Fire: ಕಟ್ಟಡವೊಂದರಲ್ಲಿ ಬೆಂಕಿ ಅವಘಡ, 9 ಮಕ್ಕಳು ಸೇರಿದಂತೆ 19 ಮಂದಿ ಅಗ್ನಿಗಾಹುತಿ, 13 ಮಂದಿಯ ಸ್ಥಿತಿ ಚಿಂತಾಜನಕ
ಅಮೆರಿಕದ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ 9 ಮಕ್ಕಳು ಸೇರಿದಂತೆ 19 ಜನರು ಸಾವನ್ನಪ್ಪಿದ್ದಾರೆ. ನ್ಯೂಯಾರ್ಕ ಅಗ್ನಿಶಾಮಕ ಇಲಾಖೆಯ ಆಯುಕ್ತರು, ದೋಷಪೂರಿತ ವಿದ್ಯುತ್ ಹೀಟರ್ ಬೆಂಕಿಗೆ ಕಾರಣವಾಗಿರಬಹುದು ಎಂದಿದ್ದಾರೆ. ಈ ಅಪಘಾತದಲ್ಲಿ 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಾಷಿಂಗ್ಟನ್: ಅಮೆರಿಕದ ನ್ಯೂಯಾರ್ಕ್ ನಗರದ ಅಪಾರ್ಟ್‌ಮೆಂಟ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 9 ಮಕ್ಕಳು ಸೇರಿದಂತೆ 19 ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವರಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲೆಕ್ಟ್ರಿಕ್ ಹೀಟರ್ ದೋಷದಿಂದ ಭಾನುವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದ್ದು, ಅದು ಇದ್ದಕ್ಕಿದ್ದಂತೆ ಭೀಕರ ಸ್ವರೂಪ ಪಡೆದುಕೊಂಡಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಕ್ಷಣಾರ್ಧದಲ್ಲಿ ವ್ಯಾಪಕವಾಗಿ ಹರಡಿದ ಬೆಂಕಿ:
ಈ ಅಗ್ನಿ ಅನಾಹುತದಲ್ಲಿ 9 ಮಕ್ಕಳು ಸೇರಿದಂತೆ 19 ಜನರು ಸಾವನ್ನಪ್ಪಿದ್ದಾರೆ ಎಂದು ನ್ಯೂಯಾರ್ಕ್ (New York City) ಅಗ್ನಿಶಾಮಕ ಇಲಾಖೆ ಆಯುಕ್ತ ಡೇನಿಯಲ್ ನಿಗ್ರೊ ತಿಳಿಸಿದ್ದಾರೆ. ಇನ್ನೂ ಹಲವು ಮಂದಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಟ್ಟಡದ ಎರಡನೇ ಮತ್ತು ಮೂರನೇ ಮಹಡಿಯಲ್ಲಿರುವ ಡ್ಯೂಪ್ಲೆಕ್ಸ್‌ನಲ್ಲಿ ಭಾನುವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತು ಮತ್ತು ಕ್ಷಣಾರ್ಧದಲ್ಲಿ ಅದು ವ್ಯಾಪಕವಾಗಿ ಆವರಿಸಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ- Story Of Champagne: ಸಂಭ್ರಮಾಚರಣೆ ವೇಳೆ ಸಿಂಪಡಿಸಲಾಗುವ ಶಾಂಪೇನ್ ಬಾಟಲಿಯಲ್ಲೆನಿರುತ್ತದೆ? ತಿಳಿಯಲು ವರದಿ ಓದಿ
200 ಅಗ್ನಿಶಾಮಕ ದಳದವರಿಂದ ಬೆಂಕಿ ನಂದಿಸಲು ಹರಸಾಹಸ:
ಸುಮಾರು 200 ಅಗ್ನಿಶಾಮಕ ಸಿಬ್ಬಂದಿ (Firefighters) ಬೆಂಕಿಯನ್ನು ನಿಯಂತ್ರಿಸಲು ಬಹಳ ಹೊತ್ತು ಹರಸಾಹಸ ಪಡಬೇಕಾಯಿತು. ಅದೇ ಸಮಯದಲ್ಲಿ, ಮೇಯರ್ ಎರಿಕ್ ಆಡಮ್ಸ್ ಅವರು ನ್ಯೂಯಾರ್ಕ್ ನಗರದಲ್ಲಿ ನಾವು ಇಲ್ಲಿ ನೋಡಿದ ಮಾರಣಾಂತಿಕ ಬೆಂಕಿಯ ಅನಾಹುತಗಳಲ್ಲಿ (Fire Accident) ಇದು ಒಂದಾಗಿದೆ ಎಂದು ಘಟನೆಯನ್ನು ಬಣ್ಣಿಸಿದ್ದಾರೆ. ದೋಷಪೂರಿತ ವಿದ್ಯುತ್ ಉಪಕರಣಗಳಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ. ಆದರೆ ಇನ್ನೂ ವಿವರವಾದ ತನಿಖೆಗೆ ಆದೇಶಿಸಲಾಗಿದೆ ಎಂದು ಅವರು ಹೇಳಿದರು.
