ನವದೆಹಲಿ: ಕಳೆದ ವಾರ ಇಂಗ್ಲೆಂಡ್‌ನಲ್ಲಿ ಅಫ್ಘಾನಿಸ್ತಾನದೊಂದಿಗೆ ನಡೆದ ವಿಶ್ವಕಪ್ ಪಂದ್ಯದ ಸಂದರ್ಭದಲ್ಲಿ ಪಾಕಿಸ್ತಾನ ವಿರೋಧಿ ಬ್ಯಾನರ್‌ಗಳನ್ನು ಪ್ರದರ್ಶಿಸಿ ಪಾಕ್ ತಂಡವನ್ನು ಅಗೌರವಗೊಳಿಸಿದ ಸಂಗತಿಯನ್ನು ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ ಪ್ರಶ್ನಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ವಿಚಾರವಾಗಿ ಖುರೇಷಿ ಗುರುವಾರ ಬ್ರಿಟಿಷ್ ಹೈ ಕಮಿಷನರ್ ಥಾಮಸ್ ಡ್ರೂ ಅವರೊಂದಿಗೆ ಚರ್ಚಿಸಿದ್ದಾರೆ. ಇದಲ್ಲದೆ ಈ ಸಭೆಯಲ್ಲಿ, ದ್ವಿಪಕ್ಷೀಯ ಸಂಬಂಧಗಳು, ಪ್ರದೇಶದ ಭದ್ರತಾ ಪರಿಸ್ಥಿತಿ ಮತ್ತು ಪರಸ್ಪರ ಆಸಕ್ತಿ ವಿಷಯಗಳ ಬಗ್ಗೆ ಚರ್ಚಿಸಲಾಯಿತು ಎನ್ನಲಾಗಿದೆ ಎಂದು ರೇಡಿಯೋ ಪಾಕಿಸ್ತಾನ ವರದಿ ಮಾಡಿದೆ.


ಕಳೆದ ವಾರ ಲೀಡ್ಸ್ ನಲ್ಲಿ  ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ ನಡೆದ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ವಿರೋಧಿ ಬ್ಯಾನರ್‌ಗಳನ್ನು ಪ್ರದರ್ಶಿಸಿ ಮತ್ತು ಪಾಕಿಸ್ತಾನದ ರಾಷ್ಟ್ರೀಯ ಕ್ರಿಕೆಟ್ ತಂಡದ ಬಗ್ಗೆ ಅಗೌರವ ತೋರಿರುವ ವಿಷಯವನ್ನು ವಿದೇಶಾಂಗ ಸಚಿವರು ಎತ್ತಿದ್ದಾರೆ ಎಂದು ವರದಿ ಹೇಳಿದೆ. ಪಾಕಿಸ್ತಾನ ವಿರೋಧಿ ಪ್ರಚಾರಕ್ಕಾಗಿ ಕ್ರೀಡಾಂಗಣವನ್ನು ಬಳಸುವುದು ನಿಜಕ್ಕೂ ಕಳವಳದ ಸಂಗತಿ ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ.


ಜೂನ್ 29 ರಂದು ಲೀಡ್ಸ್ ನಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ ನಡೆದ ಐಸಿಸಿ ಕ್ರಿಕೆಟ್ ವಿಶ್ವಕಪ್ ಪಂದ್ಯದ ವೇಳೆ ಪ್ರತಿಸ್ಪರ್ಧಿ ಬೆಂಬಲಿಗರ ನಡುವೆ ಹಿಂಸಾತ್ಮಕ ಘರ್ಷಣೆ ನಡೆದಿದ್ದರಿಂದ ಪೊಲೀಸರನ್ನು ಕರೆಯಬೇಕಾಯಿತು. ಈ ಪಂದ್ಯದಲ್ಲಿ ಪಾಕಿಸ್ತಾನ ಮೂರು ವಿಕೆಟ್‌ಗಳಿಂದ ಜಯಗಳಿಸಿತು. ಈ ಘಟನೆಯ ಬಗ್ಗೆ ಪಶ್ಚಿಮ ಯಾರ್ಕ್‌ಷೈರ್ ಪೊಲೀಸರು ತನಿಖೆ ಆರಂಭಿಸಿ ಮೂವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.