End of the world date and time : ಮುಂದಿನ ಜೀವನದ ಬಗ್ಗೆ ಎಲ್ಲರೂ ಹಲವು ರೀತಿಯ ಆಸೆ, ಕನಸು, ಹೀಗೆ ನಾನಾ ಫ್ಯೂಚರ್‌ ಪ್ಲ್ಯಾನ್‌ ಮಾಡಿಕೊಂಡಿರುತ್ತಾರೆ. ಇದೇ ರೀತಿ ನಿಮ್ಮ ಆಸೆಗಳೇನಾದ್ರು ಇದೆಯಾ, ಅದೂ ಕೊನೆ ಆಸೆ ಅಂತೆನಾದ್ರು ಇದೆಯಾ. ಮುಂದಿನ 50 60 ವರ್ಷಗಳ ಪ್ಲಾನ್ ಇದೆಯಾ?. ಅರೇ ಹೀಗೆ ಯಾಕೆ ಹೇಳ್ತಿದ್ದಾರೆ ಅಂತ ನಿಮ್ಮಲ್ಲಿ ಪ್ರಶ್ನೆ ಮೂಡಬಹುದು. ಈ ಪ್ರಶ್ನೆಯ ಉತ್ತರವನ್ನ ನೀವು ಕೇಳಿದ್ರೆ, ಆಘಾತದಿಂದ ಆಶ್ಚರ್ಯ ಪಡ್ತೀರ.... ಯಾಕೆ ಗೊತ್ತಾ 2068ರ ಹೊತ್ತಿಗೆ ಭೂಮಂಡಲ ವಿನಾಶ ಆಗಿಬಿಡಬಹುದು.. ಜಗತ್ತು ಕೊನೆಯಾಗಬಹುದು... ಈ ವಿನಾಶಕ್ಕೆ ಕಾರಣ ಅದೊಂದು ಕ್ಷುದ್ರ ಗ್ರಹ..!


COMMERCIAL BREAK
SCROLL TO CONTINUE READING

ಹೌದು ಅಷ್ಟಕ್ಕೂ 2068ಕ್ಕೆ ಏನಾಗುತ್ತೆ ಅನ್ನೋದನ್ನ ನೀವು ತಿಳಿದುಕೊಂಡ್ರೆ  ಅಚ್ಚರಿ ಪಡುತ್ತೀರ. ಅಂದಹಾಗೆ ಈಗ ಇಡೀ ಭೂಮಂಡಲಕ್ಕೆ.. ಇಡೀ ಭೂಲೋಕಕ್ಕೆ ಎಚ್ಚರಿಕೆಯ ಸಂದೇಶ ಕೊಡುತ್ತಿರುವುದು.. ಜಗತ್ತೇ ವಿನಾಶದ ಸಂಕೇತ ಕೊಡುತ್ತಿರುವುದು ಒಂದು ಕ್ಷುದ್ರ ಗ್ರಹ. ಅದು ಕೂಡ ಅಂತಿಂಥ ಕ್ಷುದ್ರ ಗ್ರಹ ಅಲ್ಲವೇ ಅಲ್ಲ. ಒಮ್ಮೆ ಅದು ಬಂದು ಅಪ್ಪಳಿಸಿತು ಅಂದರೆ ಮುಗೀತು ಕಥೆ, ನಾವು ನೀವು ಇದ್ದ ಯಾವ ಕುರುಹು ಕೂಡ ಉಳಿಯೋಕೆ ಚಾನ್ಸೇ ಇಲ್ಲ. ಈ ಧೈತ್ಯ ಕ್ಷುದ್ರ ಗ್ರಹ ಒಮ್ಮೆ ಧರೆಗೆ ಬಂದಪ್ಪಳಿಸಿತು ಅಂದರೆ ನೀವು ಊಹಿಸೋಕು ಸಾಧ್ಯವಿಲ್ಲ, ಆ ಕ್ಷುದ್ರ ಗ್ರಹದ ಹೆಸರೇ ‘ಅಪೋಫಿಸ್’. ಯಸ್, ಹೇಳಿ ಕೇಳಿ ನಾವು ಗ್ರಹಗಳ ಸುತ್ತಲೇ ಸುತ್ತುವುದು.. ಗ್ರಹಗಳು