ನವದೆಹಲಿ: ನಾವು ಇದೀಗ ಈ ವರ್ಷದ ಅಂತಿಮ ಘಟ್ಟದಲ್ಲಿದ್ದೇವೆ. ಕಳೆದ ಒಂದು ದಶಕ ಮೊಬೈಲ್ ಕ್ಷೇತ್ರದಲ್ಲಿ ನಡೆದ ಕ್ರಾಂತಿ, ಅಪ್ಲಿಕೇಶನ್ ಹಾಗೂ ಗೇಮ್ಸ್ ಗಳ ದೃಷ್ಟಿಯಿಂದ ತುಂಬಾ ಮಹತ್ವ ಪಡೆದುಕೊಂಡಿದೆ. ಇನ್ನೂ ಕೆಲವೇ ದಿನಗಳಲ್ಲಿ ನಾವು 20ನೇ ದಶಕಕ್ಕೆ ಕಾಲಿಡುತ್ತಿದ್ದೇವೆ. ಇದಕ್ಕೂ ಮೊದಲು 2010ನೇ ದಶಕದಲ್ಲಿ ಇಂಟರ್ನೆಟ್ ನಲ್ಲಿ ಹೆಚ್ಚು ಪ್ರಚಲಿತಗೊಂಡ ಹಾಗೂ ಬಳಕೆಗೊಂಡ 10 ಮೊಬೈಲ್ ಆಪ್ ಗಳ ಕುರಿತು ಮಾಹಿತಿ ನೀಡಲಿದ್ದೇವೆ. ಮೊಬೈಲ್ ಮಾರ್ಕೆಟ್ ಡೇಟಾ ಹಾಗೂ ಅನಲಿಟಿಕ್ಸ್ ಸಂಸ್ಥೆ ಆಪ್ ಎನಿ ಹೊರಡಿಸಿರುವ ಅಂಕಿ-ಅಂಶಗಳ ಪ್ರಕಾರ, ಈ ದಶಕ ಸೋಶಿಯಲ್ ಮೀಡಿಯಾ ಆಪ್ ಗಳ ದಶಕವಾಗಿದೆ ಎಂದು ಹೇಳಿದೆ. ಇತ್ತೀಚೆಗಷ್ಟೇ ಬ್ಲಾಗ್ ವೊಂದನ್ನು ಪ್ರಕಟಿಸಿರುವ ಸಂಸ್ಥೆ, 2010 ರಿಂದ 2019ರ ಅವಧಿಯಲ್ಲಿ ಅತ್ಯಧಿಕವಾಗಿ ಡೌನ್ಲೋಡ್ ಗೊಂಡ ಆಪ್ ಗಳ ಮಾಹಿತಿ ನೀಡಿದ್ದು, "ಸ್ಮಾರ್ಟ್ ಫೋನ್, ತನ್ನ ಬಳಕೆದಾರರ ಕೈಗೆ ಇಂಟರ್ನೆಟ್ ನ ಒಂದು ವಿಂಡೋ ನೀಡಿ ಪ್ರತಿಯೊಬ್ಬರ ಮನದಲ್ಲಿ ಗಟ್ಟಿಯಾಗಿ ನೆಲೆಯೂರಿದೆ" ಎಂದಿದೆ.


COMMERCIAL BREAK
SCROLL TO CONTINUE READING

ಕಳೆದ ಒಂದು ದಶಕದಲ್ಲಿ ಅತಿ ಹೆಚ್ಚು ಡೌನ್ಲೋಡ್ ಗೊಂಡ ಆಪ್ ಗಳ ಪಟ್ಟಿ ಕೆಳಗಿನಂತಿದೆ


1. ಫೇಸ್ ಬುಕ್
ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಗಳಲ್ಲಿ ಫೇಸ್ ಬುಕ್ ಮೊದಲ ಸ್ಥಾನದಲ್ಲಿದ್ದು. ಅತಿ ಹೆಚ್ಚು ಡೌನ್ಲೋಡ್ ಗೆ ಒಳಗಾದ ಪಟ್ಟಿಯಲ್ಲಿಯೂ ಸಹ ಇದು ನಂ.1 ಸ್ಥಾನದಲ್ಲಿದೆ.


2. ಫೇಸ್ ಬುಕ್ ಮೆಸೆಂಜರ್
2011 ರಲ್ಲಿ iOS ಹಾಗೂ ಅಂಡ್ರಾಯಿಡ್ ಸ್ಮಾರ್ಟ್ ಫೋನ್ ಗಳ ಮೇಲೆ ಚಾಟ್ ನಡೆಸಲು ಫೇಸ್ ಬುಕ್ ಮೆಸೆಂಜರ್ ಬಿಡುಗಡೆಗೊಳಿಸಲಾಗಿದೆ. ಈ ದಶಕದ ಅಂತಿಮ ಘಟ್ಟಕ್ಕೆ ತಲುಪುತ್ತಿದ್ದಂತೆ, ಅತಿ ಹೆಚ್ಚು ಡೌನ್ಲೋಡ್ ಗೆ ಒಳಗಾದ ಆಪ್ ಗಳ ಪಟ್ಟಿಯಲ್ಲಿ ಇದು ನಂ.2 ಸ್ಥಾನಕ್ಕೆ ತಲುಪಿದೆ.


