ನ್ಯೂಯಾರ್ಕ್: ನಿಮ್ಮ ಬ್ಯಾಂಕ್ ಖಾತೆಗೆ ಇದ್ದಕ್ಕಿದ್ದಂತೆ ಕೋಟಿ ರೂಪಾಯಿಗಳು ಜಮಾ ಆಗಿ ನೀವು  ರಾತ್ರೋರಾತ್ರಿ ಶ್ರೀಮಂತರಾದರೆ ಹೇಗಿರುತ್ತೆ? ಅಮೆರಿಕದ ಲೂಯಿಸಿಯಾನದಲ್ಲಿ ಅಂತಹ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲಿ ಬ್ಯಾಂಕ್ ಆಕಸ್ಮಿಕವಾಗಿ 50 ಬಿಲಿಯನ್ ಅಂದರೆ ಸುಮಾರು 3.7 ಲಕ್ಷ ಕೋಟಿ ರೂ.  ಅನ್ನು ಅಮೆರಿಕನ್ ಕುಟುಂಬದ  (Americal Family) ಖಾತೆಗೆ ಜಮಾ ಮಾಡಿದ್ದು ಕುಟುಂಬ ಇದ್ದಕ್ಕಿದ್ದಂತೆ ಕೋಟ್ಯಾಧಿಪತಿಯಾಗಿದೆ.


COMMERCIAL BREAK
SCROLL TO CONTINUE READING

ಸ್ವಲ್ಪ ಸಮಯದವರೆಗೆ ಸ್ವತಃ ಬಿಲಿಯನೇರ್ ಎಂದು ಭಾವಿಸಿದರು:
ಲೂಯಿಸಿಯಾನದ (Louisiana) ಬ್ಯಾಟನ್ ರೂಜ್‌ನ ರಿಯಲ್ ಎಸ್ಟೇಟ್ ಏಜೆಂಟ್ ಡ್ಯಾರೆನ್ ಜೇಮ್ಸ್ (Darren James) ಮತ್ತು ಅವರ ಪತ್ನಿ ಕೋಟ್ಯಾಧಿಪತಿಯಾಗಿದ್ದಾರೆ. ವಾಸ್ತವವಾಗಿ, ಬ್ಯಾಂಕ್ ತಪ್ಪಾಗಿ ಹಣವನ್ನು ಡ್ಯಾರೆನ್ ಅವರ ಖಾತೆಗೆ ಜಮಾ ಮಾಡಿದೆ ಎಂದು ತಿಳಿದುಬಂದಿದೆ.


ಫಾಕ್ಸ್ 11 ರೊಂದಿಗೆ ಮಾತನಾಡುತ್ತಾ, ಡ್ಯಾರೆನ್ ಜೇಮ್ಸ್, ನನ್ನ ಹೆಂಡತಿ ಕರೆ ಮಾಡಿ ಖಾತೆಯಲ್ಲಿನ ಹಣದ ಬಗ್ಗೆ ತಿಳಿಸಿದಾಗ ಏನಾದರೂ ತಪ್ಪಾಗಿರಬಹುದು ಎಂದು ನನಗೆ ಅನಿಸಿತು. ನನ್ನ ಬಳಿ ಅಷ್ಟೊಂದು ಹಣವಿಲ್ಲ ಎಂದು ನನಗೆ ತಿಳಿದಿತ್ತು, ಆದರೆ ನಮ್ಮ ಹಿರಿಯರು ಯಾರಾದರೂಇಷ್ಟು ದೊಡ್ಡ ಮೊತ್ತವನ್ನು ಬಿಟ್ಟಿರಬೇಕು ಎಂಬ ಆಲೋಚನೆ ಬಂದಿತು ಎಂದಿದ್ದಾರೆ.