ನಮ್ಮ ಸುತ್ತ ಸುತ್ತುವುದು ಸಹಜವಾಗಿಯೇ ನಡೆಯುವ ಪ್ರಕ್ರಿಯೆ. ಅದು ಕೂಡ ನಮ್ಮ ಸೌರಮಂಡಲದಲ್ಲಿ ನಮ್ಮಂತೆಯೇ ಕೋಟ್ಯಂತರ ಗ್ರಹಗಳು ಇರೋದು ಗೊತ್ತಿರುವ ವಿಚಾರನೇ, ಈ ಅಪೋಫಿಸ್ ಕ್ಷುದ್ರ ಗ್ರಹ ಅಂತಿಂಥ ಕ್ಷುದ್ರ ಗ್ರಹ ಅಲ್ಲ. ಇದು ಸಾಮಾನ್ಯವಾದ ಗ್ರಹನೂ ಅಲ್ಲ. ಇದು ಪತ್ತೆಯಾಗಿದ್ದು 2014ರಲ್ಲಿ. ಹೌದು, ಯುನೈಟೆಡ್ ಸ್ಟೇಟ್ಸ್ನ ಹವಾಯಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಬೆಚ್ಚಿಬೀಳಿಸೋ ಅಧ್ಯಯನ ಮಾಡಿದ್ದಾರೆ. ಅವರ ಪ್ರಕಾರ 2068 ರಲ್ಲಿ ಈ ಭಯಾನಕ ಅಪೋಫಿಸ್ ಕ್ಷುದ್ರ ಗ್ರಹ ಭೂಮಿಗೆ ಅಪ್ಪಳಿಸಲಿದೆ ಅನ್ನೋ ಎಚ್ಚರಿಕೆಯ ಸಂದೇಶ ಕೊಟ್ಟಿದ್ದಾರೆ. ಅದು ಕೂಡ ಎಷ್ಟು ವೇಗದಲ್ಲಿ ಮತ್ತು ಎಷ್ಟು ದೂರದಲ್ಲಿ ಅನ್ನೋದನ್ನ ನೀವು ಏನಾದ್ರು ತಿಳಿದುಕೊಂಡರೆ ಶಾಕ್‌ ಆಗ್ತೀರ.


ಹೌದು.. ಈ ಕ್ಷುದ್ರ ಗ್ರಹದ ಗಾತ್ರ.. ದೂರ.. ಮತ್ತು ಪ್ರಮುಖವಾಗಿ ಅದು ಅಪ್ಪಳಿಸಲಿರೋ ವೇಗವನ್ನ ನೀವು ಏನಾದ್ರು ಕೇಳಿದ್ರೆ ಅಚ್ಚರಿ ಪಡ್ತೀರ. ಈ ಗ್ರಹ ಅಪ್ಪಳಿಸುವುದರಿಂದ ಕೇವಲ ಘರ್ಷಣೆಯಾಗುತ್ತೆ ಅನ್ನೋದನ್ನೂ ಕೆಲವರು ಹೇಳಿದ್ರೆ ಇನ್ನೂ ಕೆಲವರು ಇಲ್ಲ, ಈ ಅಪೋಫಿಸ್ ದಾಳಿ ಮಾಡಿತು ಅಂದರೆ ಮುಗೀತು.. ಭೂಮಂಡಲಕ್ಕೆ ಭೂಮಂಡಲಕ್ಕೇ ಆಘಾತ ಅಂತಾರೆ. ಹೌದು, ಇದನ್ನ ಕೇಳಿದ ಮೇಲೆ ಬಹುಷಃ ನಿಮಗೆ ಅರ್ಥ ಆಗಿರಬಹುದು ಎಷ್ಟರ ಮಟ್ಟಿಗೆ ಇದರ ಪ್ರಬಲತೆ ಇದೆ.. ಎಷ್ಟರ ಮಟ್ಟಿಗೆ ಈ ಕ್ಷುದ್ರ ಗ್ರಹದ ಆರ್ಭಟ ಇರಲಿದೆ ಅನ್ನೋದು. ಅಲ್ಲೆಲ್ಲೋ ಅಂದ್ರೆ ನಮ್ಮ ಭೂಮಿಯಿಂದ ಸರಿಸುಮಾರು 3,93,58,438 ಕಿ.