ಹರಾರೆ: ಜಿಂಬಾಬ್ವೆಯ ಮಾಜಿ ಉಪಾ ಅಧ್ಯಕ್ಷ ಎಮ್ಮರ್ಸನ್ ಮ್ನಾನ್ಗಗ್ವಾರವರು ಜಿಂಬಾಬ್ವೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಈ ಮೂಲಕ ಸುಮಾರು 4 ದಶಕಗಳ ಸರ್ವಾಧಿಕಾರಿ ರಾಬರ್ಟ್ ಮುಗಾಬೆಯವರ ಆಡಳಿತಕ್ಕೆ ತೆರೆ ಬಿದ್ದಿದೆ.ಆಡಳಿತ ಪಕ್ಷವಾದ ZANU-PF ಯು ಮಂಗಳವಾರದಂದು ಮುಗಾಬೆಯ ಉತ್ತರಾಧಿಕಾರಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿತ್ತು.ಈಗ ಅವರು ಶುಕ್ರವಾರದಂದು ಅಧಿಕೃತವಾಗಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲಿದ್ದಾರೆ.


COMMERCIAL BREAK
SCROLL TO CONTINUE READING

ಎರಡು ವಾರಗಳ ಹಿಂದೆ ಮುಗಾಬೆಯು ತನ್ನ ಪತ್ನಿ ಗ್ರೇಸ್ ಗೆ ಈ ಸ್ಥಾನವನ್ನು ಬಿಟ್ಟುಕೊಡಲು ಮ್ನಾನ್ಗಗ್ವಾರವನ್ನು ಪದಚ್ಯುತಿಗೊಳಿಸಲಾಗಿತ್ತು.ಆದರೆ ಈ ಯತ್ನವನ್ನು ಮಿಲಿಟರಿಯು ವಿಫಲಗೊಳಿಸಿತ್ತು.ನಂತರ  ತನ್ನ ಪಕ್ಷದ ಒತ್ತಾಯದ ಮೇರೆಗೆ ಮುಗಾಬೆಯು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.


ಎಮ್ಮರ್ಸನ್ ಮ್ನಾನ್ಗಗ್ವಾರವರು ಹಲವು ದಶಕಗಳ ಕಾಲ ಮುಗಾಬೆಯವರ ನಂಬಿಕಸ್ತ ವ್ಯಕ್ತಿಯಾಗಿದ್ದರು ಅಲ್ಲದೆ  1980 ರಲ್ಲಿ ಇವರು ಆಂತರಿಕ ಭದ್ರತೆಯ ನೇತೃತ್ವವನ್ನು ವಹಿಸಿದ್ದರು. ಮತ್ತು ಆ ಸಂಧರ್ಭದಲ್ಲಿ ಮಾನವ ಹಕ್ಕು ಸಂಘಟನೆಗಳು ಹೇಳುವಂತೆ ಸುಮಾರು 20,000 ಕ್ಕೂ ಹೆಚ್ಚು ನಾಗರಿಕರು ಆ ಸಂಧರ್ಭದಲ್ಲಿ ಮೃತಪಟ್ಟಿದ್ದರು.


ಎಮ್ಮರ್ಸನ್ ಮ್ನಾನ್ಗಗ್ವಾರವರು ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯ ಸೆಕ್ಯೂರಿಟಿ ಗಾರ್ಡ್ ಎಡ್ಗರ್ ಮಾಪುರಂಗ್ ಮುಗಾಬೆ ಏನೂ ಹೋದರು ಆದರೆ ಮ್ನಾನ್ಗಗ್ವಾ ಆ ಹಳೆಯ ಮನುಷ್ಯಕ್ಕಿಂತ ಭಿನ್ನವೇನು ಅಲ್ಲ ಆದರೆ ನಾವು ನಿಜವಾಗಿಯೂ ಈ ರೀತಿಯ ಬದಲಾವಣೆಯನ್ನು ನೀರಿಕ್ಷಿಸಿರಲಿಲ್ಲ ಅದರೂ ಅವರಿಗೆ ಒಂದು ಅವಕಾಶ ಕೊಟ್ಟು ನೋಡೋಣವೆಂದರು.