Necrotizing Fasciitis : ಕೋವಿಡ್ 19 ಸಾಂಕ್ರಾಮಿಕದ ನಂತರ ಜಪಾನ್‌ನಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಸೋಂಕು ಪತ್ತೆಯಾಗಿದೆ. ಈ ಸೋಂಕಿನ ಪ್ರಕರಣಗಳು ಕ್ರಮೇಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಆತಂಕ ಹುಟ್ಟಿಸಿದೆ. ಈ ಒಮ್ಮೆ ಸೋಂಕು ತಗುಲಿದರೆ 48 ಗಂಟೆಗಳಲ್ಲಿ ಸಾಯಬಹುದು. ಬನ್ನಿ ಈ ರೋಗದ ಲಕ್ಷಣಗಳು ಯಾವುವು, ಅದರ ನಿಯಂತ್ರಣ ಹೇಗೆ ಅಂತ ತಿಳಿಯೋಣ..


COMMERCIAL BREAK
SCROLL TO CONTINUE READING

ಅತ್ಯಂತ ಅಪರೂಪದ ಫ್ಲಶ್-ತಿನ್ನುವ ಬ್ಯಾಕ್ಟೀರಿಯಾ ಜಪಾನ್‌ನಲ್ಲಿ ಪತ್ತೆಯಾಗಿದೆ. ದಿನದಿಂದ ದಿನಕ್ಕೆ ಈ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಆತಂಕ ಸೃಷ್ಟಿಸಿದೆ. ಈ ಮಾರಕ ಬ್ಯಾಕ್ಟೀರಿಯಾಗಳು ಸ್ಪೆಕ್ಟ್ರೋಕೊಕಲ್ ಟಾಕ್ಸಿಕ್ ಶಾಕ್ ಸಿಂಡ್ರೋಮ್ ಅನ್ನು ಉಂಟುಮಾಡುತ್ತವೆ. ಇದು ಯಾವುದೇ ಸಮಯದಲ್ಲಿ ಮಾರಕವಾಗಬಹುದು. ಸೋಂಕು ತಗುಲಿದ 48 ಗಂಟೆಗಳಲ್ಲಿ ರೋಗಿಯು ಸಾಯಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. 


ಇದನ್ನೂ ಓದಿ:ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನ ಬೆನ್ನಲ್ಲೇ ಕಿಚ್ಚ ಸುದೀಪ್ ಹೇಳಿಕೆ ವೈರಲ್!


ಈ ವರ್ಷ 2024 ರಿಂದ ಜೂನ್ ವರೆಗೆ 977 STSS ಪ್ರಕರಣಗಳು ಜಪಾನ್‌ನಲ್ಲಿ ವರದಿಯಾಗಿವೆ. ಕಳೆದ ವರ್ಷ 941 ಪ್ರಕರಣಗಳು ಬೆಳಕಿಗೆ ಬಂದಿದ್ದವು. ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳ ಸಂಸ್ಥೆಯ ಪ್ರಕಾರ, ಇದೇ ಪ್ರಮಾಣದಲ್ಲಿ ಪ್ರಕರಣಗಳು ಹೆಚ್ಚಾದರೆ, ಈ ವರ್ಷ ಅದು 2500 ಪ್ರಕರಣಗಳನ್ನು ತಲುಪಬಹುದು. ಸಾವಿನ ಪ್ರಮಾಣ 30 ಪ್ರತಿಶತ ಹೆಚ್ಚಾಗಬಹುದು ಎನ್ನಲಾಗಿದೆ.


ಫ್ಲಶ್ ತಿನ್ನುವ ಬ್ಯಾಕ್ಟೀರಿಯಾದ ಸೋಂಕಿನ ಲಕ್ಷಣಗಳು : ಸೋಂಕು ಆರಂಭದಲ್ಲಿ ಜ್ವರ ತರಹದ ಲಕ್ಷಣಗಳನ್ನು ಉಂಟುಮಾಡುತ್ತದೆ. ಇದು ಜ್ವರ, ಸ್ನಾಯು ನೋವು ಮತ್ತು ಗಂಟಲಿನ ನೋವು ಒಳಗೊಂಡಿರುತ್ತದೆ. ಅದರ ನಂತರ ರೋಗಲಕ್ಷಣಗಳು ಉಲ್ಬಣಗೊಳ್ಳುತ್ತವೆ. ತೀವ್ರ ಜ್ವರ, ರಕ್ತದೊತ್ತಡ ಕುಸಿತ, ಚರ್ಮ ಕೆಂಪಾಗುವುದು ಕಂಡುಬರುತ್ತದೆ. ಇದುವರೆಗೂ ಈ ಬ್ಯಾಕ್ಟೀರಿಯಾದ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ. ಇದನ್ನು ತಡೆಗಟ್ಟಲು, ನಿಮ್ಮ ಕೈಗಳನ್ನು ನಿಯಮಿತವಾಗಿ ತೊಳೆಯುವುದು ಮತ್ತು ಯಾವುದೇ ಗಾಯವಿದ್ದರೆ ಅವುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಯಾವುದೇ ಇತರ ಲಕ್ಷಣಗಳು ಕಂಡುಬಂದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.