ಮೀ ದೂರದಲ್ಲಿರೋ ಈ ದೈತ್ಯ ನಮ್ಮ ಭೂಮಿಗೆ ಅಷ್ಟು ದೂರದಿಂದ, ಅದು ಕೂಡ 1,120 ಅಡಿ ಉದ್ದವಿರೋ ಅಂದ್ರೆ ನಮ್ಮ ಸರ್ದಾರ್ ವಲ್ಲಭಭಾಯ್ ಪಟೇಲ್ ಪ್ರತಿಮೆ.. ಯುನಿಟಿ ಆಫ್ ಸ್ಟಾಚ್ಯೂ ಇದ್ಯಲ್ಲ ಅದ್ಕಿಂತಲೂ ಎರಡು ಪಟ್ಟು ಉದ್ದವಿರೋ ಈ ಕ್ಷುದ್ರ ಗ್ರಹ ಅಪ್ಪಳಿಸಿದ್ರೆ ಪರಿಣಾಮ ಹೇಗಿರಬಹುದು ಅಂತ ಒಮ್ಮೆ ನೀವೆ ಯೋಚಿಸಿ. 2,700 ಕೋಟಿ ಕೆ.ಜಿ ತೂಕವಿರುವ ಈ ಕ್ಷುದ್ರ ಗ್ರಹ ಒಂದೊಮ್ಮೆ ಭೂಮಿಗೆ ಅಷ್ಟು ದೂರದಿಂದ ಬಂದು ಅಪ್ಪಳಿಸಿತ್ತು ಅಂದ್ರೆ ಯಾವ ಆಟಂ ಬಾಂಬ್​ ಕೂಡ ಇದರ ಮುಂದೆ ಲೆಕ್ಕಕ್ಕೇ ಇಲ್ಲ ಬಿಡಿ. ಹಾಗಂದ್ರೆ ಇದ್ರ ಪರಿಣಾಮ ಹೇಗಿರಬಹುದು ಅಂದ್ರೆ ನೀವು ಪಳಯುಳಿಕೆಯನ್ನೂ ಕೂಡ ಹುಡುಕಲು ಸಾಧ್ಯವಿಲ್ಲ ಅನ್ನೋದು ಸತ್ಯ.


ನೋಡಿದ್ರಾ? ನಿಮಗೆ ಈಗ ಈ ಅಪೋಫಿಸ್ ಕ್ಷುದ್ರ ಗ್ರಹದ ಪರಿಣಾಮ ಎಷ್ಟರ ಮಟ್ಟಿದೆ ಇದೆ ಅನ್ನೋದು ರಿಯಾಲೈಸ್ ಆಗಿರಬಹುದು ಅನ್ಸುತ್ತೆ ಅಲ್ವಾ? ಹೌದು ಇದೇ ಕಾರಣದಿಂದ ನಾವು ಇದನ್ನ  ಭೂ ವಿನಾಶಕ ಗ್ರಹ ಅಂದಿದ್ದು. ಅಷ್ಟಕ್ಕೂ ಕ್ಷುದ್ರ ಗ್ರಹ ಇದ್ಯಲ್ಲಾ ಇದರ ವಿಸ್ತೀರ್ಣ ಎಷ್ಟು ಗೊತ್ತಾ? 370 ಮೀಟರ್ ಅಗಲವಿದೆ. ಅಂದ್ರೆ ಇದರ ಉದ್ದ 1,120 ಅಡಿ ಉದ್ದವಿದೆ ಹಾಗೆಯೇ ವಿಸ್ತೀರ್ಣವನ್ನ ನೋಡಿದಾಗ ಇದು ಮುರು ಪುಟ್ಬಾಲ್ ಮೈದಾನದಷ್ಟು ವಿಶಾಲವಾಗಿದೆ. ಇನ್ನೊಂದು ಭಯಾನಕ ವಿಚಾರ ಏನು ಅಂದ್ರೆ, ಈ ದೈತ್ಯಕಾರದ ಕ್ಷುದ್ರ ಗ್ರಹ ಅಪ್ಪಳಿಸಿದರೆ ವಿಜ್ಞಾನಿಗಳು ಏನೂ ಮಾಡಲು ಸಾಧ್ಯವಿಲ್ಲ. ಆದ್ರೆ ಸ್ಪೇಸ್ ಎಕ್ಸ್ & ಟೆಸ್ಲಾ ಸಂಸ್ಥಾಪಕ ಎಲೋನ್ ಮಸ್ಕ್ ಪ್ರಕಾರ  ಇದರ ದಾಳಿ ಯಾವ ಕಡೆ ನಿರ್ದಿಷ್ಟವಾಗಿ ಆಗುತ್ತೆ ಅನ್ನೋದು ಹೇಳೋಕೆ ಸಾಧ್ಯವಿಲ್ಲ. ಆದ್ರೆ ಇದು ಅಪ್ಪಳಿಸಿದರೆ ಹಲವು ಬಂಡೆಗಳು ಒಟ್ಟಿಗೆ ಬಂದು ಅಪ್ಪಳಿಸಿದರೆ ಯಾವ ರೀತಿ ಪರಿಣಾಮ ಆಗಲಿದ್ಯೋ ಹಾಗೆಯೇ ಇರಲಿದ್ಯಂತೆ. ಅಂದ್ರೆ ಈ ಕ್ಷುದ್ರ ಗ್ರಹ ಭೂಮಿಗೆ ಅಪ್ಪಳಿಸಿದರೆ ಅದ್ರ ಪರಿಣಾಮ 880 ದಶ ಲಕ್ಷ ಟನ್​ಗಳಷ್ಟು ಟಿಎನ್​ಟಿ ಸ್ಫೋಟವಾದ್ರೆ ಹೇಗಿರುತ್ತೋ ಹಾಗಿರುತ್ತೆ. ಅಂದ್ರೆ ಹಿರೋಷಿಮಾ ಮೇಲೆ ಪರಮಾಣು ಬಾಂಬ್ ಹಾಕಿದ್ರಲ್ಲಾ ಅದ್ಕಿಂತಲೂ 65 ಸಾವಿರ ಪಟ್ಟು ಶಕ್ತಿ ಶಾಲಿ ಆಗಿರಲಿದೆ.


ನೋಡಿ, ಈ ಕ್ಷುದ್ರಗ್ರಹವು ಕಕ್ಷೆಯಿಂದ ಪ್ರತಿವರ್ಷ ಸುಮಾರು 557 ಅಡಿಗಳಷ್ಟು ಸರಿಯುತ್ತಿದೆ. ಇದನ್ನು ಗಣನೆಗೆ ತೆಗೆದುಕೊಂಡರೆ 2068ರಲ್ಲಿ ಇದು ಭಾರಿ ಪ್ರಭಾವ ಬೀರುವುದನ್ನು ಅಲ್ಲಗಳೆಯುವಂತಿಲ್ಲ ಎಂದಿದ್ದಾರೆ ಹವಾಯಿಯ ಸಂಶೋಧಕರು. ಇವೆಲ್ಲವನ್ನೂ ನೋಡಿದಾಗ ಒಂದಂತು ಸತ್ಯ.. ಒಂದು ವೇಳೆ ಈ ಅಪೋಫಿಸ್ ಕ್ಷುದ್ರಗ್ರಹವೊಂದು ಭೂಮಿಗೆ ಭಯಾನಕ ರೀತಿಯಲ್ಲಿ ಅಪ್ಪಳಿಸಿದ್ದೇ ಹೌದಾದಲ್ಲಿ ಇದರಿಂದ ಆಗಲಿರೋ ಅನಾಹುತ ಇದ್ಯಲ್ಲ ಅದನ್ನ ಊಹಿಸೋಕು ಸಾಧ್ಯವಿಲ್ಲ.. ಹೌದು, ಈಗಾಗಲೇ ಹೇಳಿದಂತೆ ಈ ಉಲ್ಕೆಗಳು ಬಂತು ಭೂಮಿಗೆ ಅಪ್ಪಳಿಸೋದು ಇದೇ ಮೊದಲೂ ಅಲ್ಲ, ಇದೇ ಕೊನೆಯೂ ಅಲ್ಲ ಬಟ್ ಇಲ್ಲಿ ಈ ಕ್ಷುದ್ರ ಗ್ರಹದ ಗಾತ್ರ ಇದ್ಯಲ್ಲ ಅದು ಮತ್ತು ಅದರ ತೂಕ ಹಾಗು ಗಾತ್ರ ಪ್ರಬಲವಾಗಿದೆ. ಅದ್ರಲ್ಲೂ ಈ ಬೃಹತ್ ಗಾತ್ರ ಅಂದ್ರೆ ಬರೋಬ್ಬರಿ 27 ಬಿಲಿಯನ್ ಕೆಜಿ ತೂಕದ ಗ್ರಹ ಭೂಮಿಗೆ ಬಂದು ಬಿದ್ರೆ ಅದ್ರಿಂದ ದೊಡ್ಡ ಅನಾಹುತವೇ ಆಗಬಹುದು. 512 ಮೀಟರ್ ಆಳದ ಕುಳಿಗಳೇ ನಿರ್ಮಾಣ ಆಗಬಹುದು..


