ನ್ಯೂಯಾರ್ಕ್‌: ಅಮೆರಿಕದ ನ್ಯೂಯಾರ್ಕ್‌ನ ಟೈಮ್ಸ್‌ ಚೌಕದ ಬಸ್ ಟರ್ಮಿನಲ್  ಬಳಿ ಸೋಮವಾರ ಸ್ಫೋಟ ಸಂಭವಿಸಿದೆ.


COMMERCIAL BREAK
SCROLL TO CONTINUE READING

ಸ್ಫೋಟದಲ್ಲಿ ಹಲವರು ಗಾಯಗೊಂಡಿದ್ದಾರೆ  ಎಂದು ಅಮೇರಿಕಾದ  ಮಾಧ್ಯಮಗಳು ವರದಿ ಮಾಡಿವೆ.ಸ್ಫೋಟ ಸಂಭವಿಸಿದ  ಶಂಕಿತ ವ್ಯಕ್ತಿಯೋಬ್ಬನ್ನನ್ನು ವಶಕ್ಕೆ ಪಡೆಯಲಾಗಿದೆ. ಆ ವಶಪಡೆಸಿಕೊಂಡ ವ್ಯಕ್ತಿಯನ್ನು  ಬಿಟ್ಟರೆ ಬೇರೆ ಯಾರಿಗೂ ಗಾಯವಾಗಿಲ್ಲ’ ಎಂದು  ಇಲ್ಲಿನ ಪೊಲೀಸರು ತಿಳಿಸಿದ್ದಾರೆ. ಸುರಂಗ ಮಾರ್ಗದಲ್ಲಿ ಮತ್ತೊಂದು ಸ್ಫೋಟಕ ಪತ್ತೆಯಾಗಿದೆ. ಪೋರ್ಟ್‌ ಅಥಾರಿಟಿ ಮತ್ತು ಟೈಮ್ಸ್‌ ಚೌಕಕ್ಕೆ ಸಂಪರ್ಕ ಕಲ್ಪಿಸುವ ಸುರಂಗ ಮಾರ್ಗದ ಬದಲು ಬೇರೆ ಮಾರ್ಗ ಬಳಸಿರಿ ಎಂದು ಜನರಿಗೆ ಪೊಲೀಸರು ಸಲಹೆ ನೀಡಿದ್ದಾರೆ. 




ಘಟನೆಯಿಂದಾಗಿ ಕೆಲವು ಸುರಂಗ ಮಾರ್ಗಗಳ ರೈಲು ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇನ್ನು ಕೂಡ ಇದು ಈ ದಾಳಿಯ ಹಿಂದೆ ಭಯೋತ್ಪಾದಕರ ಕೈವಾಡ ಇದೆಯೋ ಇಲ್ಲವೋ ಎನ್ನುವುದರ ಕುರಿತು ಇನ್ನು ಪೊಲೀಸರು ಶೋಧಿಸುತ್ತಿದ್ದಾರೆ. ಶ್ವೇತ ಭವನದ ವಕ್ತಾರ ಸರಾ ಹುಕಾಬಿ  ಈ ಘಟನೆಯ ಕುರಿತಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ  ಮಾಹಿತಿಯನ್ನು ರವಾನಿಸಲಾಗಿದೆ ಎಂದು ತಮ್ಮ ಟ್ವೀಟ್ ಮೂಲಕ ತಿಳಿಸಿದ್ದಾರೆ.