ನವದೆಹಲಿ: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಸ್ಥಿತಿ ಚಿಂತಾಜನಕವಾಗಿದೆ, ಈಗ ಅವರು ಚೇತರಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ಅವರ ಕುಟುಂಬ ತಿಳಿಸಿದೆ.


COMMERCIAL BREAK
SCROLL TO CONTINUE READING

ಈಗ ಅವರ ಆರೋಗ್ಯದ ಕುರಿತಾದ ಬೆಳವಣಿಗೆಯನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಅವರ ಕುಟುಂಬವು 'ಮುಷರಫ್ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಈಗ ಅವರು ವೆಂಟಿಲೇಟರ್‌ನಲ್ಲಿದ್ದಾರೆ. ಕಳೆದ 3 ವಾರಗಳಿಂದ ಅವರ ಅನಾರೋಗ್ಯದ (ಅಮಿಲಾಯ್ಡೋಸಿಸ್) ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈಗ ಅವರ ಅಂಗಗಳು ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಸ್ಥಿತಿ ಗಂಭೀರವಾಗಿದೆ. ಆದ್ದರಿಂದ ಅವರ ದೈನಂದಿನ ಜೀವನ ಸುಲಭವಾಗುವಂತೆ ಎಲ್ಲರೂ ಪ್ರಾರ್ಥಿಸಿ" ಎಂದು ಟ್ವೀಟ್ ಮಾಡಿದೆ.


ಇದನ್ನೂ ಓದಿ: Rajya Sabha Elections 2022: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ  


ಈ ಹಿಂದೆ, ಕೆಲವು ಪಾಕಿಸ್ತಾನಿ ಮಾಧ್ಯಮಗಳು ಮುಷರಫ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ವರದಿ ಮಾಡಿದ್ದವು, ಆದರೆ ತದಂತರ ಆ ವರದಿಗಳನ್ನು ಅಲ್ಲಗಳೆಯಲಾಯಿತು.ಈಗ ಮುಷರಫ್ ಅವರ ಆಪ್ತ ಸಹಾಯಕ ಮತ್ತು ಮಾಜಿ ಮಾಹಿತಿ ಸಚಿವ ಫವಾದ್ ಚೌಧರಿ ಅವರು ಮುಷರಫ್ ಆರೋಗ್ಯದ ಬಗ್ಗೆ ನವೀಕರಣ ನೀಡಿ ಅವರು ಯುಎಇಯ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಬೆಂಬಲದಲ್ಲಿದ್ದಾರೆ ಎಂದು ಹೇಳಿದ್ದಾರೆ. 'ಈಗ ಮುಷರಫ್ ಅವರು ವೆಂಟಿಲೇಟರ್‌ನಲ್ಲಿರುವುದರಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.ನಾನು ದುಬೈನಲ್ಲಿರುವ ಜನರಲ್ ಮುಷರಫ್ ಅವರ ಮಗ ಬಿಲಾಲ್ ಅವರೊಂದಿಗೆ ಮಾತನಾಡಿದ್ದೇನೆ ಅವರು (ಮುಷರಫ್) ವೆಂಟಿಲೇಟರ್‌ನಲ್ಲಿದ್ದಾರೆ ಎಂದು ಖಚಿತಪಡಿಸಿದ್ದಾರೆ" ಎಂದು ಚೌಧರಿ ಹೇಳಿದರು.


ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೊಂದು ಹೀನ ಕೃತ್ಯ: ಮದುವೆಗೆ ನಿರಾಕರಿಸಿದ ಮಹಿಳೆ ಮೇಲೆ ಆ್ಯಸಿಡ್ ದಾಳಿ


ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಹತ್ಯೆ ಪ್ರಕರಣ ಮತ್ತು ರೆಡ್ ಮಸೀದಿಯ ಧರ್ಮಗುರುಗಳ ಹತ್ಯೆ ಪ್ರಕರಣದಲ್ಲಿ ಮುಷರಫ್ ಅವರನ್ನು ಪರಾರಿಯಾಗಿದ್ದಾರೆ ಎಂದು ಘೋಷಿಸಲಾಗಿದೆ.2016 ರಿಂದ ಅವರು ದುಬೈನಲ್ಲಿ ವಾಸಿಸುತ್ತಿದ್ದಾರೆ, 2007 ರಲ್ಲಿ ಸಂವಿಧಾನವನ್ನು ಅಮಾನತುಗೊಳಿಸಿದ್ದಕ್ಕಾಗಿ ದೇಶದ್ರೋಹದ ಪ್ರಕರಣವನ್ನು ಎದುರಿಸುತ್ತಿದ್ದಾರೆ.ಮಾರ್ಚ್ 2016 ರಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ದುಬೈಗೆ ತೆರಳಿದ ನಂತರ ಅವರು ವಾಪಸ್ಸಾಗದೆ ಅಲ್ಲೇ ಉಳಿದಿದ್ದಾರೆ. 78 ವರ್ಷದ ಜನರಲ್ ಮುಷರಫ್ ಅವರು 1999 ರಿಂದ 2008 ರವರೆಗೆ ಪಾಕಿಸ್ತಾನವನ್ನು ಮುನ್ನೆಡಿಸಿದ್ದರು.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.