ನವದೆಹಲಿ: ಕೊರೊನಾ ಬಿಕ್ಕಟ್ಟಿನ ನಡುವೆ ಅಮೇರಿಕ ಹೊಸ ಬಾಹ್ಯಾಕಾಶ ಯಾನವನ್ನು ಕೈಗೊಂಡಿದೆ. ಖಾಸಗಿ ಗಗನಯಾನ ಕಂಪನಿ ಸ್ಪೇಸ್ ಎಕ್ಸ್, ತನ್ನ ಬಾಹ್ಯಾಕಾಶ ನೌಕೆಯಾ ಮೂಅಲಕ ಮೊದಲ ಬಾರಿಗೆ ಇಬ್ಬರು NASA ವಿಜ್ಞಾನಿಕಾರನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಿದೆ. ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಈ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದ್ದಾರೆ. ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದ ಮೇಲ್ಛಾವಣಿಯ ಮೇಲೆ ನಿಂತು ಈ ಉಡಾವಣೆಯನ್ನು ವೀಕ್ಷಿಸಿಸಿದ್ದಾರೆ. ಈ ವೇಳೆ ಅವರಿಗೆ ಅವರ ಮಗಳು ಇವಾಂಕಾ ಟ್ರಂಪ್ ಹಾಗೂ ಸೊಸೆ ಜೆರೆಡ್ ಸಾಥ್ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಬಾಹ್ಯಾಕಾಶಕ್ಕೆ ಇಬ್ಬರು ಗಗನಯಾತ್ರಿಗಳನ್ನು ಕೊಂಡೊಯ್ದ ಸ್ಪೇಸ್ ಎಕ್ಸ್ ನ ಗಗನ ನೌಕೆಗೆ ದಿ ಕ್ರೂ ಡ್ರಾಗನ್ ಎಂದು ಹೆಸರಿಸಲಾಗಿದೆ. ದಿ ಕ್ರೂ ಡ್ರ್ಯಾಗನ್  ಮೂಲಕ ಗಗನಯಾತ್ರಿಗಳ ರೂಪದಲ್ಲಿ NASAದ ಆಸ್ಟ್ರೋನಾಟ್ ಗಳಾಗಿರುವ ಬಾಬ್ ಬೆನಕೆನ್ ಹಾಗೂ ಡಗ್ ಹರ್ಲಿ ಗಗನಕ್ಕೆ ಪ್ರಯಾಣ ಬೆಳೆಸಿದ್ದಾರೆ. ಈ ನೌಕೆ 19 ಗಂಟೆಗಳ ಪ್ರಯಾಣದ ಮೂಲಕ ಅಂತಾರಾಷ್ಟ್ರೀಯ ಸ್ಪೇಸ್ ಸ್ಟೇಷನ್ ತಲುಪಲಿದೆ.


 ಗಗನಯಾತ್ರಿಗಳಾಗಿರುವ  ಬಾಬ್ ಬೆನ್ಕೆನ್ ಮತ್ತು ಡೌಗ್ ಹರ್ಲಿಯನ್ನು ವರ್ಷ 2000ರಲ್ಲಿಯೇ  ಈ ಕಾರ್ಯಾಚರಣೆಗೆ ಆಯ್ಕೆ ಮಾಡಲಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ. ಇದಕ್ಕೂ ಮೊದಲು ಈ ಇಬ್ಬರು ಎರಡು ಬಾರಿ ಬಾಹ್ಯಾಕಾಶಕ್ಕೆ ಭೇಟಿ ನೀಡಿದ್ದಾರೆ. ಈ ಉಡಾವಣೆಯ ಅಪಾಯವನ್ನು ಕಡಿಮೆ ಮಾಡಲು ಅಮೆರಿಕಾದ ಅತ್ಯಂತ ವಿಶ್ವಾಸಾರ್ಹ ರಾಕೆಟ್ ಫಾಲ್ಕನ್-9 ನ್ನು ಬಳಸಲಾಗಿದೆ.