ಇನ್ನು ಇದೇ ಕ್ಷುದ್ರ ಗ್ರಹ ಸಮುದ್ರದಲ್ಲಿ ಬಿದ್ದರೇ ಬಲವಾದ ಸುನಾಮಿ ಅದು ಕೂಡ ಒಂದೆರಡು ಸುನಾಮಿ ಅಲ್ಲ ಹಲವು ಸುನಾಮಿಗಳಿ ಒಟ್ಟಿಗೆ ಆರ್ಭಟಿಸಿದ್ರೆ ಎಷ್ಟು ಪರಿಣಾಮ ಆಗಬಲ್ಲದೋ ಅಷ್ಟು ಪರಿಣಾಮ ಆಗುತ್ತೆ. ಸಾಗರದಲ್ಲಿ ಅಲ್ಲೋಲ ಕಲ್ಲೋಲವೇ ಆಗಬಹುದು. 2068ಕ್ಕೆ ಭೂಮಿಗೆ ಅಪ್ಪಳಿಸುವ ಇದೇ ಕ್ಷುದ್ರ ಗ್ರಹ 2029ರಲ್ಲಿ ಭೂಮಿಯ ಮೇಲೆ ಅಪ್ಪಳಿಸಬಹುದು. ಈ ಪ್ರಬಲ ಕ್ಷುದ್ರ ಗ್ರಹ 25 ಸಾವಿರ ಎಮ್​ಪಿಹೆಚ್ ರಾಕೆಟ್ ವೇಗದಲ್ಲಿ ಅಂದ್ರೆ ಕ್ಷುದ್ರಗ್ರಹವು ಸೆಕೆಂಡಿಗೆ 30.728 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿದೆ. ಅಪೋಫಿಸ್ ಎಂಬ ಈ ಕ್ಷುದ್ರಗ್ರಹವನ್ನು 2004ರಲ್ಲಿಯೇ ಸಂಶೋಧಕರು ಕಂಡುಹಿಡಿದಿದ್ದಾರೆ. ಆ ಸಮಯದಲ್ಲಿ ಇದು ಭೂಮಿಗೆ ಅತಿ ಸಮೀಪದಲ್ಲಿ ಇತ್ತು. ಅದು ಕಕ್ಷೆಯನ್ನು ಸುತ್ತುವ ಅಂದಾಜು ಲೆಕ್ಕಾಚಾರದ ಆಧಾರದ ಮೇಲೆ 2029ರಲ್ಲಿ ಭೂಮಿಗೆ ಸಮೀಪದಿಂದ ಸಂಚರಿಸಲಿದೆ. ಆದರೆ ಇದರ ಪ್ರಮಾಣ ಕೇವಲ 2.7ರಷ್ಟು ಮಾತ್ರ ಇರುವ ಹಿನ್ನೆಲೆಯಲ್ಲಿ, ಅಂಥದ್ದೇನೂ ಭಾರಿ ಅನಾಹುತ ಸಂಭವಿಸಲಾರದು ಎಂದು ಸಂಶೋಧಕರು ಹೇಳ್ತಿದ್ದಾರೆ. ಈ ಸಮಯದಲ್ಲಿ ಯಾವುದೇ ದೂರದರ್ಶಕವಿಲ್ಲದೆ ಕ್ಷುದ್ರಗ್ರಹವನ್ನು ನೋಡಬಹುದಂತೆ.