ಇದನ್ನೂ ಓದಿ- Government Scheme: ಕೇವಲ 7 ರೂ. ಉಳಿಸಿ ಮಾಸಿಕ 5,000 ರೂ. ಪಿಂಚಣಿ ಪಡೆಯಿರಿ


ಬ್ಯಾಂಕಿಗೆ ಮಾಹಿತಿ ನೀಡಿದ ಡ್ಯಾರೆನ್ ಜೇಮ್ಸ್ :
ತಮ್ಮ ಖಾತೆಗೆ (Account) 3.7 ಲಕ್ಷ ಕೋಟಿ ರೂ. ಒಟ್ಟಿಗೆ ಜಮಾ ಮಾಡಿದ ನಂತರ, ಆಗಿರುವ ಬಗ್ಗೆ ಡ್ಯಾರೆನ್ ಜೇಮ್ಸ್ ಬ್ಯಾಂಕ್‌ಗೆ ಮಾಹಿತಿ ನೀಡಿದರು. ಖಾತೆಯಲ್ಲಿ ಇಷ್ಟು ಹಣವನ್ನು ಎಲ್ಲಿಂದ ಜಮಾ ಮಾಡಲಾಗಿದೆ ಮತ್ತು ಕ್ರೆಡಿಟ್ ಮಾಡಿದವರನ್ನು ಪರಿಶೀಲಿಸುವಂತೆ ಅವರು ಬ್ಯಾಂಕಿಗೆ ಮನವಿ ಮಾಡಿದರು.


ಹಣ ಎಲ್ಲಿಂದ ಬಂತು ಎಂದು ಬ್ಯಾಂಕ್ ಹೇಳಲಿಲ್ಲ:
ಡ್ಯಾರೆನ್ ಜೇಮ್ಸ್ ಅವರ ದೂರಿನ ನಂತರ, ಬ್ಯಾಂಕ್ (Bank) ಈ ತಪ್ಪನ್ನು ತನಿಖೆ ಮಾಡಿತು, ಆದರೆ ಅವರ ಖಾತೆಯಲ್ಲಿ ಹಣ ಎಲ್ಲಿಂದ ಬಂತು ಎಂಬುದನ್ನು ಬಹಿರಂಗಪಡಿಸಲಿಲ್ಲ. ಕೆಲವು ದಿನಗಳ ನಂತರ, ಬ್ಯಾಂಕ್ ಈ ವಹಿವಾಟನ್ನು ಹಿಮ್ಮೆಟ್ಟಿಸಿತು ಮತ್ತು ಹಣವನ್ನು ಜೇಮ್ಸ್ ಖಾತೆಯಿಂದ ಹಿಂದೆ ಪಡೆದಿದೆ.


ಇದನ್ನೂ ಓದಿ-  World’s Oldest Bank: ಇದು ವಿಶ್ವದ ಅತ್ಯಂತ ಹಳೆಯ ಬ್ಯಾಂಕ್! ಜನರ ಬೆಲೆಬಾಳುವ ವಸ್ತುಗಳನ್ನು ಇಲ್ಲಿ ಇಡಲಾಗುತ್ತಿತ್ತಂತೆ


'ಖಾತೆಯಲ್ಲಿ ಹಲವು ಸೊನ್ನೆಗಳನ್ನು ನೋಡುವುದು ತುಂಬಾ ಖುಷಿ ತಂದಿದೆ':
ಹಣವನ್ನು ಬ್ಯಾಂಕ್ ಹಿಂಪಡೆಯುವ ಮೊದಲು, ಡ್ಯಾರೆನ್ ಜೇಮ್ಸ್ ಖಾತೆಯಲ್ಲಿನ ಕ್ರೆಡಿಟ್ ಹಣದ ಫೋಟೋ ತೆಗೆದಿದ್ದು 'ಖಾತೆಯಲ್ಲಿ ಹಲವು ಸೊನ್ನೆಗಳನ್ನು ಒಟ್ಟಿಗೆ ನೋಡುವುದು ಒಂದು ಉತ್ತಮ ಅನುಭವ' ಎಂದು ಹೇಳಿದ್ದಾರೆ.


'ಅಷ್ಟು ಹಣ ಬಂದಿದ್ದರೆ ಮಕ್ಕಳ ಆಸ್ಪತ್ರೆ ನಿರ್ಮಿಸಬಹುದಿತ್ತು':
ಡ್ಯಾರೆನ್ ಜೇಮ್ಸ್ ತನ್ನ ಖಾತೆಯಲ್ಲಿ ನಿಜವಾಗಿಯೂ ತುಂಬಾ ಹಣವನ್ನು ಹೊಂದಿದ್ದರೆ, ಅವರು ಮಕ್ಕಳಿಗಾಗಿ ಆಸ್ಪತ್ರೆಯನ್ನು ನಿರ್ಮಿಸುತ್ತಿದ್ದರಂತೆ, ಇದಲ್ಲದೆ ಅವರು ಅಗತ್ಯವಿರುವವರಿಗೆ ಸಹ ಸಹಾಯ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.