2011ರ ಬಳಿಕೆ ಇದೆ ಮೊದಲ ಬಾರಿಗೆ ಅಮೇರಿಕಾ ಈ ರೀತಿಯ ಮಿಶನ್ ಕೈಗೊಂಡಿದೆ. ಆದರೆ, ಈ ಬಾರಿ ಈ ಮಿಶನ್ ಗಾಗಿ ಸ್ಪೇಸ್ ಎಕ್ಸ್ ಹೆಸರಿನ ಖಾಸಗಿ ಕಂಪನಿಯ ಸಹಾಯ ಏಕೆ ಪಡೆಯಲಾಗಿದೆ ಎಂಬುದನ್ನು ಒಮ್ಮೆ ತಿಳಿಯೋಣ.


- ಕಳೆದ 20 ವರ್ಷಗಳಿಂದ NASA ಅಂತರಾಷ್ಟ್ರೀಯ ಸ್ಪೇಸ್ ಮಿಶನ್ ಮೇಲೆ ಕೆಲಸ ಮಾಡುತ್ತಿದೆ.
- ರಷ್ಯಾದ ರಾಕೆಟ್ ಮೂಲಕ ಉಡಾವಣೆಯ ಖರ್ಚು ನಿರಂತರ ಏರಿಕೆಯಾಗುತ್ತಿತ್ತು. 
- ಇದನ್ನೇ ಮನಗಂಡಿರುವ ಅಮೇರಿಕ ಸ್ಪೇಸ್ X ಹೆಚ್ಚಿನ ಆರ್ಥಿಕ ನೆರವು ಒದಗಿಸಿ ಅಂತಾರಾಷ್ಟ್ರೀಯ ಮಿಶನ್ ಗೆ ಅನುಮತಿ ನೀಡಿದೆ.


ಆದರೆ, ಉಡಾವಣೆಯ ಖರ್ಚನ್ನು ತಗ್ಗಿಸಲು ಸ್ಪೇಸ್ X ವನ್ನೇ ಏಕೆ ಆಯ್ಕೆ ಮಾಡಲಾಗಿದೆ?
-ಸ್ಪೇಸ್ X ಅಮೇರಿಕಾದ ಉದ್ಯೋಗಪತಿ ಎಲೋನ್ ಮಸ್ಕ್ ಅವರ ಕಂಪನಿಯಾಗಿದೆ.
-ಎಲೋನ್ ಮಸ್ಕ್ 2002 ರಲ್ಲಿ ತಮ್ಮ ಈ ಕಂಪನಿಗೆ ಅಡಿಪಾಯ ಇಟ್ಟಿದ್ದಾರೆ.
- ಎಲೋನ್ ಮಸ್ಕ್ ಅವರ ಈ ಕಂಪನಿ ಫಾಲ್ಕನ್ 9, ಫಾಲ್ಕನ್ ಹೆವಿ ರಾಕೆಟ್ ಗಳ ಮೇಲೆ ವಾಣಿಜ್ಯಾತ್ಮಕ ಹಾಗೂ ಸರ್ಕಾರಿ ಉಡಾವಣೆಗಳಿಗಾಗಿ ಸೇವೆ ಒದಗಿಸುತ್ತದೆ.
-ಬಾಹ್ಯಾಕಾಶ ಸಂಚಾರಕ್ಕೆ ತಗಲುವ ವೆಚ್ಚವನ್ನು ಕಡಿಮೆಗೊಳಿಸುವುದು ಸ್ಪೇಸ್ X ಮೂಲ ಉದ್ದೇಶವಾಗಿದೆ. 
- ಈ ಕಂಪನಿ NASA ಜೊತೆಗೆ ಸೇರಿ ಭವಿಷ್ಯದ ಹಲವು ಬಾಹ್ಯಾಕಾಶ ಮಿಶನ್ ಗಳ ಮೇಲೆ ಕೆಲಸ ಮಾಡುತ್ತಿದೆ. 


ಇದಕ್ಕೂ ಮೊದಲು ಈ ಉಡಾವಣೆಯನ್ನು ಮೇ 27ಕ್ಕೆ ನಿಗದಿಪಡಿಸಲಾಗಿತ್ತು ಎಂದು NASA ಹೇಳಿದೆ. ಆದರೆ ವಾತಾವರಣ ವೈಪರಿತ್ಯವಿದ್ದ ಕಾರಣ ಉಡಾವಣೆಗೆ 17 ನಿಮಿಷ ಮುಂಚಿತವಾಗಿದೆ ಮಿಶನ್ ಅನ್ನು ಮುಂದೂಡಲಾಗಿತ್ತು.