ಮಿಚಿಗನ್: ಸಾಮಾನ್ಯವಾಗಿ ಎಲ್ಲಾ ಕಂಪನಿಗಳಲ್ಲೂ ಹಬ್ಬದ ಪ್ರಯುಕ್ತ ನೌಕರರಿಗೆ ತಿಂಗಳ ವೇತನದ ಮೂಲ ವೇತನ ಅಥವಾ ಕೆಲವು ಉಡುಗೊರೆಗಳನ್ನು ನೀಡಲಾಗುತ್ತದೆ. ಆದರೆ ಅಮೆರಿಕಾದ ಈ ಕಂಪನಿ ಪ್ರತಿ ನೌಕರನಿಗೆ ನೀಡಿರುವ ಬೋನಸ್ ಮೊತ್ತ ಕೇಳಿದರೆ ಶಾಕ್ ಆಗುವುದ ಖಂಡಿತ!


COMMERCIAL BREAK
SCROLL TO CONTINUE READING

ಅಮೇರಿಕಾದ ಮಿಚಿಗನ್ ನಲ್ಲಿರುವ 1946ರಲ್ಲಿ ಸ್ಥಾಪನೆಯಾದ ಕರಕುಶಲ ಮತ್ತು ಹೂವಿನ ಕಂಪೆನಿ ಫ್ಲೋರಾಕ್ರಾಫ್ಟ್ ತನ್ನ 200 ಉದ್ಯೋಗಿಗಳಿಗೆ ಕ್ರಿಸ್‌ಮಸ್‌ ಉಡುಗೊರೆಯಾಗಿ 4 ಮಿಲಿಯನ್ ಡಾಲರ್ ಬೋನಸ್ ನೀಡಿದೆ. ಇದರಿಂದ ಪ್ರತಿ ನೌಕರನಿಗೆ ತಲಾ 20,000 ಡಾಲರ್(ಸುಮಾರು 14 ಲಕ್ಷ ರೂ) ಬೋನಸ್ ದೊರೆತಂತಾಗಿದೆ. 


ಕಳೆದ 45 ವರ್ಷಗಳಿಂದ ಕ್ರಿಸ್ಮಸ್ ಸಂದರ್ಭದಲ್ಲಿ ಪ್ರತಿ ವರ್ಷ ನೌಕರರಿಗೆ ಬೋನಸ್ ನೀಡುವ ಪದ್ಧತಿಯನ್ನು ಮುಂದುವರೆಸಿಕೊಂಡು ಬಂದಿರುವ ಫ್ಲೋರಾಕ್ರಾಫ್ಟ್ ಕಂಪನಿ ಈ ವರ್ಷವೂ ನೌಕರರಿಗೆ ಬೋನಸ್ ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲಿಯೋ ಶ್ಕೊನೆರ್, ನೌಕರರ ಕೆಲಸದ ಅವಧಿಯನ್ನು ಆಧರಿಸಿ ಕರ್ತವ್ಯನಿಷ್ಠೆಯಿಂದ ದುಡಿಯುವ ನೌಕರಿಗೆ ಉತ್ತೇಜನದ ರೂಪದಲ್ಲಿ ಬೋನಸ್ ನೀಡಲಾಗುತ್ತದೆ. ಈ ಮೂಲಕ ನೌಕರರು ಮತ್ತಷ್ಟು ಉತ್ಸಾಹದಿಂದ ಕೆಲಸ ಮಾಡುತ್ತಾರೆ ಎಂದು ಹೇಳಿದ್ದಾರೆ.