈಕ್ಷಣಿಕ ವರ್ಷಾಂತ್ಯದೊಳಗೆ ಮಕ್ಕಳಿಗೆ ಮುಂದಿನ ತರಗತಿಗೆ ಬಡ್ತಿ ನೀಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಚಿಂತಿಸಲಾಗುತ್ತಿದೆ. ಅಗತ್ಯವಿರುವ ಕಾಗದ (Paper) ಮತ್ತು ಶಾಯಿಯನ್ನು ಆಮದು ಮಾಡಿಕೊಳ್ಳಲು ಪ್ರಿಂಟರ್‌ಗಳು ವಿದೇಶಿ ವಿನಿಮಯವನ್ನು ಸಂಗ್ರಹಿಸಲು ಸಾಧ್ಯವಾಗದ ಕಾರಣ ಶಾಲೆಯ ಪ್ರಾಂಶುಪಾಲರು ಪರೀಕ್ಷೆಯನ್ನು ನಡೆಸಲು ಸಾಧ್ಯವಿಲ್ಲ ಎಂದು ಪಶ್ಚಿಮ ಪ್ರಾಂತ್ಯದ ಶಿಕ್ಷಣ ಇಲಾಖೆ ಹೇಳಿದೆ.


ಇದನ್ನೂ ಓದಿ- 'IOC ಸಭೆಯ ಬಳಿಕ ಇಮ್ರಾನ್ ಕುರ್ಚಿ ತೊರೆಯಬೇಕು' Imran Khan ಗೆ ಪಾಕ್ ಸೇನೆಯ ಸೂಚನೆ


ಶ್ರೀಲಂಕಾ ಪ್ರಸ್ತುತ ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ (Economic Crisis) ತತ್ತರಿಸುತ್ತಿದೆ ಮತ್ತು ವಿದೇಶಿ ವಿನಿಮಯ ಮೀಸಲು ಖಾಲಿಯಾಗುತ್ತಿದೆ. ಸರ್ಕಾರವು ಅಗತ್ಯ ಆಮದುಗಳಿಗೆ ಬಿಲ್‌ಗಳನ್ನು ಪಾವತಿಸಲು ಸಾಧ್ಯವಾಗುತ್ತಿಲ್ಲ. ದೇಶದಲ್ಲಿ ಹಣದುಬ್ಬರವು ದಿನೇ ದಿನೇ ದಾಖಲೆಗಳನ್ನು ಮುರಿಯುತ್ತಿದೆ. ಜನರಿಗೆ ಒಂದೊತ್ತಿನ ಊಟಕ್ಕೂ ಕಷ್ಟವಾಗುತ್ತಿದೆ. ಸಾಲದ ನೆರವಿನಿಂದ ಶ್ರೀಲಂಕಾ ಈಗ ಈ ಬಿಕ್ಕಟ್ಟಿನಿಂದ ಹೊರಬರಲು ಪ್ರಯತ್ನಿಸುತ್ತಿದೆ. ವಿದೇಶಿ ಸಾಲದ ಬಿಕ್ಕಟ್ಟನ್ನು ಪರಿಹರಿಸಲು ಬೇಲ್‌ಔಟ್ ಪ್ಯಾಕೇಜ್ ಕುರಿತು ಚರ್ಚಿಸಲು ಶ್ರೀಲಂಕಾದ ಅಧ್ಯಕ್ಷ ಗೋತಬಯ ರಾಜಪಕ್ಸೆ (Gotabaya Rajapaksah) ಅವರ ಮನವಿಯನ್ನು ಪರಿಗಣಿಸುತ್ತಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಕಳೆದ ಶುಕ್ರವಾರ ದೃಢಪಡಿಸಿದೆ.


ಇದನ್ನೂ ಓದಿ- PM Imran Khan : ಭಾರತೀಯ ಸೇನೆಯನ್ನ 'ಹಾಡಿ ಹೊಗಳಿದ' ಪಾಕ್ ಪ್ರಧಾನಿ ಇಮ್ರಾನ್ ಖಾನ್


ನೆರವಿನ ಹಸ್ತ ಚಾಚಿದ ಭಾರತ:
ಶ್ರೀಲಂಕಾದ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸುವ ಸಲುವಾಗಿ, ಭಾರತವು ಒಂದು ಶತಕೋಟಿ ಡಾಲರ್ ಆರ್ಥಿಕ ಸಹಾಯವನ್ನು ಸುಲಭ ಷರತ್ತುಗಳಲ್ಲಿ ನೀಡಿದೆ. ಇತ್ತೀಚೆಗೆ ನವದೆಹಲಿಗೆ ಭೇಟಿ ನೀಡಿದ್ದ ಶ್ರೀಲಂಕಾದ ಹಣಕಾಸು ಸಚಿವ ಬಸಿಲ್ ರಾಜಪಕ್ಸೆ ಅವರು ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೊಂದಿಗೆ ನಡೆದ ಸಭೆಯಲ್ಲಿ ಈ ಹಣಕಾಸಿನ ನೆರವಿಗೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಒಂದು ಬಿಲಿಯನ್ ಡಾಲರ್‌ಗಳ ಈ ನೆರವನ್ನು ಶ್ರೀಲಂಕಾ ಸರ್ಕಾರವು ಆಹಾರ ಧಾನ್ಯಗಳು, ಔಷಧಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಬಳಸುತ್ತದೆ. https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.