ಗಾಡ್ ಆಫ್ ಚೋಸ್ ಅಂತ ಕರೆಯೋ ಈ ಕ್ಷುದ್ರ ಗ್ರಹವೇ ಅಪೋಫಿಸ್. ಅಪೋಫಿಸ್ ಅಂದ್ರೆ, ಪ್ರಾಚೀನ ಈಜಿಪ್ಟಿನ ಪುರಾಣದ ಪ್ರಕಾರ ಭೂತದಂತಹ ಹಾವು. ಇದು ದುಷ್ಟತೆಯ ಸಂಕೇತ. ಈ ಹಾವು ಸೂರ್ಯ ದೇವರ ಶತ್ರು ಎಂದು ಹೇಳ್ತಾರೆ. ಆದ್ದರಿಂದಲೇ ಈ ಅಪೋಫಿಸಿಕ್ ಕ್ಷುದ್ರಗ್ರಹ ಈಗ ನಮ್ಮ ಭೂಮಿಗೆ, ನಮಗೆ ಶತ್ರುವಿನ ರೂಪದಲ್ಲಿ ಕಾಡುತ್ತಿದೆ. ಆದ್ರೆ ಒಬ್ಬರು ಹಿರಿಯ ಭೂ ವಿಜ್ಞಾನಿ ಮಾತ್ರ ಇಲ್ಲ ಹಾಗೆಲ್ಲಾ ಆಗಲ್ಲ.. ಅದು 48 ವರ್ಷದಲ್ಲಿ ಚಿಕ್ಕದಾಗಬಹುದು ಅಂತಾರೆ. ಇನ್ನೊಂದು ಆಗಾತ ಏನು ಅಂದ್ರೆ ಈ ಕ್ಷುದ್ರ ಗ್ರಹದ ಸಂಚಾರ ಮಾರ್ಗ ಸರಿಯಾಗಿ ನಿರ್ಧಾರ ಮಾಡಲು ಸಾಧ್ಯವಿಲ್ಲ. ಅಲ್ಲದೆ ಒಂದು ಸಲ ಇದು ಸೂರ್ಯನ ಶಾಖದಿಂದ ಬೆಂಕಿಯುಂಡೆಯಂತಾಗಿ ಅದು ನಬೋಮಂಡಲವನ್ನ ಬಿಟ್ಟು ಬಂದರೆ ಆ ನಂತರ ನೀವು ಊಹಿಸೋಕು ಸಾಧ್ಯವಿಲ್ಲ. ಅಲ್ಲದೆ ಒಮ್ಮೆ ಭೂಮಿಯ ಭೂಮಿಯ ಗುರುತ್ವಾಕರ್ಷಣ ಶಕ್ತಿಗೆ ಒಳಗಾಯ್ತು ಅಂದ್ರೆ ಮುಗೀತು ಕತೆ. ಹಾಗಂತ ಇದರ ಪಥವನ್ನ ಬದಲಿಸಲು ಸಾಧ್ಯವೇ ಇಲ್ಲ.. ಅಥವಾ ಅದನ್ನ ನಿರ್ಧಾರ ಮಾಡಲು ಸಾಧ್ಯವೇ ಇಲ್ಲ ಅಂತ ಹೇಳೋಕೆ ಸಾಧ್ಯವಿಲ್ಲ. ಕಾರಣ ಏನು ಅಂದ್ರೆ ಈ ಕ್ಷುದ್ರ ಅಪ್ಪಳಿಸಲು ಇನ್ನೂ ಸಮಯ ಇರೋದ್ರಿಂದ ಅದನ್ನ ಬದಲಿಸಬಹುದು ಅಥವಾ ಅದ್ರಿಂದ ಭೂ ಮಂಡಲವನ್ನ ರಕ್ಷಿಸಬಹುದು ಅನ್ನೋದು ವಿಜ್ಞಾನಿಗಳ ಲೆಕ್ಕಾಚಾರ.


ಅಪೋಫಿಸ್‌ ಎಂಬ ಕ್ಷುದ್ರ ಗ್ರಹದಿಂದ ಭೂಮಿಗೆ ಆಪಾಯವಾಗಬಹುದೆಂದು ಹೇಳುವ ಮಾಹಿತಿಯನ್ನ... ನಿಜಕ್ಕೂ ಈ ಕ್ಷುದ್ರ ಗ್ರಹ 2068 ರೊಳಗೆ ಭೂಮಿಗೆ ಬಂದು ಅಪ್ಪಳಿಸುತ್ತಾ...? ನಿಖರವಾಗಿ ಹೋಳೋದಕ್ಕೂ ಆಗೋದಿಲ್ಲ.