ಫೈರ್ ಅಲಾರ್ಮ್ ಗಮನಹರಿಸಿಲ್ಲ:
ಆಸ್ಪತ್ರೆಗೆ ದಾಖಲಾದ 13 ಜನರ ಸ್ಥಿತಿ ತುಂಬಾ ಚಿಂತಾಜನಕವಾಗಿದೆ ಎಂದು ಆಯುಕ್ತ ಡೇನಿಯಲ್ ನೀಗ್ರೋ ತಿಳಿಸಿದ್ದಾರೆ. ಈ ಬೆಂಕಿ ಅನಾಹುತದಲ್ಲಿ ಕನಿಷ್ಠ 60 ಜನರು ಗಾಯಗೊಂಡಿದ್ದಾರೆ. ಭಾನುವಾರ ಬೆಳಗ್ಗೆ ಕಟ್ಟಡದ ಅಗ್ನಿಶಾಮಕ ಅಲಾರ್ಮ್‌ನಿಂದ ಎಚ್ಚರಿಕೆ ಲಭ್ಯವಾದರೂ, ಯಾರೂ ಸಹ ಈ ಬಗ್ಗೆ ಸರಿಯಾಗಿ ಗಮನ ಹರಿಸಲಿಲ್ಲ. ಏಕೆಂದರೆ ಈ ಹಿಂದೆಯೂ ಹಲವು ಬಾರಿ ಫೈರ್ ಅಲಾರಾಂ ತಪ್ಪಾಗಿ ಬಾರಿಸುತ್ತಿತ್ತು. ಇದಾದ ನಂತರ ಅವರ ಫೋನ್‌ಗೆ ಬೆಂಕಿ ಅನಾಹುತದ ಬಗ್ಗೆ ಮಾಹಿತಿ ಬಂದಿದ್ದು, ನಂತರ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡಿರುವುದು ಮನವರಿಕೆಯಾಗಿದೆ ಎಂದು ಕಟ್ಟಡದಲ್ಲಿ ವಾಸಿಸುವ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ- 200 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಅಪರೂಪದ ಡೈನೋಸಾರ್ ಹೆಜ್ಜೆಗುರುತು ಪತ್ತೆ
ಹ್ಯಾಪಿ ಲ್ಯಾಂಡ್ ಬೆಂಕಿ ಅನಾಹುತದೊಂದಿಗೆ ಹೋಲಿಕೆ:
ಅದೇ ಸಮಯದಲ್ಲಿ, ನ್ಯೂಯಾರ್ಕ್ನ ಅಗ್ನಿಶಾಮಕ ಇಲಾಖೆಯ ಆಯುಕ್ತ ಡೇನಿಯಲ್ ನೀಗ್ರೋ ಅವರು ಬೆಂಕಿಯ ತೀವ್ರತೆಯನ್ನು ಹ್ಯಾಪಿ ಲ್ಯಾಂಡ್ ಸೋಶಿಯಲ್ ಕ್ಲಬ್ ಬೆಂಕಿ ಅನಾಹುತಕ್ಕೆ ಹೋಲಿಸಿದರು. ಇದರಲ್ಲಿ 87 ಜನರು ಸಾವನ್ನಪ್ಪಿದರು. 1990 ರಲ್ಲಿ ನಡೆದ ಈ ಅಪಘಾತದಲ್ಲಿ, ಒಬ್ಬ ವ್ಯಕ್ತಿ ತನ್ನ ಮಾಜಿ ಗೆಳತಿಯೊಂದಿಗೆ ಜಗಳವಾಡಿದ ನಂತರ ಕಟ್ಟಡಕ್ಕೆ ಬೆಂಕಿ ಹಚ್ಚಿ ಕ್ಲಬ್‌ನಿಂದ ಹೊರಹಾಕಲ್ಪಟ್ಟನು. ಕೆಲವು ದಿನಗಳ ಹಿಂದೆ ಫಿಲಡೆಲ್ಫಿಯಾದಲ್ಲಿ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಎಂಟು ಮಕ್ಕಳು ಸೇರಿದಂತೆ 12 ಜನರು ಸಾವನ್ನಪ್ಪಿದ್ದರು. ಇದಲ್ಲದೇ, ವಾರದ ಹಿಂದೆ ಅಮೆರಿಕದ ಕೊಲೊರಾಡೊದ ಡೆನ್ವರ್ ನಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡು ಸುಮಾರು 580 ಮನೆಗಳು, ಹೊಟೇಲ್ ಹಾಗೂ ಶಾಪಿಂಗ್ ಸೆಂಟರ್ ಬೆಂಕಿಗೆ ಆಹುತಿಯಾಗಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.