ನವದೆಹಲಿ: ಅಮೆರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಸೋದರ ಸೊಸೆ ಅಮೆರಿಕದ ವಕೀಲೇ ಮೀನಾ ಹ್ಯಾರಿಸ್ ಅವರು ತಮ್ಮ ವಿರುದ್ಧದ ಪ್ರತಿಭಟನೆಯ ಫೋಟೋವನ್ನು ಹಂಚಿಕೊಂಡಿದ್ದಾರೆ.ಅವರು ಭಾರತದಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿದ್ದಕ್ಕೆ ಅವರ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು. 


ಜಗತ್ತಿನ ಗಮನ ಸೆಳೆದ ಯಾರು ಈ ಗ್ರೇಟಾ ಥನ್ಬರ್ಗ್..!


Farmers Protest ಗೆ ಸಂಬಂಧಿಸಿದ ಟ್ವೀಟ್ ಲೈಕ್ ಮಾಡಿದ Twitter CEO ಜ್ಯಾಕ್ ಡಾರ್ಸೆ


COMMERCIAL BREAK
SCROLL TO CONTINUE READING

ಇದರಿಂದ ತೀವ್ರ ಹಿನ್ನಡೆಗೆ ಒಳಗಾದ ಕೇಂದ್ರ ಸರ್ಕಾರ ತದನಂತರ ಸೆಲೆಬ್ರಿಟಿಗಳು, ಕ್ರೀಡಾಪಟುಗಳು ಮತ್ತು ಇತರ ಸಾರ್ವಜನಿಕ ವ್ಯಕ್ತಿಗಳ ಪೋಸ್ಟ್‌ಗಳೊಂದಿಗೆ 'IndiaAgainstPropaganda' ಮತ್ತು 'IndiaTogether' ಎಂಬ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಪ್ರತಿಕ್ರಿಯಿಸಿತು.


ರಿಹಾನ್ನಾ, ಮೀನಾ ಹ್ಯಾರಿಸ್, ಗ್ರೆಟಾ ಥನ್‌ಬರ್ಗ್ (Greta Thunberg) ಮತ್ತು ಅನೇಕರು ಸಿಎನ್‌ಎನ್ ವರದಿಯನ್ನು ಹಂಚಿಕೊಂಡು ಪ್ರತಿಭಟನೆ ಕುರಿತಾಗಿ ಗಮನ ಸೆಳೆದಿದ್ದಾರೆ."ಭಾರತದ ಅಂತರ್ಜಾಲ ಸ್ಥಗಿತಗೊಳಿಸುವಿಕೆ ಮತ್ತು ರೈತ ಪ್ರತಿಭಟನಾಕಾರರ ವಿರುದ್ಧ ಅರೆಸೈನಿಕ ಹಿಂಸಾಚಾರದಿಂದ ನಾವು ಎಲ್ಲರೂ ಆಕ್ರೋಶಗೊಳ್ಳಬೇಕು" ಎಂದು ಮೀನಾ ಹ್ಯಾರಿಸ್ ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: Farmers Protest: ಗ್ರೇಟಾ ಥನ್‌ಬರ್ಗ್ ಮೇಲೆ ದೆಹಲಿ ಪೋಲಿಸರ ಪ್ರಕರಣ ದಾಖಲು


ದೆಹಲಿ ಪೊಲೀಸರು ನಿನ್ನೆ ಗ್ರೆಟಾ ಥನ್‌ಬರ್ಗ್ ಟ್ವೀಟ್ ಮಾಡಿದ 'ಟೂಲ್‌ಕಿಟ್' ಕುರಿತು ತನಿಖೆಯನ್ನು ಪ್ರಾರಂಭಿಸಿದ್ದಾರೆ."ನಾವು ಭಾರತ ಸರ್ಕಾರದ ವಿರುದ್ಧ ಅಸಮಾಧಾನವನ್ನು ಹರಡಿರುವ ವಿಚಾರವಾಗಿ ಪ್ರಕರಣ ದಾಖಲಿಸಿದ್ದೇವೆ.ಇದು ದೇಶದ್ರೋಹಕ್ಕೆ ಸಂಬಂಧಿಸಿದೆ ಮತ್ತು ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಆಧಾರದ ಮೇಲೆ ಗುಂಪುಗಳ ನಡುವೆ ಅಸಂಗತತೆ ಮತ್ತು ಅಂತಹ ಯೋಜನೆಗೆ ಆಕಾರ ನೀಡುವ ಕ್ರಿಮಿನಲ್ ಪಿತೂರಿ" ಎಂದು ದೆಹಲಿ ಪೊಲೀಸ್ ವಿಶೇಷ ಆಯುಕ್ತ ಪ್ರವೀರ್ ರಂಜನ್ ಹೇಳಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.