3. ವಾಟ್ಸ್ ಆಪ್
ವಾಟ್ಸ್ ಆಪ್ ಒಂದು ಉಚಿತ ಸಂದೇಶ ಸೇವೆಯಾಗಿದ್ದು, ಜಾಗತಿಕವಾಗಿ ತುಂಬಾ ಪ್ರಚಲಿತವಾಗಿದೆ. ಇದರ ಒಡೆತನದ ಹಕ್ಕು ಸದ್ಯ ಫೇಸ್ ಬುಕ್ ಬಳಿ ಇದೆ.


4. ಇನ್ಸ್ಟಾಗ್ರಾಮ್
ಫೇಸ್ ಬುಕ್ ಒಡೆತನದ ಇನ್ಸ್ಟಾಗ್ರಾಮ್  ಫೋಟೋ ಹಾಗೂ ವಿಡಿಯೋ ಹಂಚಿಕೊಳ್ಳುವ ಪ್ಲಾಟ್ಫಾರಂ ಆಗಿದ್ದು, ಇದನ್ನು 2010 ರಲ್ಲಿ ಬಿಡುಗಡೆಗೊಳಿಸಲಾಗಿತ್ತು.


5. ಸ್ನ್ಯಾಪ್ ಚಾಟ್
2011ರಲ್ಲಿ ಬಿಡುಗಡೆಗೊಂಡ ಈ ಆಪ್ ಅತೀ ಶೀಘ್ರದಲ್ಲಿಯೇ ಸಾರ್ವಜನಿಕರ ಮಧ್ಯೆ ಪ್ರಸಿದ್ಧಿಯನ್ನು ಪಡೆಯಲು ಯಶಸ್ವಿಯಾಗಿದೆ. ಈ ಕಾರಣದಿಂದ ಹಲವು ಜನ ಈ ಆಪ್ ಅನ್ನು ಡೌನ್ಲೋಡ್ ಮಾಡಿದ್ದು, ಅತಿ ಹೆಚ್ಚು ಡೌನ್ಲೋಡ್ ಗೊಂಡ ಆಪ್ ಗಳ ಪಟ್ಟಿಯಲ್ಲಿ ಇದು ಐದನೇ ಸ್ಥಾನದಲ್ಲಿದೆ.


6. ಸ್ಕೈಪ್
ವಿಡಿಯೋ ಕಾಲಿಂಗ್ ಹಾಗೂ ವಾಯ್ಸ್ ಚಾಟ್ ಸೇವೆ ಒದಗಿಸುವ ಈ ಆಪ್ ಅತಿ ಹೆಚ್ಚು ಡೌನ್ಲೋಡ್ ಗೊಂಡ ಆಪ್ ಗಳ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. 


7. ಟಿಕ್-ಟಾಕ್
ಟಿಕ್-ಟಾಕ್ ಒಂದು ವಿಡಿಯೋ ಹಂಚಿಕೊಳ್ಳುವ ನೆಟ್ವರ್ಕಿಂಗ್ ಪ್ಲಾಟ್ಫಾರ್ಮ್ ಆಗಿದ್ದು, ಬಿಜಿಂಗ್ ಮೂಲದ ಬೈಟ್ ಡಾನ್ಸ್ ಬಳಿ ಈ ಆಪ್ ನ ಒಡೆತನದ ಹಕ್ಕು ಇದೆ. 2017ರಲ್ಲಿ ಚೀನಾ ಹೊರಗಡೆ ಇರುವ ಮಾರುಕಟ್ಟೆಯಲ್ಲಿ ಲಾಂಚ್ ಮಾಡಲಾಗಿದ್ದು, ಅತಿ ಕಡಿಮೆ ಅವಧಿಯಲ್ಲಿ ಇದು ಜನಮನ್ನಣೆ ಗಳಿಸಿದೆ.


8. UC ಬ್ರೌಸರ್
ಚೀನಾದ ಅಲಿಬಾಬಾ ಗ್ರೂಪ್ ಮಾಲಿಕತ್ವದ UC ಬ್ರೌಸರ್, ವೆಬ್ ಬ್ರೌಸರ್ ಸೇವೆ ಒದಗಿಸುತ್ತದೆ. ಕಳೆದ ದಶಕದಲ್ಲಿ ಅತಿ ಹೆಚ್ಚು ಡೌನ್ಲೋಡ್ ಗೆ ಒಳಗಾದ ಆಪ್ ಗಳ ಪಟ್ಟಿಯಲ್ಲಿ ಇದು 8ನೇ ಸ್ಥಾನ ಅಲಂಕರಿಸಿದೆ.


9. ಯುಟ್ಯೂಬ್
ಯುಟ್ಯೂಬ್ ಒಂದು ವಿಡಿಯೋ ಶೇರಿಂಗ್ ಪ್ಲಾಟ್ಫಾರ್ಮ್ ಆಗಿದ್ದು, ಈ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.


10. ಟ್ವಿಟ್ಟರ್
2006ರಲ್ಲಿ ಬಿಡುಗಡೆಗೊಂಡ ಈ ಆಪ್ ಬಳಿಕ ಜನಸಾಮಾನ್ಯರ ಮಧ್ಯೆ ಭಾರಿ ಪ್ರಚಾರಗಿಟ್ಟಿಸಿಕೊಂಡಿದೆ. ಈ ಪ್ಲಾಟ್ಫಾರ್ಮ್ ಮೇಲೆ ಜನರು ಟ್ವೀಟೋಕ್ತಿ ಮಾಡುವ ಮೂಲಕ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾರೆ. ಆದರೆ, ಯಾವುದೇ ಬಳಕೆದಾರ ಕೇವಲ 280 ಪದಗಳನ್ನು ಮಾತ್ರ ಬಳಸಿ ಟ್ವೀಟ್ ಮಾಡಬಹುದು.